|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿಜಾಬ್- ಕೇಸರಿ ಶಾಲು: 36 ವರ್ಷ ಹಿಂದೆ ಇಂತಹದೇ ಘಟನೆಯನ್ನು ನಿಭಾಯಿಸಿದ ಬಗೆ ಹೇಗೆ ಗೊತ್ತೇ...?

ಹಿಜಾಬ್- ಕೇಸರಿ ಶಾಲು: 36 ವರ್ಷ ಹಿಂದೆ ಇಂತಹದೇ ಘಟನೆಯನ್ನು ನಿಭಾಯಿಸಿದ ಬಗೆ ಹೇಗೆ ಗೊತ್ತೇ...?

ಪ್ರಾತಿನಿಧಿಕ ಚಿತ್ರ


ಇದು ಸುಮಾರು 36 ವರ್ಷಗಳ ಹಿಂದೆ ನಡೆದ ಘಟನೆ.


ಮಂಗಳೂರಿನ ಪ್ರತಿಷ್ಠಿತ SDM ಕಾಲೇಜ್ BBM ನ ತರಗತಿಯಲ್ಲಿ ನಡೆದ ಕತೆ.

ಅಂದು ಶುಕ್ರವಾರ. ಪಾಠ ನಡೆಯುತ್ತಿತ್ತು. ದಿಢೀರನೆ ತರಗತಿಯ ಮಧ್ಯದಲ್ಲಿ ಐವರು ವಿದ್ಯಾರ್ಥಿಗಳು ಎದ್ದು ನಿಂತರು.


ಉಪನ್ಯಾಸಕರು "ಏನು?" ಎಂದಾಗ...

"ನಮಗೆ ಮಸೀದಿಗೆ ಪ್ರಾರ್ಥನೆಗೆ ಹೋಗಲಿಕ್ಕಿದೆ" ಎನ್ನುವ ಉತ್ತರ ಬಂತು.

ಉಪನ್ಯಾಸಕರು ತಬ್ಬಿಬ್ಬಾದರು. ಅವರ ಅನುಮತಿಗೆ ಕಾಯದೆ ಆ ವಿದ್ಯಾರ್ಥಿಗಳು ಹೊರಟೇಬಿಟ್ಟರು.

ತರಗತಿ ಮುಂದುವರಿಯಿತು.


ಮರುದಿನ ಅದೇ ಉಪನ್ಯಾಸಕರು ಪಾಠ ಮಾಡುತ್ತಿದ್ದಾಗ‌ ನಾವು ಐವರು ವಿದ್ಯಾರ್ಥಿಗಳು ಎದ್ದು ನಿಂತೆವು


ಉಪನ್ಯಾಸಕರು ಏನು? ಎಂದ ತಕ್ಷಣ ಉತ್ತರ ಬಂತು..


"ಹನುಮಾನ್ ದೇವಸ್ಥಾನಕ್ಕೆ. ಶನಿವಾರ ಪೂಜೆಗೆ ಹೋಗಲಿಕ್ಕಿದೆ. ಅನುಮತಿ ಬೇಕು"

....

ಅಷ್ಟರಲ್ಲಿ ಮತ್ತೆ ನಾಲ್ಕೈದು ವಿದ್ಯಾರ್ಥಿಗಳು ಎದ್ದು ನಿಂತು... "ಸಾರ್.. ಸೋಮವಾರ ನಮಗೆ ಕದ್ರಿ ದೇವಸ್ಥಾನ ಕ್ಕೆ ಹೋಗಲಿಕ್ಕಿದೆ" ಎಂದುಬಿಟ್ಟರು.

"ಸಾರ್...ನಮಗೆ ಗುರುವಾರ ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗಲಿಕ್ಕಿದೆ "... ಎನ್ನುವ ಸ್ವರ ಮತ್ತೊಂದು ಮೂಲೆಯಿಂದ ಕೇಳಿಸಿತು.

ಉಪನ್ಯಾಸಕರು ಅಂದು ದೃಢವಾಗಿ ಹೇಳಿಬಿಟ್ಟರು...

"ತರಗತಿಯ ಮಧ್ಯದಲ್ಲಿ ಇನ್ನು ಯಾರಿಗೂ ಪೂಜೆ, ಪ್ರಾರ್ಥನೆಗೆ ಅವಕಾಶ ಇಲ್ಲ"...

ಮುಂದಿನ ಶುಕ್ರವಾರ ಯಾರೂ ಪ್ರಾರ್ಥನೆಗೆ ತೆರಳಲಿಲ್ಲ...!!!

ಅಂದು ನಮ್ಮ ತರಗತಿಯಲ್ಲಿದ್ದದ್ದು ಕೇವಲ ಐವರು ಮುಸಲ್ಮಾನ ವಿದ್ಯಾರ್ಥಿಗಳು!..‌. ನಲ್ವತ್ತು ಹಿಂದುಗಳು...

(ಆದರೂ... ದೇವಸ್ಥಾನಕ್ಕೆ ಹೋಗಲಿಕ್ಕಿದೆ ಎಂದು ಹೇಳಿದವರು ಅರ್ಧಕ್ಕಿಂತ ಕಡಿಮೆ ಹಿಂದೂ ವಿದ್ಯಾರ್ಥಿಗಳು.)

******

ಹಿಜಾಬ್- ಕೇಸರಿ ಶಾಲಿನ ನಡುವೆ ಈ ಕತೆ ನೆನಪಾಯಿತು.‌

ಅಂದ ಹಾಗೆ.. ಇಂದಿಗೂ ನಾವು BBM ನ ಎಲ್ಲಾ ಹಳೆ ವಿದ್ಯಾರ್ಥಿಗಳು ಸ್ನೇಹಿತರಾಗಿಯೇ ಇದ್ದೇವೆ.

-ಕದ್ರಿ ನವನೀತ ಶೆಟ್ಟಿ

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



1 Comments

  1. Upayukta is covering all important news and is very helpful due to us digital version.
    In the matter of Hijab wearing struggle by Muslim girls, it is surprising that instead of fighting against such atrocity on women of Muslim community, these young girls are demanding it. In fact Malala Yousufi the Nobel won Muslim girl who fought against atrocities on Muslim girls wrote in her Twitter "Wearing a burqa is like walking inside big fabric shuttlecock with only a grille to see through and on hot days it’s like an oven."
    -@Malala in her book "I am Malala"

    Now suddenly taking a uturn she supports wearing hijab. Popularity killed her instinct.

    No right thinking Muslim supports wearing of burkha or hijab as it is a punishment to all women of that community. Hope these quarreling girls understand the reality that some fundamentalists are forcing them to surrender to this religious fanatic.

    ReplyDelete

Post a Comment

Post a Comment

Previous Post Next Post