ಉಡುಪಿ ಪುತ್ತಿಗೆ ಶ್ರೀಗಳ 53ನೇ ಚಾತುರ್ಮಾಸ್ಯ ವ್ರತ ಸಮಾಪ್ತಿ

Shreya Hegde
0

 ಹಾಗೂ ಗುರುವಂದನಾ ಕಾರ್ಯಕ್ರಮ ಯಶಸ್ವಿ‌


ನವಿಮುಂಬಯಿ: ಸನಾತನ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಧಾರ್ಮಿಕ ಕೇಂದ್ರಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ನುಡಿದರು. ಅವರು ಸೆಪ್ಟೆಂಬರ್ 25ರಂದು ನವಿಮುಂಬಯಿಯ ವಾಶಿಯಲ್ಲಿರುವ ಪುತ್ತಿಗೆ ಮಠದ ನೂತನ ಶಾಖೆಯಲ್ಲಿ ತಮ್ಮ ಚತುರ್ಥ ‘ವಿಶ್ವ ಗೀತಾ ಪರ್ಯಾಯ’ ಪೂಜಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿ, 53ನೇ ಚಾತುರ್ಮಾಸ್ಯ ವ್ರತ ದೀಕ್ಷೆಯ ಸಮಾಪ್ತಿ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು.


ಮಠ ಮಂದಿರಗಳು ಪರಿಸರದಲ್ಲಿ ಧಾರ್ಮಿಕ ಶ್ರದ್ಧೆಯನ್ನು ಬೆಳೆಸುವುದರೊಂದಿಗೆ ಜನರನ್ನು ಒಂದುಗೂಡಿಸಿ ಸುಸಂಸ್ಕೃತ ಸಮಾಜ ನಿರ್ಮಿಸುವ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಸ್ಥಾಪನೆಗೊಂಡಿರುವ ಮುಂಬಯಿಯ ಪುತ್ತಿಗೆ ಮಠದ ಶಾಖೆಯು ಧರ್ಮ ಜಾಗೃತಿಯ ಕಾರ್ಯಗಳಿಗೆ ದೊಡ್ಡ ಮಟ್ಟದ ಸಹಕಾರ ನೀಡುತ್ತಿದೆ ಎಂದರು. ಈ ವರ್ಷದ ಚಾತುರ್ಮಾಸ್ಯ ವ್ರತವು ಅವಿಸ್ಮರಣೀಯವಾಗಿದ್ದು, ನೂತನ ಶಾಖೆಯಲ್ಲಿ ಪ್ರತಿದಿನ ಸಾವಿರಾರು ಭಕ್ತರು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಆನಂದ ತಂದಿದೆ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.


ಸನಾತನ ಧರ್ಮದ ಪ್ರಚಾರ ಮತ್ತು ಭಕ್ತರ ಅಭಿಪ್ರಾಯ:

