|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜುಲೈ 15- ವಿಶ್ವ ಯುವ ಕೌಶಲ್ಯ ದಿನ: ಉತ್ಸಾಹಿ ಯುವಜನರು ದೇಶದ ಅಭಿವೃದ್ಧಿಯ ಚಾಲಕಶಕ್ತಿ

ಜುಲೈ 15- ವಿಶ್ವ ಯುವ ಕೌಶಲ್ಯ ದಿನ: ಉತ್ಸಾಹಿ ಯುವಜನರು ದೇಶದ ಅಭಿವೃದ್ಧಿಯ ಚಾಲಕಶಕ್ತಿ


ಹೊಸ ಮಾರುಕಟ್ಟೆಯ ಬೇಡಿಕೆಗಳು ಹಾಗೂ ಡಿಜಿಟಲ್ ತಂತ್ರಜ್ಞಾನದ ಕ್ಷಿಪ್ರ ಆವಿಷ್ಕಾರಗಳ ಪರಿಣಾಮವಾಗಿ 2025ರ ವೇಳೆಗೆ ಪ್ರಸ್ತುತ ಕಾರ್ಮಿಕರ ಕೌಶಲಗಳಲ್ಲಿ ಪ್ರತಿಶತ 40ರಷ್ಟು ಬದಲಾವಣೆಗಳಾಗುತ್ತದೆ ಎಂದು ಅಂದಾಜಿಸಲಾಗಿದೆ.


ಈ ದಿಸೆಯಲ್ಲಿ ಎಲ್ಲಾ ಉದ್ಯಮಗಳು ಎದುರುನೋಡುತ್ತಿರುವ ಕೌಶಲಗಳ ಸ್ವರೂಪ, ವಿಷಯ ಮತ್ತು ಪ್ರಕಾರಗಳನ್ನು ಬದಲಾಯಿಸಿದೆ. ಜಾಗತಿಕ ಆರ್ಥಿಕ ಸಂಘಟನೆಯ 2016ರ ವರದಿಯ ಪ್ರಕಾರ “ಇಂದು ಪ್ರಾಥಮಿಕ ಶಾಲೆಗೆ ಪ್ರವೇಶಿಸುವ 65% ಮಕ್ಕಳು ಅಂತಿಮವಾಗಿ ಇನ್ನೂ ಅಸ್ತಿತ್ವದಲ್ಲಿರದ ಹೊಸ ಉದ್ಯೋಗ ಪ್ರಕಾರಗಳಲ್ಲಿ ತೊಡಗುವಂತಾಗುತ್ತದೆ.” ಹಳೆಯ ಉದ್ಯೋಗಗಳೂ ಸಹ ತಂತ್ರಜ್ಞಾನ, ಜಾಗತೀಕರಣ ಹಾಗೂ ರೂಪಾಂತರಗೊಳ್ಳುತ್ತಿರುವ ಜನಸಂಖ್ಯೆಯಿಂದಾಗಿ ಕೆಲಸದ ಸ್ಥಳಗಳಲ್ಲಿ ಅಮೂಲಾಗ್ರವಾಗಿ ವಿಭಿನ್ನವಾಗಲಿದೆ.


ಆಧುನಿಕ ಉದ್ಯೋಗಗಳಿಗೆ ಯುವಕರನ್ನು ಸಿದ್ಧಪಡಿಸುವುದು ಮತ್ತು ಮಾನವ ಸಂಪನ್ಮೂಲ ಯೋಜನೆ ಬಹಳ ಕ್ಲಿಷ್ಟಕರವಾದ ವಿಷಯ ಹಾಗೂ ಪ್ರಸಕ್ತ ಕಾಲದ ಕಾಳಜಿಯೂ ಆಗಿದೆ. ಜನಸಂಖ್ಯೆಯ ಬಹುಪಾಲು ಯುವಕರನ್ನು ಹೊಂದಿರುವ ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಿ ಜನಸಂಖ್ಯೆಯಲ್ಲಿ ಜಗತ್ತಿನ ಅತೀ ದೊಡ್ಡ ದೇಶವಾಗಿ ಹೊರಹೊಮ್ಮಲಿದೆ ಹಾಗೂ “ಜನಸಂಖ್ಯಾ ಲಾಭಾಂಶ” ದ ಪ್ರಯೋಜನ ಪಡೆಯುವ ಹಂತದಲ್ಲಿದೆ. ಇಂದಿನ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ  ನಮ್ಮ ದೇಶದ ಯುವ ಜನರ ಕೌಶಲ್ಯ ವರ್ಧನೆಯ ಬಗೆಗಿನ ಚರ್ಚೆ ಮುನ್ನಲೆಗೆ ಬಂದಿದೆ.


