ವಿಜ್ಞಾನಿಯಾಗುವವರು ಪಠ್ಯಕ್ಕಿಂತ ಪ್ರಾಯೋಗಿಕ ವಿಚಾರಗಳಲ್ಲಿ ಆಸಕ್ತಿ ತೋರಬೇಕು: ಶಂಕರ ಜೋಯಿಸ ಎರ್ಮುಂಜ

Upayuktha
0

ಪುತ್ತೂರು: ಗುರಿಯನ್ನು ತಲುಪುವತ್ತ ಹೆಜ್ಜೆಗಳನ್ನು ವಿದ್ಯಾರ್ಥಿಗಳೇ ಇಡಬೇಕು. ಶಿಕ್ಷಕರು ಮಾರ್ಗದರ್ಶನ ನೀಡುವ ಕೆಲಸವನ್ನು ಮಾತ್ರ ಮಾಡುತ್ತಾರೆ. ವಿಜ್ಞಾನಿಯಾಗಲು ಇಚ್ಚಿಸುವ ವಿದ್ಯಾರ್ಥಿಗಳು ಪಠ್ಯಕ್ಕಿಂತ ಪ್ರಾಯೋಗಿಕ ವಿಚಾರಗಳನ್ನು ಕಲಿಯಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಶಂಕರ ಜ್ಯೋಯಿಸ ಎರ್ಮುಂಜ ಹೇಳಿದರು.


ವಿವೇಕಾನಂದ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ, ವಿಜ್ಞಾನ ಸಂಘದ ಆಶ್ರಯದಲ್ಲಿ 'ವಿಜ್ಞಾನ ಸಂಘದ ಉದ್ಘಾಟನಾ ಕಾರ್ಯಕ್ರಮ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಐನ್ಸ್ಟೈನ್ ನ್ಯೂಟನ್ ಸೇಬು ಹಣ್ಣು ಕೆಳಗೆ ಬೀಳುವುದರ ಮೂಲಕ ಗುರುತ್ವಾಕರ್ಷಣೆಯನ್ನು ಕಂಡುಹಿಡಿದ ರೀತಿಯಲ್ಲಿಯೇ ವಿದ್ಯಾರ್ಥಿಗಳು ಆಲೋಚಿಸಬೇಕು. ಪ್ರತಿಯೊಂದನ್ನು ಅದು ಹೇಗೆ ಬಂತು ಎಲ್ಲಿಂದ ಬಂತು ಎಂದು ಕುತೂಹಲವಿರಬೇಕು. ಹೀಗಾದರೆ ಮಾತ್ರ ವಿಜ್ಞಾನಿಯಾಗಲು ಸಾಧ್ಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಸಾಧಕನಾಗಲು ದಿನನಿತ್ಯ ಸಕ್ರಿಯವಾಗಿ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ವಿಜ್ಞಾನ ಕೇವಲ ನೈಸರ್ಗಿಕ ತತ್ವವಾಗಿದೆ, ವಿಜ್ಞಾನಿ ಸತ್ಯವನ್ನೇ ಹೇಳಬೇಕು, ಸತ್ಯವನ್ನೇ ಹುಡುಕಬೇಕು ಹೊರತು ಸುಳ್ಳನ್ನು ಆಡಬಾರದು ಎಂದು ನುಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಮಾತನಾಡಿ, ಹಲವಾರು ವರ್ಷದಿಂದ ವಿಜ್ಞಾನ ಸಂಘವು ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳು ಆಸಕ್ತಿ ತೋರಿಸಿದಷ್ಟು ಈ ಸಂಘವು ಬೆಳೆಯುತ್ತಾ ಹೋಗುವುದು ಎಂದು ಹೇಳಿದರು.


ಪ್ರಸ್ತುತ ಶೈಕ್ಷಣಿಕ ವರ್ಷದ, ವಿಜ್ಞಾನ ಸಂಘದ ಅಧ್ಯಕ್ಷರಾಗಿ ತೃತಿಯ ಬಿ.ಜೆಡ್.ಸಿಯ ಅರವಿಂದ್ ವಿಬಾಸ್ ಅಧ್ಯಕ್ಷ, ಕಾರ್ಯದರ್ಶಿ ಧನುಷ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಶೈನಿ ನೇಮಕಗೊಂಡರು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಅನನ್ಯ ಪಾಂಗಲ್ ರನ್ನು ಸನ್ಮಾನಿಸಾಲಾಯಿತು.


ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕಾಲೇಜ್ ನ ಸಹಾಯಕ ಪ್ರಾಧ್ಯಾಪಕ ಸುನಿಲ್ ಕೆಸಿ, ವಿದ್ಯಾರ್ಥಿಗಳಿಗೆ ಸಂಶೋಧನೆಯ ಬಗ್ಗೆ ಹಲವಾರು ಮಾಹಿತಿಗಳನ್ನು ನೀಡಿದರು.


ಕಾರ್ಯಕ್ರಮದಲ್ಲಿ ಐಕ್ಯೂಎಸಿ ಘಟಕದ ಸಂಯೋಜಕರು ಶಿವಪ್ರಸಾದ್ ಕೆ. ಎಸ್. ವಿಜ್ಞಾನ ಸಂಘದ ಸಂಯೋಜಕಿ ನಿಶಾ, ವಿಜ್ಞಾನ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.


ತೃತಿಯ ಬಿ ಜೆಡ್ ಸಿ ವಿದ್ಯಾರ್ಥಿ ಅರವಿಂದ್ ವಿಭಾಸ್ ಸ್ವಾಗತಿಸಿ, ಧನುಷ್ ವಂದಿಸಿ ,ಮೋನಿಷಾ ಎ ಯಂ ಕಾರ್ಯಕ್ರಮವನ್ನು ನಿರೂಪಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top