ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿಯ ಪ್ರತೀಕ: ಸತೀಶ್ ಕುಂಪಲ

Shreya Hegde
0



ಮಂಗಳೂರು: ಬಿಹಾರದ ಪಾಟ್ನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ‌ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಬಳಸಿರುವ ಪದಗಳು ಕೀಳುತನದ‌ ಮತ್ತು ಹತಾಶೆಯ ಪರಮಾವಧಿ ಹಾಗೂ ಕಾಂಗ್ರೆಸ್ ನ ಮನಸ್ಥಿತಿಯ ಪ್ರತೀಕವಾಗಿದೆ. ಅತ್ಯಂತ ಹೆಚ್ಚಿನ ಕಾಲ ಸಾರ್ವಜನಿಕ ಜೀವನದಲ್ಲಿ ಪ್ರಮುಖ ಜವಾಬ್ದಾರಿ ಯನ್ನು ನಿರ್ವಹಿಸಿರುವ ಅನುಭವ ಇರುವ ಖರ್ಗೆಯವರ ಈ ನಡವಳಿಕೆ ಖಂಡನೀಯ ಎಂದು ದಕ್ಷಿಣ ಕನ್ನಡ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಕ್ರೋಶ ವ್ಯಕ್ತಪಡಿಸಿದರು.


ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ಕಾಂಗ್ರೆಸ್ ನ ನಾಯಕರ ಇಂತಹ ಹೇಳಿಕೆಗಳು ಅವರ ಅಧಪತನಕ್ಕೆ ಕಾರಣವಾಗಿದೆ. ದೇಶವನ್ನು ಆಳ್ವಿಕೆ ಮಾಡುವುದು ತಮಗೇ ಇರುವ ಹಕ್ಕು ಎನ್ನುವ ಭಾವನೆ ಇವರ ಇಂತಹ ದುರಹಂಕಾರದ ಪ್ರವೃತ್ತಿಗೆ ಸಾಕ್ಷಿಯಾಗಿದೆ. ದೇಶದ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಿಸಲು ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿಗಳ ಬಗ್ಗೆ ಖರ್ಗೆ ಆಡಿರುವ ಮಾತುಗಳಿಗೆ ಕ್ಷಮೆಯಾಚಿಸಬೇಕೆಂದು ಕುಂಪಲ ರವರು ಪತ್ರಿಕಾ ಪ್ರಕಟಣೆ ಯಲ್ಲಿ ಆಗ್ರಹಿಸಿದ್ದಾರೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top