|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಡಾ. ಶ್ರೀನಿವಾಸ ವರಖೇಡಿ ನೇಮಕ

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಡಾ. ಶ್ರೀನಿವಾಸ ವರಖೇಡಿ ನೇಮಕ



ಉಡುಪಿ: ನವದೆಹಲಿಯ ಪ್ರತಿಷ್ಠಿತ ಕೇಂದ್ರೀಯ ಸಂಸ್ಕೃತ ವಿ ವಿ ಉಪಕುಲಪತಿಗಳಾಗಿ ರಾಜ್ಯದ ಪ್ರಸಿದ್ಧ ವಿದ್ವಾಂಸ ಡಾ ಶ್ರೀನಿವಾಸ ವರಖೇಡಿಯವರು ಕೇಂದ್ರ ಸರ್ಕಾರದಿಂದ ನಿಯುಕ್ತರಾಗಿದ್ದಾರೆ. 


ಈ ತನಕ ನಾಗ್ಪುರದ ಕಾಳಿದಾಸ ವಿವಿಯ ಉಪಕುಪತಿಗಳಾಗಿದ್ದ ವರಖೇಡಿಯವರು ಕರ್ನಾಟಕದವರು. ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವಿಶೇಷ ಅಭಿಮಾನಿಗಳು ಹಾಗೂ ಶಿಷ್ಯರೂ ಆಗಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ 12 ವರ್ಷ ಶ್ರೀ ಮನ್ನ್ಯಾಯಸುಧಾದಿ ಶಾಸ್ತ್ರಾಧ್ಯಯನ ನಡೆಸಿದ ಬಳಿಕ ಅಲ್ಲೇ ಕೆಲ ವರ್ಷ ಪ್ರಾಧ್ಯಾಪಕರೂ ಆಗಿ ಸೇವೆ ಸಲ್ಲಿದ್ದರು. ಬಳಿಕ ಹೈದರಾಬಾದಿನ ಉಸ್ಮಾನಿಯಾ ವಿವಿ, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿವಿಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಏಕಕಾಲಕ್ಕೆ ಮಹಾರಾಷ್ಟ್ರದ ಗೊಂಡವರಂ ವಿವಿ ಮತ್ತು ನಾಗ್ಪುರದ ಮಹಾಕವಿ ಕಾಳಿದಾಸ ವಿವಿ ಈ ಎರಡು ವಿವಿಗಳ ಉಪಕುಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಅವಧಿಯಲ್ಲಿ ಕಾಳಿದಾಸ ವಿವಿಯನ್ನು ದೇಶದಲ್ಲೆ ಅಗ್ರಸ್ಥಾನಕ್ಕೆ ತರುವಲ್ಲಿ ಬಹಳಷ್ಟು ಶ್ರಮಿಸಿದ್ದರು.


ಡಾ ವರಖೇಡಿಯವರಿಗೆ ಪೇಜಾವರ ಶ್ರೀ ಅಭಿನಂದನೆ:

ಡಾ ಶ್ರೀನಿವಾಸ ವರಖೇಡಿಯವರರಿಗೆ ಈ ಹೊಸ ಅವಕಾಶ ದೊರೆತಿರುವ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅತೀವ ಸಂತಸ ವ್ಯಕ್ತಪಡಿಸಿದ್ದು, ಶ್ರೀಯುತ ವರಖೇಡಿಯವರು ಈ ಜವಾಬ್ದಾರಿಯನ್ನು ನಿರ್ವಹಿಸಲು ಅತ್ಯಂತ ಸಮರ್ಥರಿದ್ದಾರೆ ಎಂದು ಪ್ರಶಂಸಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم