ಗಾಂಧೀಜಿ–ಕಾರಂತರ ಚಿಂತನೆಗಳ ಅರಿವು ಅಗತ್ಯ

Shreya Hegde
0


ಸುರತ್ಕಲ್: ಸತ್ಯದ ದರ್ಶನದ ಮೂಲಕ ಆತ್ಮಶುದ್ಧಿ ಸಾಧಿಸುವುದು ಹಾಗೂ ಅಹಿಂಸಾ ಧರ್ಮವನ್ನು ಪಾಲಿಸುವುದು ಮಹಾತ್ಮ ಗಾಂಧೀಜಿಯವರ ಧ್ಯೇಯವಾಗಿತ್ತು. ಆತ್ಮಶುದ್ಧಿ ಎಂದರೆ ಸಮಾಜದ ಎಲ್ಲ ಕ್ಷೇತ್ರಗಳ ಶುದ್ಧೀಕರಣವೂ ಹೌದು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಉದ್ಧಾರವಾಗಬೇಕು ಎಂಬುದು ಗಾಂಧೀಜಿಯವರ ಆಶಯವಾಗಿತ್ತು. ಎಲ್ಲರನ್ನೂ ಒಳಗೊಂಡ ಸಮಾಜದ ಪರಿಕಲ್ಪನೆಯಲ್ಲಿ ಗಾಂಧೀಜಿಯವರ ಚಿಂತನೆಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಹಿರಿಯ ಟಿ.ವಿ. ನಿರೂಪಕ ಪ್ರಕಾಶ್ ಪುತ್ತೂರು ಹೇಳಿದರು.


ಸುರತ್ಕಲ್‌ನ ವಿವೇಕಾನಂದ ಗ್ರಂಥಾಲಯದಲ್ಲಿ ನಡೆದ ‘ಗಾಂಧೀಜಿ 157–ಶಿವರಾಮ ಕಾರಂತ 125–ನೆನಪು’ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯವರ ಚಿಂತನೆಗಳ ಕುರಿತು ಅವರು ಮಾತನಾಡಿದರು. ಸಾಹಿತಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರು ಶಿವರಾಮ ಕಾರಂತರ ಸಾಹಿತ್ಯ ಚಿಂತನೆ ಕುರಿತು ಮಾತನಾಡಿ, “ವೈವಿಧ್ಯಮಯ ವಿಚಾರಗಳಲ್ಲಿ ಆಸಕ್ತರಾಗಿದ್ದ ಶಿವರಾಮ ಕಾರಂತರು ತಮ್ಮ ಅನುಭವಕ್ಕೆ ದಕ್ಕಿದ ವಿಚಾರಗಳನ್ನಷ್ಟೇ ಬರೆಯುತ್ತೇನೆ ಎಂಬ ನಿಲುವು ಹೊಂದಿದ್ದರು. ಅವರ ಕಾದಂಬರಿಗಳು ಇಂದಿಗೂ ಬದುಕಿನ ಕುರಿತು ಹೊಸ ನೋಟಗಳನ್ನು ನೀಡುತ್ತವೆ” ಎಂದರು. ಹಿರಿಯ ಸಾಹಿತಿ ರಘುರಾಮ ರಾವ್ ಬೈಕಂಪಾಡಿ ಮಾತನಾಡಿ, ಗಾಂಧೀಜಿ ಮತ್ತು ಶಿವರಾಮ ಕಾರಂತರ ಕೃತಿಗಳನ್ನು ಓದುವ ಮೂಲಕ ಹೊಸ ಅರಿವು ಪಡೆದುಕೊಳ್ಳಬೇಕು ಎಂದು ಹೇಳಿದರು.


ವಿವೇಕಾನಂದ ಗ್ರಂಥಾಲಯ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ರಾವ್ ಇಡ್ಯಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಕೃಷ್ಣಮೂರ್ತಿ ಸ್ವಾಗತಿಸಿದರು. ಸತೀಶ್ ಸದಾನಂದ ವಂದಿಸಿದರು. ಡಾ. ರಾಜಮೋಹನ್ ರಾವ್, ಪ್ರೊ. ರಮೇಶ್ ಕುಳಾಯಿ, ಶ್ರೀನಿವಾಸ ರಾವ್, ಸಚ್ಚಿದಾನಂದ ಹೊಸಬೆಟ್ಟು, ಪೂವಪ್ಪ ನಾಯಕ್, ರಮೇಶ್ ಅಳಪೆ, ಆನಂದ ಭಂಡಾರಿ, ರಮೇಶ್ ಶೆಟ್ಟಿ ಕುಳಾಯಿ, ಜಯರಾಮ ಶೆಟ್ಟಿ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top