ಬಾಕಾಹು ಐಸ್ ಕ್ರೀಮ್
ಪಾಕ: ಪೂರ್ಣಿಮಾ ಜೆಪಿ, ಪಜಿಲ, ಕಾಸರಗೋಡು
(ಪ್ರೇರಣೆ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
ಕಾಸರಗೋಡಿನ ಪೂರ್ಣಿಮಾ ಜಯಪ್ರಕಾಶ್ ಬಾಕಾಹು ಐಸ್ ಕ್ರೀಮ್ ಮಾಡಿದ್ದಾರೆ. "ಹಾಲಿಗೆ ಸಕ್ಕರೆ ಹಾಕಿ ಕುದಿಯಲು ಇಡಬೇಕು. ಅದಕ್ಕೆ ಅರ್ಧ ಕಪ್ ಹಾಲಿನಲ್ಲಿ ಬಾಳೆಕಾಯಿ ಹುಡಿ (ಬಾಕಾಹು) ಕರಗಿಸಿ ಎರೆಯಬೇಕು. ತಯಾರಿ ಉಳಿದೆಲ್ಲಾ ಐಸ್ ಕ್ರೀಮಿನಂತೆಯೇ" ಎನ್ನುತ್ತಾರೆ.
"ಹೊಸರುಚಿ ಮಾಡಿ ರುಚಿ ನೋಡುವ ತರಾತುರಿಯಲ್ಲಿ ಫೋಟೋ ತೆಗೆಯಲು ಮರೆತುಹೋಯಿತು. ನೆನಪಾದದ್ದು ಪೂರ್ತಿ ಮುಗಿಯುವುದಕ್ಕೆ ಮುನ್ನ" ಎಂಬ ಬೇಸರವಿದೆ.
"ಆರಾರೂಟಿನ ಐಸ್ ಕ್ರೀಮಿನಂತೆಯೇ ಆಗುತ್ತದೆ. ಫಕ್ಕನೆ ವ್ಯತ್ಯಾಸ ಗೊತ್ತಾಗುವುದಿಲ್ಲ" ಎನ್ನುತ್ತಾರೆ.
Key Words: Banana Powder, Banana Powder Ice cream, ಬಾಕಾಹು ಐಸ್‌ಕ್ರೀಮ್, ಬಾಳೆಕಾಯಿ ಹುಡಿ, ಸವಿರುಚಿ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