ಕಾಸರಗೋಡು: ಬೇವಿಂಜೆ ಮಯಂಗರ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾದಿ ಮಹೋತ್ಸವದ ಆಮಂತ್ರಣಪತ್ರಿಕೆಯು ಶ್ರೀಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ದಿವ್ಯಹಸ್ತಗಳಲ್ಲಿ ಶ್ರೀ ಎಡನೀರುಮಠದಲ್ಲಿ ಲೋಕಾರ್ಪಣೆಗೊಂಡಿತು.
ಶ್ರೀ ಮಠದ ಪ್ರಬಂಧಕ ಶ್ರೀ ರಾಜೇಂದ್ರ ಕಲ್ಲೂರಾಯ, ಸೂರ್ಯಭಟ್ ಎಡನೀರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತಾಧಿಕಾರಿಗಳಾದ ಬಿ ವಿ ಕಕ್ಕಿಲ್ಲಾಯ , ವಿಷ್ಣುಮೂರ್ತಿ ಕಕ್ಕಿಲ್ಲಾಯ, ಗೋಪಾಲಕೃಷ್ಣ ಕಕ್ಕಿಲ್ಲಾಯ ಪ್ರಧಾನ ಕಾರ್ಯದರ್ಶಿ ಗಿರಿಧರನ್, ಗೋವಿಂದ ಬಳ್ಳಮೂಲೆ, ಬಿ. ಕೆ. ವಿಜಯನ್, ರವಿ ಬೇವಿಂಜೆ ಉಪಸ್ಥಿತರಿದ್ದರು. ಈ ಮಹೋತ್ಸವವು ಮುಂಬರುವ ಡಿಸೆಂಬರ್ 18 ರಿಂದ 27 ರವರೆಗೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ದಿವ್ಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ಭಕ್ತಿ-ಶ್ರದ್ಧೆಗಳೊಂದಿಗೆ ನೆರವೇರಲಿದೆ.

