ಹಬ್ಬದ ಸಂಭ್ರಮಕ್ಕೆ ಐಸಿಐಸಿಐ ಕೊಡುಗೆ

Shreya Hegde
0


ಬೆಂಗಳೂರು: ದೇಶದ ಪ್ರಮುಖ ಖಾಸಗಿ ರಂಗದ ಬ್ಯಾಂಕಿಂಗ್ ಸಂಸ್ಥೆಯಾದ ಐಸಿಐಸಿಐ ಬ್ಯಾಂಕ್, ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗ್ರಾಹಕರ ಸಂಭ್ರಮವನ್ನು ಇಮ್ಮಡಿಗೊಳಿಸಲು ತನ್ನ ಬಹುನಿರೀಕ್ಷಿತ ವಾರ್ಷಿಕ ಫೆಸ್ಟಿವ್ ಬೊನಾನ್ಜಾ ಕಾರ್ಯಕ್ರಮ ಆರಂಭಿಸಿದ್ದು, ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ. ಆನ್‍ಲೈನ್ ಶಾಪಿಂಗ್, ನೂತನ ಮೊಬೈಲ್ ಫೋನ್‍ಗಳು, ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಸಾಧನಗಳು, ದೇಶ-ವಿದೇಶ ಪ್ರವಾಸ, ಗೃಹ ಪೀಠೋಪಕರಣಗಳು ಮತ್ತು ಮನೆ ಅಲಂಕಾರಿಕ ವಸ್ತುಗಳು, ಅತ್ಯಾಧುನಿಕ ಫ್ಯಾಷನ್ ಉಡುಪುಗಳು ಹಾಗೂ ಕ್ವಿಕ್ ಕಾಮರ್ಸ್ ದೈನಂದಿನ ದಿನಸಿ ಸಾಮಗ್ರಿಗಳು ಸೇರಿದಂತೆ ಪ್ರಮುಖ ಮಾರುಕಟ್ಟೆ ವಲಯಗಳಲ್ಲಿ ಗ್ರಾಹಕರು ಈ ಆಕರ್ಷಕ ಕೊಡುಗೆಗಳನ್ನು ಆನಂದಿಸಬಹುದಾಗಿದೆ ಎಂದು ಪ್ರಕಟಣೆ ಹೇಳಿದೆ.


ಐಸಿಐಸಿಐ ಬ್ಯಾಂಕ್ ಒದಗಿಸುವ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಸುಲಭ ಇಂಟರ್ನೆಟ್ ಬ್ಯಾಂಕಿಂಗ್, ಕಾರ್ಡ್‍ಲೆಸ್ ಇಎಂಐ ಹಾಗೂ ಯಾವುದೇ ಹೆಚ್ಚುವರಿ ಹೊರೆಯಿಲ್ಲದ ನೋ-ಕಾಸ್ಟ್ ಇಎಂಐ ಹಣಕಾಸು ಆಯ್ಕೆಗಳನ್ನು ಬಳಸಿಕೊಂಡು ಗ್ರಾಹಕರು ಈ ಸೌಲಭ್ಯಗಳ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಫ್ಲಿಪ್‍ಕಾರ್ಟ್‍ನ ಬಹುನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ ಮಹಾ ಮಾರಾಟ ಮೇಳಕ್ಕಾಗಿ ಐಸಿಐಸಿಐ ಬ್ಯಾಂಕ್ ಅಧಿಕೃತ ಪಾಲುದಾರಿಕೆ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಗ್ರಾಹಕರು ಫ್ಲಿಪ್‍ಕಾರ್ಟ್ ವೇದಿಕೆಯಲ್ಲಿ ಲಭ್ಯವಿರುವ ವೈವಿಧ್ಯಮಯ ಶ್ರೇಣಿಯ ಉತ್ಪನ್ನಗಳ ಖರೀದಿಯ ಮೇಲೆ ನೇರವಾಗಿ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.


ಕೊಡುಗೆಗಳ ಸಮಗ್ರ ಮಾಹಿತಿ ಪಡೆಯಲು ಮತ್ತು ಪ್ರಯೋಜನಗಳನ್ನು ಸದುಪಯೋಗಪಡಿಸಿಕೊಳ್ಳಲು ಗ್ರಾಹಕರು https://www.icici.bank.in/campaigns/bonanza/index    ಅಧಿಕೃತ ಲಿಂಕ್‍ಗೆ ಭೇಟಿ ನೀಡಬಹುದು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top