ಅಕ್ಕ-ತಂಗಿಯರ ಪ್ರೀತಿಯ ಬೆಲೆ ತಿಳಿಯಲಿಲ್ಲ,
ರಕ್ತಸಂಬಂಧಿ ಅಣ್ಣ-ತಮ್ಮಂದಿರಿಗೆ ಒಮ್ಮೆಯೂ ಅನಿಸಲಿಲ್ಲ. ll೦೧ll
ಒಡಹುಟ್ಟಿದವರ ಮಮತೆ ಮೂಲೆಗೆ ಸೇರಿತು,
ಹುಸಿ ಪ್ರೀತಿಯ ಮೋಹವು ಕಣ್ಣಿಗೆ ಕತ್ತಲೆಯಾಯಿತು. ll೦೨ll
ಥೂ... ಮತ್ತೆ ಮತ್ತೆ ಅದೇ ಪ್ರೀತಿಯ ಹುಚ್ಚು,
ಸ್ವಾರ್ಥದ ಜಾಲದಲ್ಲಿ ಸಿಲುಕಿ ಮನಸ್ಸು ಆಯ್ತು ಚೂರು. ll೦೩ll
ಸಂಬಂಧದ ಪವಿತ್ರತೆ ಇಲ್ಲಿ ಮಾಸಿ ಹೋಗಿದೆ,
ಹೃದಯದ ನೋವು ಕಣ್ಣೀರಾಗಿ ಹರಿದು ಹೋಗಿದೆ. ll೦೪ll
- ಶಿವಶರಣೆ : ರೂಪಾ ಬ ನಾಟೀಕಾರ ಮುದ್ದೇಬಿಹಾಳ
