ಧರ್ಮತ್ತಡ್ಕ: ನವೆಂಬರ್ 7 ರಿಂದ 10ರ ತನಕ ಧರ್ಮತ್ತಡ್ಕದ ವಿದ್ಯಾಸಂಸ್ಥೆಗಳಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವಕ್ಕೆ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ಹವ್ಯಕ ವಲಯವು ನೀಡಿದ ದೇಣಿಗೆ ಹಾಗೂ ಕಾರ್ಯಕರ್ತರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಲೋತ್ಸವ ಸಂಘಟಕ ಸಮಿತಿಯವರು ಸ್ಮರಣಿಕೆ ನೀಡಿ ಪುರಸ್ಕರಿಸಿದರು.
ಗುಂಪೆ ಹವ್ಯಕ ವಲಯ ಶಿಷ್ಯ ಬಾಂಧವರ ಪರವಾಗಿ ವಲಯಾಧ್ಯಕ್ಷ ಶಂಭು ಹೆಬ್ಬಾರ್ ಶ್ರಾವಣಕೆರೆ, ನಿಕಟಪೂರ್ವ ಅಧ್ಯಕ್ಷರಾದ ರಾಮ ಭಟ್ ಅಮ್ಮಂಕಲ್ಲು ಇವರು ಸ್ಮರಣಿಕೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಕೋಶಾಧ್ಯಕ್ಷರಾದ ರಾಜಗೋಪಾಲ ಅಮ್ಮಂಕಲ್ಲು ಸಹಿತ ವಲಯದ ಇತರ ಪದಾಧಿಕಾರಿಗಳು ಮತ್ತು ಶಿಷ್ಯಬಾಂಧವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