ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ ಡಿ. ವೀರೇಂದ್ರ ಹೆಗ್ಗಡೆ

Upayuktha
0

ಪುನೀತ್ ರಾಜಕುಮಾರರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗುವ ಈ ಸಂದರ್ಭದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರು ಅವರನ್ನು ಸ್ಮರಿಸಿದರು.


''ಅವರ ತಂದೆ ಡಾ. ರಾಜಕುಮಾರ್ ಅವರು ನನಗೆ ಅತ್ಯಂತ ಪ್ರೀತಿಯವರು, ಕ್ಷೇತ್ರದ ಬಗ್ಗೆ ಅಪಾರವಾದ ಗೌರವ ಇದ್ದವರು. ಅವರ ಪುತ್ರನಾಗಿದ್ದ ಪುನೀತ್ ತನ್ನ ವೈಯಕ್ತಿಕ ವ್ಯಕ್ತಿತ್ವ, ನಟನೆ, ಸ್ನೇಹ ಸ್ವಭಾವದಿಂದಾಗಿ ಎಲ್ಲರ ಪ್ರೀತಿ ಪಾತ್ರರಾಗಿ, ಎಲ್ಲರಿಗೂ ಅಚ್ಚು ಮೆಚ್ಚಾಗಿ ಬೆಳೆದವರು. ಅವರ ಸಾವು ಇನ್ನೂ ನಮಗೆ ಅರಗಿಸಿಕೊಳ್ಳಲಿಕ್ಕೆ ಆಗಲಿಲ್ಲ. ಪುನೀತನನ್ನು ನಾನು ಸ್ಮರಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತ ಕರ್ನಾಟಕ ರತ್ನ ಪ್ರಶಸ್ತಿಗೆ ಪುನೀತ್ ಅರ್ಹರಾದ ವ್ಯಕ್ತಿ. ನಾವು ಕೂಡ ಕನ್ನಡದ ಸೇವೆ, ಕನ್ನಡ ಕಲಾರಂಗದ ಸೇವೆ ಮಾಡಿದರೆ, ಸ್ನೇಹ ಪರವಾಗಿದ್ದರೆ ಹೇಗೆ ಜನ ಮತ್ತು ಸರ್ಕಾರ ನಮ್ಮನ್ನು ಸ್ಮರಿಸಿಕೊಳ್ಳುತ್ತದೆ ಎಂಬುದಕ್ಕೆ ಇದು ಮಾದರಿಯಾಗಿದೆ. ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾದ ಪುನೀತ್ ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆತನ ಪುಣ್ಯದಿಂದ ಮತ್ತಷ್ಟು ಕಲಾವಿದರು ಬೆಳೆದು ಬರಲಿ" ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top