ವಿವಿ ಕಾಲೇಜು: ಅಖಿಲ ಭಾರತೀಯ ಹಿಂದಿ ಮಹಾಸಭಾ ರಾಷ್ಟ್ರೀಯ ಸಂಘಟನಾ ಮಹಾಮಂತ್ರಿ ಅಭಿಮತ
ಮಂಗಳೂರು: ಮಾತೃಭಾಷೆಯ ಉದಯ ರಾಷ್ಟ್ರಭಾಷೆಯ ವಿಕಾಸಕ್ಕೆ ಕಾರಣವಾಗಿದೆ. ಪ್ರತಿಯೊಂದು ಭಾಷೆಯ ಜೊತೆಗಿನ ಸಮನ್ವಯ ದೇಶದ ಏಕತೆಗೆ ಸಹಾಯವಾಗಿದೆ. ಭಾಷೆಯ ವಿಕಾಸದ ಕುರಿತು ವಿಧ್ಯಾರ್ಥಿಗಳು ಜ್ಞಾನ ಬೆಳೆಸಿಕೊಳ್ಳಬೇಕು, ಅಖಿಲ ಭಾರತೀಯ ಹಿಂದಿ ಮಹಾಸಭಾದ ರಾಷ್ಟ್ರೀಯ ಸಂಘಟನಾ ಮಹಾಮಂತ್ರಿ ಅಮಿತ್ ರಜಕ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಹಿಂದಿ ವಿಭಾಗದ ವತಿಯಿಂದ ಶುಕ್ರವಾರ ಬಿಬಿಎ ತರಗತಿಯಲ್ಲಿ ಆಯೋಜಿಸಲಾಗಿದ್ದ “ಹಿಂದಿ ವಿಕಾಸದಲ್ಲಿ ಅನ್ಯ ಭಾಷೆಗಳ ಯೋಗದಾನ" ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ನಾಗರತ್ನ ಎನ್.ರಾವ್, ಹಿಂದಿ ವಿಕಾಸದಿಂದ ಆಗಿರುವ ಲಾಭದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ವಿಭಾಗದ ವಿದ್ಯಾರ್ಥಿಗಳಿಂದ ಸ್ವರಚಿತ ಕವನ ವಾಚನ ನಡೆಯಿತು. ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಹಿಂದಿ ಸಂಘದ ಉಪಾಧ್ಯಕ್ಷೆ ಡಾ.ಸುಮಾ ಟಿ ರೋಡನ್ನವರ್ ಸ್ವಾಗತಿಸಿದರು. ದ್ವಿತೀಯ ಎಂ. ಎ ವಿದ್ಯಾರ್ಥಿನಿಯರಾದ ಕುಮಾರಿ ನಿಖಿತಾ ನಿರೂಪಿಸಿ, ಕುಮಾರಿ ಲವಿತಾ ಧನ್ಯವಾದ ಸಮರ್ಪಿಸಿದರು. ಡಾ.ಸಂಜೀವ್ ಸರ್, ಡಾ.ಗುರುದತ್, ಡಾ.ನಾಗರತ್ನ ಶೆಟ್ಟಿ, ಡಾ.ಜ್ಯೋತಿ, ಹಿಂದಿ ಸಂಘದ ಕಾರ್ಯದರ್ಶಿ ಯಶಸ್ವಿನಿ, ಸಹ ಕಾರ್ಯದರ್ಶಿ ಅಂಜಲಿ, ರಶ್ಮಿ ಹಾಗೂ ವಿವಿಧ ವಿಭಾಗಗಳ ವಿಧ್ಯಾರ್ಥಿಗಳು ಭಾಗವಹಿಸಿದ್ದರು.