ಶ್ರೀನಿವಾಸ ವಿಶ್ವವಿದ್ಯಾಲಯ: ಪ್ರಥಮ ಆನ್‌ಲೈನ್ ಬ್ಯಾಚ್‌ನ ಓರಿಯಂಟೇಶನ್ ಕಾರ್ಯಕ್ರಮ

Shreya Hegde
0


‌

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ದೂರ ಶಿಕ್ಷಣ ಮತ್ತು ಆನ್‌ಲೈನ್ ಶಿಕ್ಷಣ ಕೇಂದ್ರದ (CDOE) ಪ್ರಥಮಆನ್‌ಲೈನ್ ಬ್ಯಾಚ್‌ನ ಓರಿಯಂಟೇಶನ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು 2026ರ ಅಕ್ಟೋಬರ್ 29ರಂದು ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ವ ಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು, ಶಿಕ್ಷಣವು ವೈಯಕ್ತಿಕ ಬೆಳವಣಿಗೆ, ಸಾಮಾಜಿಕ ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಶಕ್ತಿಶಾಲಿ ಸಾಧನವಾಗಿದೆ ಎಂದು ತಿಳಿಸಿದರು. ಭೌಗೋಳಿಕ ಹಾಗೂ ವೈಯಕ್ತಿಕ ಮಿತಿಗಳನ್ನು ಮೀರಿ ಎಲ್ಲರಿಗೂ ಗುಣಮಟ್ಟದ ಉನ್ನತ ಶಿಕ್ಷಣ ಲಭ್ಯವಾಗುವಂತೆ ಮಾಡುವ ಮಹತ್ವವನ್ನು ಅವರು ಒತ್ತಿಹೇಳಿದರು.


ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಎರ್. ಶ್ರೀಮತಿ ಎ. ಮಿತ್ರಾ ಎಸ್. ರಾವ್ ಹಾಗೂ ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ ಉಪಸ್ಥಿತರಿದ್ದು, ಶ್ರೀನಿವಾಸ ವಿಶ್ವವಿದ್ಯಾಲಯದ ಪರಿಚಯವನ್ನು ನೀಡಿದರು. ದೂರ ಶಿಕ್ಷಣ ಮತ್ತು ಆನ್‌ಲೈನ್ ಕಲಿಕೆಯ ಮೂಲಕ ಉನ್ನತ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ವಿಶ್ವವಿದ್ಯಾಲಯದ ಪ್ರಯತ್ನದಲ್ಲಿ ಈ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದೆ. ಪ್ರಥಮ ಆನ್‌ಲೈನ್ ವಿದ್ಯಾರ್ಥಿ ಬಳಗವನ್ನು ಸ್ವಾಗತಿಸುವುದರ ಜೊತೆಗೆ, ಶೈಕ್ಷಣಿಕ ವ್ಯವಸ್ಥೆ, ಕಲಿಕಾ ಸಂಪನ್ಮೂಲಗಳು, ಆನ್‌ಲೈನ್ ಬೋಧನಾ ವಿಧಾನಗಳು ಹಾಗೂ ದೂರ ಶಿಕ್ಷಣ ಮತ್ತು ಆನ್‌ಲೈನ್ ಶಿಕ್ಷಣ ಕೇಂದ್ರದ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

‌



ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲ್ ಕುಮಾರ್, ಮೌಲ್ಯಮಾಪನ ಕುಲಸಚಿವ ಡಾ. ಶ್ರೀನಿವಾಸ ಮಯ್ಯ ಡಿ., ಅಭಿವೃದ್ಧಿ ಕುಲಸಚಿವ ಡಾ. ಅಜಯ್ ಕೆ. ಜಿ. ಹಾಗೂ ಸಹಾಯಕ ಕುಲಸಚಿವರಾದ ಡಾ. ಜಯಶ್ರೀ ಬೋಳಾರ್ ಉಪಸ್ಥಿತರಿದ್ದರು. ದೂರ ಶಿಕ್ಷಣ ಮತ್ತು ಆನ್‌ಲೈನ್ ಶಿಕ್ಷಣ ಕೇಂದ್ರದ ಸಂಯೋಜಕ ಪ್ರೊ. ಶ್ರೀನಾಥ್ ರಾವ್ ಕೆ. ಸ್ವಾಗತಿಸಿದರು. ಕೇಂದ್ರದ ನಿರ್ದೇಶಕ ಡಾ. ಪದ್ಮನಾಭ ಸಿ. ಎಚ್. ವಂದಿಸಿದರು. ಪ್ರೊ. ಪ್ರಜ್ಞಾ ಬಿ. ಕಾರ್ಯಕ್ರಮ ನಿರೂಪಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top