ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಆಳ್ವಾಸ್ ಚಾಂಪಿಯನ್

Chandrashekhara Kulamarva
0

ಮೂಡುಬಿದಿರೆ: ಮಂಗಳೂರು ಕೃಷ್ಣಭವನ ಕನ್ವೆನ್‌ಷನ್ ಹಾಲ್ ನಲ್ಲಿ ಜರುಗಿದ ಕರ್ನಾಟಕ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆ ಮಹಿಳಾ ವಿಭಾಗದಲ್ಲಿ ಪ್ರಥಮ ತಂಡ ಪ್ರಶಸ್ತಿ ಪಡೆದರೆ ಪುರುಷರ ವಿಭಾಗದಲ್ಲಿ ದ್ವಿತೀಯ ತಂಡ ಪ್ರಶಸ್ತಿ ಪಡೆದುಕೊಂಡಿದೆ.


ಕರ್ನಾಟಕ ರಾಜ್ಯ ಪವರ್‌ಲಿಫ್ಟಿಂಗ್ ಸಂಸ್ಥೆ ಆಶ್ರಯದಲ್ಲಿ ನಡೆದ ಈ ಚಾಂಪಿಯನ್‌ಶಿಪ್ ನಲ್ಲಿ ಪುರುಷರ ವಿಭಾಗದ ತಂಡ ಪ್ರಶಸ್ತಿ ಬಾಲಂಜನೇಯ ಜಿಮ್ ಮಂಗಳೂರು ಪಡೆದರೆ, ಮಹಿಳಾ ವಿಭಾಗದ ದ್ವಿತೀಯ ತಂಡ ಪ್ರಶಸ್ತಿ ಐರನ್ ಎನ್ ಡೆನ್ ಬೆಂಗಳೂರು ತಂಡ ಪಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top