ಡಲ್ಲಾಸ್‌ನಲ್ಲಿ ದೇಶೀಯ ಗೋಶಾಲೆಗೆ ಪುತ್ತಿಗೆ ಶ್ರೀಗಳ ಭೇಟಿ– ಗೋಸಂರಕ್ಷಣಾ ಕಾರ್ಯಕ್ಕೆ ಮೆಚ್ಚುಗೆ

Shreya Hegde
0

ವಿದೇಶದಲ್ಲಿಯೂ ಭಾರತೀಯ ಸಂಸ್ಕೃತಿ ಮತ್ತು ಗೋಸಂರಕ್ಷಣೆಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ: ಪುತ್ತಿಗೆ ಶ್ರೀಗಳು




ಡಲ್ಲಾಸ್ (ಅಮೆರಿಕ): ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯೋತ್ತರ ವಿಶ್ವಸಂಚಾರದಲ್ಲಿರುವ ಪರಮಪೂಜ್ಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಡಲ್ಲಾಸ್ ಸಮೀಪದ ದೇಶೀಯ ಗೋಶಾಲೆಗೆ ಭೇಟಿ ನೀಡಿ, ಗೋಸಂರಕ್ಷಣಾ ಕಾರ್ಯವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.


ಭಾರತೀಯ ಮೂಲದ ಐಟಿ ಎಂಜಿನಿಯರ್ ಶ್ರೀ ವಿಶ್ವನಾಥ ಶರ್ಮಾ ಅವರು ತಮ್ಮ ಸ್ನೇಹಿತರ ಸಹಕಾರದೊಂದಿಗೆ ಸುಮಾರು 100 ಎಕರೆ ವಿಸ್ತೀರ್ಣದ, ವಿಶಾಲ ಜಲಾಶಯ ಹಾಗೂ ನಿಸರ್ಗರಮ್ಯ ಪರಿಸರವನ್ನು ಹೊಂದಿರುವ ಪ್ರದೇಶದಲ್ಲಿ ಅತ್ಯಂತ ಪರಿಶ್ರಮದಿಂದ ಈ ಗೋಶಾಲೆಯನ್ನು ನಿರ್ಮಿಸಿದ್ದಾರೆ. ಭಾರತೀಯ ದೇಶೀಯ ಗೋತಳಿಗಳ ಸಂರಕ್ಷಣೆ, ಅವುಗಳ ಮಹತ್ವದ ಕುರಿತು ಜನಜಾಗೃತಿ ಮೂಡಿಸುವುದು ಹಾಗೂ ಭಾರತೀಯ ಸನಾತನ ಸಂಸ್ಕೃತಿಯ ಗೋಸೇವಾ ಪರಂಪರೆಯನ್ನು ವಿದೇಶದಲ್ಲಿಯೂ ಉಳಿಸಿ ಬೆಳೆಸುವುದು ಈ ಗೋಶಾಲೆಯ ಪ್ರಮುಖ ಉದ್ದೇಶವಾಗಿದೆ. ಶ್ರೀ ವಿಶ್ವನಾಥ ಶರ್ಮಾ ಅವರು ಪೂಜ್ಯ ಶ್ರೀಪಾದರನ್ನು ಅತ್ಯಂತ ಭಕ್ತಿಗೌರವದಿಂದ ಸ್ವಾಗತಿಸಿ, ಗೋಶಾಲೆಯ ವಿವಿಧ ಚಟುವಟಿಕೆಗಳನ್ನು ಪರಿಚಯಿಸಿ ಆಶೀರ್ವಾದ ಪಡೆದರು.


ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀಪಾದರು, “ಗಾವೋ ವಿಶ್ವಸ್ಯ ಮಾತರಃ” – ಗೋವುಗಳು ವಿಶ್ವಕ್ಕೇ ತಾಯಂದಿರು. ಗೋಮಾತೆಯ ಸಂರಕ್ಷಣೆ ನಮ್ಮೆಲ್ಲರ ಪವಿತ್ರ ಕರ್ತವ್ಯ. ವಿದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿ ಮತ್ತು ಗೋಸಂರಕ್ಷಣೆಯ ಮಹತ್ವವನ್ನು ಅರಿತು, ಇಂತಹ ಮಹತ್ತರ ಸೇವಾಕಾರ್ಯವನ್ನು ಕೈಗೊಂಡಿರುವುದು ಅತ್ಯಂತ ಸಂತೋಷದ ಸಂಗತಿ. ನಿಮ್ಮ ಪರಿಶ್ರಮ ಇನ್ನಷ್ಟು ಯಶಸ್ವಿಯಾಗಿ, ಗೋಸಂರಕ್ಷಣೆಯ ಸಂದೇಶ ಎಲ್ಲೆಡೆ ತಲುಪುವಂತಾಗಲಿ. ಅಮೆರಿಕದಲ್ಲಿ ಇಂತಹ ಗೋಶಾಲೆಗಳನ್ನು ಸ್ಥಾಪಿಸಿ ಗೋಸೇವೆ ಮಾಡುತ್ತಿರುವ ಭಾರತೀಯರೆಲ್ಲರೂ ಅಭಿನಂದನಾರ್ಹರು” ಎಂದು ಶ್ಲಾಘಿಸಿ, ಮಂತ್ರಾಕ್ಷತೆ ನೀಡಿ ಹರಸಿದರು.


ಗೋಶಾಲೆಯಲ್ಲಿ ಸಂರಕ್ಷಿಸಲ್ಪಟ್ಟಿರುವ ದೇಶೀಯ ಗೋವುಗಳನ್ನು ವೀಕ್ಷಿಸಿದ ಶ್ರೀಪಾದರು ವಿಶೇಷ ಸಂತಸ ವ್ಯಕ್ತಪಡಿಸಿದರು. ಇದೇ ಗೋಶಾಲೆಯ ಸಮೀಪದಲ್ಲಿ ಶ್ರೀಕೃಷ್ಣ ಮಂದಿರವೊಂದನ್ನು ನಿರ್ಮಿಸುವ ಸಂಕಲ್ಪದ ಬಗ್ಗೆಯೂ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರೀ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜಾಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ, ಶ್ರೀ ಪ್ರಮೋದ್ ವಿಟ್ಟಲ್ ಶ್ರೀ ಪಿ. ಎಸ್. ಆಚಾರ್ಯ ಹಾಗೂ ಇತರ ಭಕ್ತರು ಉಪಸ್ಥಿತರಿದ್ದರು. ಅಮೆರಿಕದ ನೆಲದಲ್ಲಿ ಭಾರತೀಯ ಗೋಸಂರಕ್ಷಣೆಯ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಈ ಸೇವಾಕಾರ್ಯಕ್ಕೆ ಪೂಜ್ಯ ಶ್ರೀಪಾದರ ಭೇಟಿ ಮತ್ತು ಆಶೀರ್ವಾದ ವಿಶೇಷ ಪ್ರೇರಣೆ ನೀಡಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top