ವಿಶ್ವ ಯುವ ಕೌಶಲ್ಯ ದಿನ:

ಜನಸಂಖ್ಯೆಯ ಪ್ರಮುಖ ಭಾಗವನ್ನು ಯುವಕರು ಹೊಂದಿದ್ದರೂ, ಅವರಿಗೆ ಅಗತ್ಯವಾದ ಕೌಶಲ್ಯಗಳನ್ನು ನೀಡುವಲ್ಲಿ ಎಲ್ಲೋ ಎಡವಿದ್ದೇವೆ ಎಂದು ಭಾಸವಾಗುತ್ತಿದೆ. ಮಾರುಕಟ್ಟೆಯ ಕೌಶಲ್ಯಗಳ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ವ್ಯತ್ಯಾಸ ತಕ್ಷಣದಲ್ಲಿ ಗಂಭೀರವೆನಿಸದಿದ್ದರೂ, ದೀರ್ಘಾವಧಿಯಲ್ಲಿ ಇದು ಮನುಕುಲದ ಉಳಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.


ಯುವಕರ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಾಗದೇ ಇದ್ದರೂ, ನಮಗೆ ಯುವಕರನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸಲು ಸಾಧ್ಯವಿದೆ ಎಂಬ ಅಂಶವನ್ನು ಮರೆಯಲು ಮತ್ತು ಕಡೇಗಣಿಸಲು ಸಾಧ್ಯವಿಲ್ಲ. ಯುವಕರ ಉಜ್ವಲ ಭವಿಷ್ಯಕ್ಕಾಗಿ ಅಗತ್ಯ ಕೌಶಲ್ಯವರ್ಧನೆಗೆ ಹೆಚ್ಚು ಒತ್ತು ನೀಡುವ ಮೂಲಕ ಸದೃಡ ಆರ್ಥಿಕತೆಯನ್ನು ಸಾಕಾರಗೊಳಿಸಲು ಸಾಧ್ಯ.  


ಆರ್ಥಿಕ ಬೆಳವಣಿಗೆ ಹಾಗೂ ವೈಯುಕ್ತಿಕ ಯಶಸ್ಸನ್ನು ಸಾಧಿಸುವಲ್ಲಿ ಕೌಶಲ್ಯಗಳು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಪ್ರಚುರಪಡಿಸಲು ಹಾಗೂ ಕೌಶಲ್ಯಗಳ ಅಭಿವೃದ್ಧಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಚರ್ಚೆ ಮತ್ತು ಒಲವು ಮೂಡಿಸುವ ಉದ್ದೇಶದಿಂದ ನವಂಬರ್ 2014 ರ ತನ್ನ ಸಾಮಾನ್ಯ ಸಭೆಯಲ್ಲಿ ವಿಶ್ವ ಸಂಸ್ಥೆಯು ಜುಲೈ 15ನ್ನು ವಿಶ್ವ ಯುವ ಕೌಶಲ್ಯ ದಿನ ಎಂದು ಘೋಷಿಸಿತು.


ಜುಲೈ 15ರಂದು ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ಕೇಂದ್ರ ಸರಕಾರ ‘ಕೌಶಲ್ಯ ಭಾರತ’ ಯೋಜನೆಗೆ 2015ರಲ್ಲಿ ಚಾಲನೆ ನೀಡಿದ್ದು, 2022ರ ವೇಳೆಗೆ ಸುಮಾರು 40.2 ಕೋಟಿ ಯುವ ಸಮುದಾಯವನ್ನು ಕೌಶಲ್ಯಪೂರ್ಣರನ್ನಾಗಿಸುವ ಗುರಿ ಹೊಂದಿದೆ. ಸ್ಕಿಲ್ ಇಂಡಿಯಾ ಭಾರತದ ಯುವಜನತೆಯ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ತಯಾರಿಗೊಳಿಸುವ ಯೋಜನೆ ಇದಾಗಿದೆ.


ಸ್ಕಿಲ್ ಇಂಡಿಯಾ:

ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲೊಂದಾದ “ಸ್ಕಿಲ್ ಇಂಡಿಯಾ” ಯೋಜನೆ ಬರೀ ಹೊಟ್ಟೆ ತುಂಬಿಸುವ ಯೋಜನೆಯಲ್ಲ, ಬದಲಾಗಿ ಬಡ ಕುಟುಂಬಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಮೂಲಕ ರಾಷ್ಟ್ರಕ್ಕೆ ಹೊಸ ಶಕ್ತಿಯನ್ನು ನೀಡಲಿರುವ ಯೋಜನೆಯಾಗಿದೆ.