ಚಾತುರ್ಮಾಸ್ಯ ಕಮಿಟಿಯ ಅಧ್ಯಕ್ಷರಾದ ಶಿವರಾಮ್ ಜಿ. ಶೆಟ್ಟಿ ಅಜೆಕಾರ್ ಮಾತನಾಡಿ, ಶ್ರೀಗಳು ನಿರಂತರ ಧಾರ್ಮಿಕ ಕಾರ್ಯಗಳೊಂದಿಗೆ ಸನಾತನ ಧರ್ಮದ ಪ್ರಚಾರವನ್ನು ದೇಶ-ವಿದೇಶಗಳಲ್ಲಿ ನಡೆಸುತ್ತ ಬಂದಿದ್ದು, ಈ ಬಾರಿ ಮುಂಬಯಿ ಭಕ್ತರಿಗಾಗಿ ತಮ್ಮ ಅಮೂಲ್ಯ ಸಮಯ ನೀಡಿರುವುದು ನಮ್ಮೆಲ್ಲರ ಭಾಗ್ಯ ಎಂದರು. ಕಾರ್ಯಧ್ಯಕ್ಷ ಗೋಪಾಲ ವೈ. ಶೆಟ್ಟಿ ಹಾಗೂ ನವಿಮುಂಬಯಿ ನಗರಸೇವಕ ಸುರೇಶ್ ಶೆಟ್ಟಿ ಮಾತನಾಡಿ, ಶ್ರೀಗಳಂತಹ ಸ್ವಾಮೀಜಿಗಳಿಂದ ನಮ್ಮ ಸನಾತನ ಧರ್ಮವು ಜಾಗೃತಗೊಂಡು ಸದಾ ರಕ್ಷಿಸಲ್ಪಡುತ್ತಿದೆ ಎಂದು ಶ್ಲಾಘಿಸಿದರು. ಸಂಘಟಕರಾದ ಪ್ರದೀಪ್ ಕುಮಾರ್ ಕಲ್ಕೂರು ಮತ್ತು ನವನೀತ್ ಶೆಟ್ಟಿ ಕದ್ರಿ ಮಾತನಾಡಿ, ಗುರುಗಳು ಭಗವದ್ಗೀತೆಯನ್ನು ಜಗತ್ತಿನಾದ್ಯಂತ ಬೋಧಿಸುತ್ತಿದ್ದು, ಕೋಟಿ ಗೀತಾ ಯಜ್ಞದಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.


ಗಣ್ಯರ ಉಪಸ್ಥಿತಿ:

ವೇದಿಕೆಯಲ್ಲಿ ಉದ್ಯಮಿಗಳಾದ ಗಿರೀಶ್ ಸಾಲ್ಯಾನ್, ರಾಘು ಮೂಲ್ಯ, ದೇವದಾಸ್ ಕುಲಾಲ್, ಜ್ಯೋತಿಷಿ ಪ್ರವೀಣ್ ಭಟ್, ಮಠದ ಪ್ರಧಾನರಾದ ರತೀಶ್ ತಂತ್ರಿ, ಚಾತುರ್ಮಾಸ ಸಮಿತಿಯ ಎನ್.ಆರ್. ರಾವ್, ಸಂಚಾಲಕ ಸುಧೀರ್ ಆರ್.ಎಲ್. ಶೆಟ್ಟಿ, ಉಪಾಧ್ಯಕ್ಷ ವಾಮನ ಹೊಳ್ಳ, ಅಣ್ಣಿ ಸಿ. ಶೆಟ್ಟಿ, ಕಾರ್ಯದರ್ಶಿ ದಿನೇಶ್ ಕುಲಾಲ್, ಜೊತೆ ಕಾರ್ಯದರ್ಶಿ ರಾಘವೇಂದ್ರ ಜಮದಗ್ನಿ, ನಾಗೇಂದ್ರ ಆಚಾರ್ಯ, ಗುರುಪ್ರಸಾದ್ ಭಟ್, ಕೋಶಾಧಿಕಾರಿ ಸಂತೋಷ್ ಸಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಗುರುಪ್ರಸಾದ್ ಚೆಂಬೂರು ಮೊದಲಾದವರು ಉಪಸ್ಥಿತರಿದ್ದು ಗುರುವಂದನಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮಗಳು:

ಕಾರ್ಯಕ್ರಮದ ನಂತರ ಭಜನಾ ಕಾರ್ಯಕ್ರಮ ಹಾಗೂ "ಹರಿ ಭಕ್ತ ಸುಧನ್ವ" ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ಮೋಹನದಾಸ ರೈ, ಚೆಂಡೆ-ಮದ್ದಲೆಯಲ್ಲಿ ಹರೀಶ ನಾರಾಯಣ ಸಾಲ್ಯಾನ್ ಹಾಗೂ ಅರ್ಥದಾರಿಗಳಾಗಿ ವಾಸುದೇವ ಮಾರ್ನಾಡ್, ಸುರೇಶ ನಂದ್ರೊಳ್ಳಿ ಮತ್ತು ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಭಾಗವಹಿಸಿ ರಸದೌತಣ ನೀಡಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top