ಮಯಂಗರ ಸುಬ್ರಹ್ಮಣ್ಯ ಕ್ಷೇತ್ರ: ಬ್ರಹ್ಮಕಲಶೋತ್ಸವ ಪೂರ್ವಸಿದ್ಧತಾ ಸಭೆ

Shreya Hegde
0



ಕಾಸರಗೋಡು: ಕಾಸರಗೋಡು ಬೇವಿಂಜೆ ಮಯಂಗರ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾದಿ ಮಹೋತ್ಸವದ ಅಂಗವಾಗಿ, ವಿವಿಧ ಉಪಸಮಿತಿಗಳ ಪ್ರಗತಿ ಪರಿಶೀಲನೆ ಹಾಗೂ ಪೂರ್ವಸಿದ್ಧತಾ ಸಭೆಯು ಶ್ರೀ ಕ್ಷೇತ್ರದಲ್ಲಿ ಯಶಸ್ವಿಯಾಗಿ ಜರುಗಿತು.


ಈ ಮಹೋತ್ಸವವು ಮುಂಬರುವ ಡಿಸೆಂಬರ್ 18 ರಿಂದ 27 ರವರೆಗೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ದಿವ್ಯ ನೇತೃತ್ವದಲ್ಲಿ ಅತ್ಯಂತ ಭಕ್ತಿ-ಶ್ರದ್ಧೆಗಳೊಂದಿಗೆ ನೆರವೇರಲಿದೆ. ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರಿಧರನ್ ಅವರು ಮಾತನಾಡಿ, ಉತ್ಸವದ ಯಶಸ್ಸಿಗೆ ಎಲ್ಲರ ಒಗ್ಗಟ್ಟಿನ ಸೇವೆ ಅಗತ್ಯ ಎಂದು ಕರೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಗೋವಿಂದ ಬಳ್ಳಮೂಲೆ ಅವರು ಮಾತನಾಡಿ, ಉತ್ಸವದ ಯಶಸ್ವಿ ನಿರ್ವಹಣೆಗಾಗಿ ರಚಿಸಲಾಗಿರುವ  ಉಪಸಮಿತಿಗಳು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

 

ಕ್ಷೇತ್ರದ ಆಡಳಿತಾಧಿಕಾರಿಗಳಾದ ವಿಷ್ಣುಮೂರ್ತಿ ಕಕ್ಕಿಲ್ಲಾಯ ಹಾಗೂ ಗೋಪಾಲಕೃಷ್ಣ ಕಕ್ಕಿಲ್ಲಾಯ ಅವರು ಸಭೆಯಲ್ಲಿ ಉಪಸ್ಥಿತರಿದ್ದು, ಧಾರ್ಮಿಕ ಮತ್ತು ವ್ಯವಸ್ಥಿತ ಕಾರ್ಯಕ್ರಮಗಳ ಸುಗಮ ನಿರ್ವಹಣೆಗೆ ಅಗತ್ಯವಾದ ಅಮೂಲ್ಯ ಮಾರ್ಗದರ್ಶನ ನೀಡಿದರು. ಬಿ. ಕೆ. ವಿಜಯನ್ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಆಹಾರ ಸಮಿತಿಯ ಸಂಚಾಲಕರಾದ ಜಯರಾಜ ಕುಣುಕುಳ್ಳಾಯ, ಮೋಹನ ಐಲ್ಕುಂಜೆ, ಜಲವಿತರಣೆ ಸಮಿತಿಯ ಸಂಚಾಲಕ ಕುಂಞಂಬು ಹಾಗೂ ಬೆಳಕು ಮತ್ತು ಚಪ್ಪರ ಸಮಿತಿಯ ಸಂಚಾಲಕ ಪವಿತ್ರನ್ ಅವರು ತಮ್ಮ ತಮ್ಮ ಸಮಿತಿಗಳು ಹಮ್ಮಿಕೊಂಡಿರುವ ಸಿದ್ಧತೆಗಳ ರೂಪರೇಖೆಗಳನ್ನು ಸಭೆಯ ಮುಂದಿಟ್ಟರು. ಬಿ.ಎನ್ ಪ್ರಭಾಕರನ್ ವಂದಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top