ಭಾರತವು ಜಗತ್ತಿನಲ್ಲಿಯೇ ಅತ್ಯಧಿಕ ಕಾರ್ಮಿಕ ಬಲವನ್ನು ಹೊಂದಿರುವ ದೇಶವಾಗಿ ಮೂಡಿಬರಲಿದೆ. ಚೀನಾ ವಿಶ್ವದ ಉತ್ಪಾದನೆ ಕಾರ್ಖಾನೆಯಾಗಿ ಗುರುತಿಸಲಾಗಿದ್ದರೆ ಭಾರತವು ವಿಶ್ವದ ಮಾನವ ಸಂಪನ್ಮೂಲ ಬಂಡವಳವಾಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದ್ದೇವೆ. ಅನುಕೂಲಕರ ಜನಸಂಖ್ಯಾ ರಚನೆ ಮತ್ತು ಹೆಚ್ಚುತ್ತಿರುವ ಪದವೀಧರರ ಸಂಖ್ಯೆಯು ದೇಶಿಯ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಮಾರುಕಟ್ಟೆಗಳಲ್ಲಿ ಬದಲಾಗುತ್ತಿರುವ ಆವಶ್ಯಕತೆಗಳನ್ನು ಪೂರೈಸಲು ಭಾರತವು ಅನುಕೂಲಕರವಾದ ಅವಕಾಶವನ್ನು ಹೊಂದಿದೆ. ಭಾರತ್ದ ಮಹತ್ವದ ‘ಜನಸಂಖ್ಯಾ ಲಾಭಾಂಶ’ವು ದೇಶದ ಬೆಳವಣಿಗೆಗೆ ಶಕ್ತಿ ತುಂಬುವುದಲ್ಲದೆ, ಪ್ರತಿಭೆಗಳ ಜಾಗತಿಕ ಕೇಂದ್ರವಾಗಿಸಲು ಸಹಕಾರಿಯಾಗುತ್ತದೆ.


ವಿಶ್ವದ ಮಾನವ ಸಂಪನ್ಮೂಲ ಬಂಡವಾಳವಾಗಿ ಭಾರತ:

ಚೀನಾ ವಿಶ್ವದ ಉತ್ಪಾದನೆ ಕಾರ್ಖಾನೆಯಾಗಿ ಗುರುತಿಸಲಾಗಿದ್ದರೆ ಭಾರತವು ವಿಶ್ವದ ಮಾನವ ಸಂಪನ್ಮೂಲ ಬಂಡವಳವಾಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದ್ದೇವೆ. ಅನುಕೂಲಕರ ಜನಸಂಖ್ಯಾ ರಚನೆ ಮತ್ತು ಹೆಚ್ಚುತ್ತಿರುವ ಪದವೀಧರರ ಸಂಖ್ಯೆಯು ದೇಶಿಯ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಮಾರುಕಟ್ಟೆಗಳಲ್ಲಿ ಬದಲಾಗುತ್ತಿರುವ ಆವಶ್ಯಕತೆಗಳನ್ನು ಪೂರೈಸಲು ಭಾರತವು ಅನುಕೂಲಕರವಾದ ಅವಕಾಶವನ್ನು ಹೊಂದಿದೆ. ಭಾರತ್ದ ಮಹತ್ವದ ‘ಜನಸಂಖ್ಯಾ ಲಾಭಾಂಶ’ವು ದೇಶದ ಬೆಳವಣಿಗೆಗೆ ಶಕ್ತಿ ತುಂಬುವುದಲ್ಲದೆ, ಪ್ರತಿಭೆಗಳ ಜಾಗತಿಕ ಕೇಂದ್ರವಾಗಿಸಲು ಸಹಕಾರಿಯಾಗುತ್ತದೆ.


ರಾಷ್ಟ್ರೀಯ ಶಿಕ್ಷಣ ನೀತಿ-2020:

