ಪ್ರತಿ ವರ್ಷವೂ ರಾಷ್ಟ್ರೀಯ ಸೇವಾ ಯೋಜನೆಯನ್ನು ಸೆಪ್ಟೆಂಬರ್ 24 ರಂದು ಭಾರತದಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ. ಇದು ಕೇವಲ ಒಂದು ದಿನದ ಆಚರಣೆಯಲ್ಲ, ಯುವಜನರ ಸೇವಾ ಮನೋಭಾವವನ್ನು ಬೆಳೆಸುವಂತೆ ಮಾಡುತ್ತದೆ. ಇದು ರಾಷ್ಟ್ರೀಯ ಸೇವಾ ಯೋಜನೆ ಮಾತ್ರವಲ್ಲ, ಪರಿಚಯವಿಲ್ಲದ ವ್ಯಕ್ತಿಗಳನ್ನು ಪರಿಚಯಿಸುವಂತೆ ಮಾಡತ್ತವೆ. ಮಹಾತ್ಮಾಗಾಂಧೀಜಿಯವರ 100ನೇ ಜನ್ಮ ಜಯಂತಿಯ ಅಂಗವಾಗಿ ಆಚರಿಸಲಾಗುತ್ತದೆ.
ನನಗೆ ಹೇಳಿಕೊಳ್ಳೋಕೆ ತುಂಬಾ ಹೆಮ್ಮೆ ಮತ್ತು ಸಂತೋಷ ಆಗ್ತಿದೆ. ಇಂದು ನಾನು ನಮ್ಮ ಪ್ರೀತಿಯ ವಿವೇಕಾನಂದ ಕಾಲೇಜಿನ ಅಸೋಸಿಯೇಶನ್ ರಾಷ್ಟ್ರೀಯ ಸೇವಾ ಯೋಜನೆಯ ನಾಯಕಿಯಾಗಿ ಆಗಿ ಆಯ್ಕೆಯಾಗಿದ್ದೇನೆ.
NSS ಅಂದರೆ "ರಾಷ್ಟ್ರೀಯ ಸೇವಾ ಯೋಜನೆ". ಇದರ ಧ್ಯೇಯವೇ "ನಾನಲ್ಲ, ನಾವೆಲ್ಲ" - NOT ME BUT YOU. ಒಬ್ಬ ನಾಯಕಿ ಆಗಿ ಈ ಧ್ಯೇಯವನ್ನ ಜೀವನದಲ್ಲಿ ಅಳವಡಿಸಿಕೊಳ್ಳೋ ಜವಾಬ್ದಾರಿ ಈಗ ನನ್ನ ಹೆಗಲ ಮೇಲಿದೆ.
ಚಿಕ್ಕಂದಿನಿಂದಲೂ ನನಗೆ ಸಮಾಜ ಸೇವೆ ಮಾಡಬೇಕು ಅನ್ನೋ ಆಸೆ ಇತ್ತು. ಪತ್ರಿಕೋದ್ಯಮ ಓದ್ತಾ ಓದ್ತಾ ಜನರ ಸಮಸ್ಯೆ, ಗ್ರಾಮದ ಕಷ್ಟ, ಪರಿಸರದ ಬಗ್ಗೆ ಬರೆಯುತ್ತಿದ್ದೆ. ಆದರೆ ಬರೆಯೋದಷ್ಟೇ ಅಲ್ಲ, ಕೈಯಲ್ಲಿ ಕೆಲಸ ಮಾಡಿ ಬದಲಾವಣೆ ತರಬೇಕು ಅಂತ ಅನಿಸ್ತಿತ್ತು.
NSS ನ ರಕ್ತದಾನ ಶಿಬಿರ, ಸ್ವಚ್ಛತಾ ಆಂದೋಲನ, ಗಿಡ ನೆಡುವ ಅಭಿಯಾನ ಎಲ್ಲವನ್ನೂ ಹತ್ತಿರದಿಂದ ನೋಡಿದ್ದೀನಿ. ಈಗ ಆ ಎಲ್ಲಾ ಕಾರ್ಯಕ್ರಮಗಳನ್ನ ಮಾಡೋ ಅವಕಾಶ ಸಿಕ್ಕಿದೆ. ಇದು ನನ್ನ ಕನಸು ನನಸಾದ ಹಾಗೆ. ನನ್ನ ಕಾಲೇಜು, ನನ್ನ ಉಪನ್ಯಾಸಕರು, ನನ್ನ ಸ್ನೇಹಿತರು ನನ್ನ ಮೇಲೆ ಇಟ್ಟ ನಂಬಿಕೆಗೆ ನಾನು ಋಣಿ.
