ಸವಿರುಚಿ: ಬಾಕಾಹು (ಬಾಳೆಕಾಯಿ ಹುಡಿ) ಗುಳಿಯಪ್ಪ

Upayuktha
0
ಅಡಿಕೆ ಪತ್ರಿಕೆ ಸಂಪಾದಕರಾದ ಶ್ರೀಪಡ್ರೆ ಅವರ ಪ್ರೇರಣೆ ಪಡೆದ 'ಬಾಕಾಹು' (ಬಾಳೆಕಾಯಿ ಹುಡಿ) ಅಭಿಯಾನಕ್ಕೆ ಬಹಳಷ್ಟು ಸ್ಪಂದನೆಗಳು ರಾಜ್ಯಾದ್ಯಂತ ಎಲ್ಲ ಕಡೆಯಿಂದ ಬರುತ್ತಿವೆ. ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಅಭಿಯಾನ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲೂ ಸುದ್ದಿಯಾಗತೊಡಗಿದೆ. ಹಲವು  ಮಂದಿ ಹಲವು ಬಗೆಯ ತಿನಿಸುಗಳ ಪ್ರಯೋಗವನ್ನು ಬಾಳೆಕಾಯಿ ಹುಡಿಯಿಂದ ಮಾಡುತ್ತಿದ್ದಾರೆ. ಈ ದಿಸೆಯಲ್ಲಿ ಇನ್ನಷ್ಟು ಪ್ರಯೋಗಗಳು ಈಗ ನಿಮ್ಮ ಮುಂದೆ:




ಬಾಕಾಹು (ಬಾಳೆಕಾಯಿ ಹುಡಿ) ಗುಳಿಯಪ್ಪ

ಪಾಕ: ಉಮಾ ಪ್ರಸನ್ನ ಕರಿಯಾಲ


ಸಾಮಗ್ರಿಗಳು: ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು) 1 ಕಪ್, ಅಕ್ಕಿ ಹುಡಿ1 ಕಪ್,  ಮೊಸರು/ ಮಜ್ಜಿಗೆ 1 ರಿಂದ ೨ ಕಪ್, ರುಚಿಗೆ ತಕ್ಕಷ್ಟು ಉಪ್ಪು, ನೀರುಳ್ಳಿ-1, ಕ್ಯಾರೆಟ್ -1,  ಹಸಿಮೆಣಸು -1, ಬಣ್ಣ ಬೇಕಾದರೆ ಅರಿಶಿನ ಹುಡಿ, 1 ಚಮಚ ಸಕ್ಕರೆ (ಬೇಕಾದರೆ), (ಕೊತ್ತಂಬರಿ ಸೊಪ್ಪು / ಕರಿಬೇವಿನ ಸೊಪ್ಪು) ಅಗತ್ಯಕ್ಕೆ ತಕ್ಕಷ್ಟು ಎಣ್ಣೆ ಅಥವಾ ತುಪ್ಪ


ವಿಧಾನ: ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು  ಸರಿಯಾಗಿ  ಮಿಕ್ಸ್ ಮಾಡಿ. ಬೇಕಿದ್ದರೆ ನೀರು ಸೇರಿಸಿ ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಕಡೇ ಪಕ್ಷ ಅರ್ಧ ಗಂಟೆ ಹಾಗೆ ಇಡಿ. ಆಮೇಲೆ ತುಪ್ಪ ಅಥವಾ ಎಣ್ಣೆ ಹಾಕಿ ಗುಳಿಯಪ್ಪ ಕಾವಲಿಯಲ್ಲಿ ಬೇಯಿಸಿ.


ಉಮಾ ಅವರು ಕಳೆದ ಒಂದು ವಾರದಲ್ಲಿ ಪ್ರಯೋಗ ಮಾಡಿ ಇಷ್ಟಪಟ್ಟ ಬಾಕಾಹು ಪಾಕೇತನಗಳು: ಗುಳಿಯಪ್ಪ, ನಿಪ್ಪಟ್ಟು, ನೀರುಳ್ಳಿ ಬಜೆ, ಬಟಾಟೆ ಪೋಡಿ, ರೊಟ್ಟಿ,  ಲಾಡು, ಕೇಕ್, ಪಾನ್‌ಕೇಕ್, ಚಪಾತಿ, ಪೂರಿ ಮತ್ತು ಜಿಲೇಬಿ.


ಮನಸ್ಸು ಮಾಡಿದರೆ ಎಲ್ಲರೂ ಅವರವರ ಮನೆಗಳಲ್ಲಿ ಇವನ್ನು ಮಾಡಿಕೊಳ್ಳಬಹುದು.

(ಪ್ರೇರಣೆ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)

Key Words: Banana Powder, Banana Flour, Banana Flour Guliyappa, Recipe, ಬಾಳೆಕಾಯಿ ಹುಡಿ ಗುಳಿಯಪ್ಪ, ಸವಿರುಚಿ,


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top