ಶಿಕ್ಷಣದ ವ್ಯವಸ್ಥೆಯು ವ್ಯಾಪಕ ಗುಣಮಟ್ಟದ ಸವಾಲುಗಳನ್ನು ಎದುರಿಸುತ್ತಿದೆ. ವಿವಿಧ ಕ್ಷೇತ್ರಗಳ ಬಹುಪಾಲು ಪದವೀಧರರು ‘ಉದ್ಯೋಗಕ್ಕೆ ಅನರ್ಹರು’ ಎಂದು ವಿವಿಧ ಅಧ್ಯಯನಗಳು ವಿಷದಪಡಿಸುತ್ತಿರುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲಿನತ್ತ ಬೊಟ್ಟುಮಾಡುತ್ತಿದೆ. ಭಾರತದ ಉನ್ನತ ಶಿಕ್ಷಣದಿಂದ ಬಹುಪಾಲು ಪದವೀಧರರು ವೇಗವಾಗಿ ಬದಲಾಗುತ್ತಿರುವ ಆರ್ಥಿಕತೆಯ ಬೇಡಿಕೆ ಹಾಗೂ ಅವಕಾಶಗಳಿಗೆ ಸಾಕಷ್ಟು ಸಿದ್ಧಪಡಿಸುವ ಶಿಕ್ಷಣವನ್ನು ಪಡೆಯುತ್ತಿಲ್ಲ ಎಂಬ ಕೊರಗು ಹಾಗೂ ದೂರು ಇನ್ನೊಂದೆಡೆಯಿಂದ ಕೇಳಿಬರುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತನ್ನದೇ ಆದಂತಹ ಪ್ರತಿಭೆ ಇರುತ್ತದೆ. ಆದರೆ ಈಗಿನ ಸಮಯದಲ್ಲಿ ಆ ವಿದ್ಯಾರ್ಥಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಹಾಗೂ ಪ್ರೋತ್ಸಾಹ ಸಿಗುತ್ತಿಲ್ಲ.

 

ಶಿಕ್ಷಣ ಅಂಕ ಪಡೆದು ಪದವಿ ಪಡೆಯಲಿಕ್ಕಾಗಿ ಅಲ್ಲ, ಶಿಕ್ಷಣ ಮಗುವಿನ ಕೌಶಲ್ಯ ವರ್ಧನೆಗೆ ವೇದಿಕೆಯಾಗಬೇಕು. ಈ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನವ ಭಾರತದ ಹೊಸ ಆಕಾಂಕ್ಷೆಗಳು ಮತ್ತು ಹೊಸ  ಅವಕಾಶಗಳನ್ನು ಈಡೆರಿಸುವ ಸಾಧನವಾಗಿ  ಅನಾವರಣಗೊಳ್ಳಲಿದೆ. 21 ನೇ ಶತಮಾನದ ಕೌಶಲಗಳಾದ ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಹಯೋಗ, ಕುತೂಹಲ ಮತ್ತು ಸಂವಹನಗಳನ್ನು ಮೈಗೂಡಿಸಿಕೊಳ್ಳಲು ಹಂತ ಹಂತವಾಗಿ ಅವಕಾಶ ಕಲ್ಪಿಸಲಾಗಿದೆ.


ಕೌಶಲ ಭಾರತ (ಸ್ಕಿಲ್ ಇಂಡಿಯಾ) ನಮ್ಮದಾಗಲಿ:

ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿರುವ ದೇಶದ ಸರ್ವಾಂಗೀಣ ಪ್ರಗತಿಗೆ ಆಧುನಿಕ ಶಿಕ್ಷಣ ಹಾಗೂ ಕೌಶಲ್ಯ ವರ್ಧನೆ ಅತ್ಯಗತ್ಯ. ದೇಶದ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡು, ಲಭ್ಯ ಸಂಪನ್ಮೂಲಗಳನ್ನು ಜಾಣತನದಿಂದ ಬಳಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಭಾರತೀಯರ ಬದುಕು ಸಹನೀಯವಾಗಿರಲು ಸಾಧ್ಯವಿದೆ.


ಉತ್ಸಾಹಿ ಹಾಗೂ ಕೌಶಲ್ಯಭರಿತ ಯುವಜನರು ದೇಶದ ಅಭಿವೃದ್ಧಿಯ ಚಾಲಕಶಕ್ತಿ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸುವ ಯೋಚನೆ ಹಾಗೂ ಯೋಜನೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರ್ಥಶಾಸ್ತ್ರ ನಮಗೆ ತಿಳಿಸುತ್ತದೆ. ಭಾರತ ಈಗ ಜನಸಂಖ್ಯಾ ಹೆಚ್ಚಳದೊಂದಿಗೆ ಬಹು ಮುಖ್ಯ ಅವಕಾಶ ಮತ್ತು ಸವಾಲನ್ನು ತನ್ನದಾಗಿಸಿಕೊಂಡಿದೆ. ಕೆಲಸ ಮಾಡುವ ಪ್ರಾಯ ಹಾಗೂ ಸಾಮರ್ಥ್ಯ ಇರುವ ವಿಪುಲ ಯುವಜನತೆಯ ಸದ್ಬಳಕೆ ನಮ್ಮ ದೇಶದ ಅಭಿವೃದ್ಧಿಗಿರುವ ರಹದಾರಿ.



(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post