ಸವಿರುಚಿ: ಗೆಣಸಲೆ- ಕಾಯಿ ಗೆಣಸಲೆ ವೈವಿಧ್ಯ

Upayuktha
0

ಚಿತ್ರದಲ್ಲಿ- ಸವಿತಾ ಕೊಡಂದೂರ್ ಅವರು ಗೆಣಸಲೆಯನ್ನು ತಯಾರಿಸುತ್ತಿರುವ ನೋಟ.


ಸಾಲು ಸಾಲು ಚೌತಿ ನವರಾತ್ರಿ ದೀಪಾವಳಿ ಹಬ್ಬ ಹರಿದಿನ ಬಂದಾಗಲೇ ಸಿಹಿತಿಂಡಿಗಳ ಘಮ ಘಮ ಹಳ್ಳಿ ರೆಸಿಪಿಗಳು ಹಲಸಿನ ಹಣ್ಣಾಗುವಾಗ ಗೆಣಸಲೆ ಸವಿರುಚಿ ಬಿಟ್ಟಿರಲಾಗದೆ ಇಲ್ಲದಾಗ ಮಾಡುವ ಕಾಯಿ (ತೆಂಗಿನ) ಗೆಣಸಲೆಗೆ ರುಚಿ ತಿಂದವನಿಗೆ ಗೊತ್ತು, ಇದು ಸಿಕ್ಕಾಪಟ್ಟೆ ತುಂಬಾ ಟೇಸ್ಟಿ ಎಂದವರು ಹೇಳುತ್ತಾರೆ. ಬಾಳೆ ಎಲೆಯಲ್ಲಿ ಮಾಡುವ ಈ ತಿಂಡಿಗೆ ನಮ್ಮ ಈಗಿನ ಪಿಜ್ಜಾ- ಬರ್ಗರ್ ಏನೂ ಅಲ್ಲ. ಬಾಳೆಲೆಯ ಊಟದಲ್ಲಿರುವ ಮಜಾನೇ ಬೇರೆ ಮಾಡುವ ಹಾಗೆ ಬಾಳೆಎಲೆಯಲ್ಲಿ ಮಾಡುವ ಕಡುಬು, ಗಟ್ಟಿ, ಪತ್ರೊಡೆ, ಮೂಡೇ ಇಡ್ಲಿ, ಒಂದಿಲ್ಲೊಂದು ವೈವಿಧ್ಯ ತಿಂಡಿಗಳು. ಇದು ಬಲು ಫೇವರೆಟ್, ನೋಡಿಲ್ಲ ಇಂತ ರುಚಿ...! ನಮ್ಮ ಹಳ್ಳಿಯ ಸವಿರುಚಿಯಲ್ಲಿ ರೋಗನಿರೋಧಕ ಶಕ್ತಿ ಬೆಳೆಯುತ್ತದೆ ಹೀಗೆ ಅರಿಶಿನ ಎಲೆಯಲ್ಲಿ ಕಾಯಿ ಗೆಣಸಲೆ ಮಾಡುತ್ತಾರೆ.


ಬೇಕಾಗುವ ಸಾಮಗ್ರಿಗಳು:- ಬೆಳ್ತಿಗೆ ಅಕ್ಕಿ 1 ಕಪ್, ಹಲಸಿನ ಹಣ್ಣಿನ ತುಣುಕುಗಳು 1 ಕಪ್, ಅಥವಾ ತೆಂಗಿನಕಾಯಿ ತುರಿ 1 ಕಪ್, ಬೆಲ್ಲ 1 ಕಪ್, ಏಲಕ್ಕಿ, ಉಪ್ಪು ರುಚಿಗೆ ತಕ್ಕಷ್ಟು, ಬೇಕಿದ್ದರೆ ಕಾಳುಮೆಣಸು.


ತಯಾರಿಸುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಒಂದು ಗಂಟೆ ನೆನೆಸಿ ಸ್ವಲ್ಪ ಗಟ್ಟಿಯಾಗಿ ರುಬ್ಬಿ ಬಾಳೆಲೆಯನ್ನು ಬಾಡಿಸಿ ಅದರಲ್ಲಿ ಅಕ್ಕಿ ಹಿಟ್ಟನ್ನು ದೋಸೆಯಂತೆ ಆಕಾರದಲ್ಲಿ ಹರಡಿ ನಂತರ ಹಲಸಿನ ಹಣ್ಣನ್ನು ಸಣ್ಣ ತುಣುಕುಗಳನ್ನು ಆಗಿ ಮಾಡಿ ತೆಂಗಿನಕಾಯಿ ತುರಿ ಬೆಲ್ಲ (ಪಾಕ ಮಾಡಿ) ಏಲಕ್ಕಿ ಉಪ್ಪು ರುಚಿಗೆ ತಕ್ಕಷ್ಟು ಸೇರಿಸಿ ದೋಸೆಯಂತೆ ಹರಡಿದೆ. ಅರ್ಧಭಾಗಕ್ಕೆ ಸ್ವಲ್ಪ ಸ್ವಲ್ಪ ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಅಥವಾ ಹಬೆಯಲ್ಲಿ ಬೇಯಿಸಿ. ಹಲಸಿನಹಣ್ಣು ಇಲ್ಲದಾಗ ತೆಂಗಿನ ಕಾಯಿತುರಿ ಮಾಡಬಹುದು. ಒಂದು ಚಮಚ ಹಸುವಿನ ತುಪ್ಪ ಹಾಕಿ, ಸವಿಯಲು ಸಿದ್ಧ. ಇದು ಬೊಂಬಾಟ್ ವಾ ಸೂಪರ್, ಇಂದು ಸವಿನೆನಪಿನ ಸಾಲಿನಲ್ಲಿ ಬಂದು ಸೇರಿಹೋಗಿದೆ.



- ಚಿತ್ರ, ಬರಹ:- ಸೌಮ್ಯ ಪೆರ್ನಾಜೆ, ಪುತ್ತೂರು


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top