|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಗೋವು ಮತ್ತು ನಾವು

ಕವನ: ಗೋವು ಮತ್ತು ನಾವು


ಭುವಿ ಮೇಲೆ ಬಂದದ್ದು ಹೆಣ್ಣಿಂದ
ಭುವಿ ಅಂದ ನೋಡಿದ್ದು ಅವಳಿಂದ
ಪೋಷಿಸಿದಳು ಮಮತೆಯಿಂದ
ಅದೇ ಮಾತೃಸ್ವರೂಪಿ ಗೋವನ್ನು ನಮ್ಮ ಕೈಯಿಂದ
ಕೊಂದು ಪಡುತ್ತಿದ್ದೇವೇಕೆ ಆನಂದ

ಭೇದವಿಲ್ಲದೆ ಸಲಹುವುದು ಅದು ನಮ್ಮನ್ನು 
ಧಾರೆಯೆರೆಯುತ್ತದೆ ತನ್ನ ಸರ್ವಸ್ವವನ್ನು
ಅನುದಿನವು ಕಾಯುವುದು ಶ್ರೇಯಸ್ಸನ್ನು
ಆದರೂ ಕೊಲ್ಲುತ್ತಿದ್ದೇವೇಕೆ ಕಾಮಧೇನುವನ್ನು

ಅದರ ಪ್ರೀತಿ ಚಿರಸ್ಥಾಯಿ
ಅಮೃತನೀಯುವ ಮಹಾಮಾಯಿ
ಇಂದು ಭೋಜನಕ್ಕೂ ಸೀಮಿತ
ಯಾಕೆ "ಅಂಬಾ" ಎನ್ನುವ ತಾಯಿ

ಅದ ಕಣ್ಣಲ್ಲಿ ಸ್ವಪ್ನದ ಹೊಂಗನಸು
ಕ್ಷೀರಧಾರೆಯಿಂದ ಮಾಡಿದ ಭಕ್ಷ್ಯ ಸೊಗಸು
ಕಣ್ಮರೆಯಾಗುತ್ತಿದೆ ಯಾಕೆ ಸುತ್ತ ಮುತ್ತ ಹಸುಕೂಸು

ಗೋಉತ್ಪನ್ನ ಉಣ್ಣುವ ನಾವು
ಅರ್ಥೈಸಿಕೊಳ್ಳೋಣ ಅದರ ನೋವು
ಇನ್ನಾದರೂ ಸಿದ್ಧರಾಗೋಣ ಗೋಸೇವೆಗೆ
ಹಚ್ಚೋಣ ಆ ಮಮತೆಗೆ ಪ್ರೀತಿಯ ದೀವಿಗೆ

-ಅರ್ಪಿತಾ ಕುಂದರ್

0 تعليقات

إرسال تعليق

Post a Comment (0)

أحدث أقدم