ಮಂಗಳೂರು: ಖ್ಯಾತ ಅಂಣಕಾರ, ಸ್ವಚ್ಛ ಭಾಷೆ ಅಭಿಯಾನದ ರೂವಾರಿ, ಕಾರ್ಕಳ ಮೂಲದವರಾಗಿದ್ದು ಪ್ರಸ್ತುತ ಅಮೆರಿಕದ ವಾಷಿಂಗ್ಟನ್ ನಿವಾಸಿಯಾಗಿರುವ ಶ್ರೀವತ್ಸ ಜೋಷಿ ಅವರ ತಿಳಿರು ತೋರಣ ಅಂಕಣದ ಮೂರು ಹೊಸ ಸಂಕಲನ ಕೃತಿಗಳು ನವೆಂಬರ್ 5ರಂದು ಬೆಳಗ್ಗೆ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಅಂದು ಬಿಡಗಡೆಯಾಗಲಿರುವ ಪುಸ್ತಕಗಳು: ಕಸವಿಲ್ಲದ ಕನ್ನಡಕ್ಕೊಂದು ಕೈಪಿಡಿ- ಸ್ವಚ್ಛ ಭಾಷೆ ಅಭಿಯಾನ ಮತ್ತು ತಿಳಿರು ತೋರಣದ ಪರ್ಣಮಾಲೆ 6, 7 ಮತ್ತು 8 ಸಂಕಲನಗಳು.
ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದವರು ಈ ಎಲ್ಲ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ, ಪತ್ರಕರ್ತ ಗಿರೀಶ್ ಹತ್ವಾರ್ (ಜೋಗಿ) ಮತ್ತು ಹನಿಗವನಗಳ ಕಣಜ ಡುಂಡಿರಾಜ್ ಅವರು ಭಾಗವಹಿಸಲಿದ್ದಾರೆ. ವಿಶ್ವವಾಣಿ ಪತ್ರಿಕೆಯ ಅಂಕಣಕಾರ್ತಿ ಹಾಗೂ ಕ್ಲಬ್‌ಹೌಸ್ ನಿರೂಪಕಿ ರೂಪಾ ಗುರುರಾಜ್ ಅವರ ಸೊಗಸಾದ ನಿರೂಪಣೆ ಇರಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