ನಾಯಕಿ ಅಂದರೆ ದೊಡ್ಡ ಹುದ್ದೆಯಲ್ಲ. ಅದು ದೊಡ್ಡ ಜವಾಬ್ದಾರಿ.
ನಮ್ಮ ಕಾಲೇಜಿನ 100 ಕ್ಕೂ ಹೆಚ್ಚು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ ಸೇವಕಿಯರು ಇದ್ದಾರೆ. ಅವರೆಲ್ಲರಿಗೂ ಸರಿಯಾದ ದಾರಿ ತೋರಿಸಿ, ಅವರಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯುವ ಕೆಲಸ ನಮ್ಮದಾಗಿದೆ.
ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ಪ್ರತಿ 3 ತಿಂಗಳಿಗೊಮ್ಮೆ ದೊಡ್ಡ ಶಿಬಿರ ಆಯೋಜಿಸುತ್ತದೆ.ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆಯಬೇಕು. ಅದಕ್ಕೆ ನನ್ನ ಶ್ರಮ, ಸಮಯ, ಪ್ರೀತಿ ಎಲ್ಲವನ್ನೂ ಕೊಡ್ತೀನಿ.
ನಾನು ಒಬ್ಬಂಟಿಯಾಗಿ ನಾಯಕಿ ಅಲ್ಲ. "ಎಲ್ಲರೂ ಒಟ್ಟಾದರೆ ಯಾವುದೇ ಕೆಲಸ ಸುಲಭ". ಸಮಯ ಪಾಲನೆ, ಶಿಸ್ತು, ಪ್ರಾಮಾಣಿಕತೆ - ಈ 3 ಗುಣಗಳನ್ನ ನಾನು ಯಾವತ್ತೂ ಬಿಡೋದಿಲ್ಲ.
ಈ ಅವಕಾಶ ಕೊಟ್ಟ ನಮ್ಮ ಪ್ರಾಂಶುಪಾಲರು, NSS ಯೋಜನಾಧಿಕಾರಿಗಳು ಮತ್ತು ಎಲ್ಲಾ ಉಪನ್ಯಾಸಕರಿಗೆ ಹೃತ್ಪೂರ್ವಕ ಧನ್ಯವಾದಗಳು.
ನಾನು ವಾಗ್ದಾನ ಮಾಡ್ತೀನಿ. ನನ್ನ ಅಧಿಕಾರವನ್ನ ಪ್ರದರ್ಶನಕ್ಕೆ ಬಳಸೋದಿಲ್ಲ. ಸೇವೆಗಾಗಿ ಬಳಸುತ್ತೇನೆ. ನನ್ನ ಒಂದು ವರ್ಷದ ಅವಧಿಯಲ್ಲಿ ಕನಿಷ್ಠ 1000 ಜನರ ಜೀವನದಲ್ಲಿ ಒಂದಿಷ್ಟು ಬೆಳಕು ತರೋಕೆ ಪ್ರಯತ್ನಿಸುತ್ತೇನೆ.
"ನಾನು NSS ನಾಯಕಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳೋದಕ್ಕಿಂತ, ನಾನು ಒಬ್ಬ ಒಳ್ಳೆಯ ಸೇವಕಿ ಆಗಿ ಕೆಲಸ ಮಾಡಿದ್ದೀನಿ ಅಂತ ಹೆಸರು ಬರಲಿ" - ಇದೇ ನನ್ನ ಗುರಿ.
ಶ್ರಮಯೇವ ಜಯತೇ
- ಶಿವಾನಿ ಕೊಡಂಗಾಯಿ
ದ್ವಿತೀಯ ಬಿಎ ಪತ್ರೀಕೋಧ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

