ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಸದಸ್ಯರಿಂದ ಪರ್ಯಾಯ ಶ್ರೀ ಶಿರೂರು ಶ್ರೀಗಳ ಭೇಟಿ

Shreya Hegde
0



ಉಡುಪಿ: ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಉಡುಪಿ ಶ್ರೀಕೃಷ್ಣಮಠದ ಸರ್ವಜ್ಞ ಪೀಠದಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಪರ್ಯಾಯ ಶ್ರೀ ಶಿರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಗಳನ್ನು ಬುಧವಾರ (ಸೆ.23) ಭೇಟಿಯಾಗಿ ಫಲ ಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳವರು ನೆರೆದಿದ್ದ ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡಿ, ಮಂತ್ರಾಕ್ಷತೆ ಪ್ರಸಾದ ವಿತರಿಸಿ ಆಶೀರ್ವದಿಸಿದರು.


ಕಾರ್ಯಕ್ರಮದಲ್ಲಿ ಶ್ರೀ ಮಠದ ಪಾರುಪತ್ತೆಗಾರರಾದ ಶ್ರೀ ಶ್ರೀಶ ಭಟ್ ಕಡೆಕಾರು, ಮಹಾಮಂಡಲದ ಅಧ್ಯಕ್ಷ ಜಯರಾಮ ಆಚಾರ್ಯ, ಕಾರ್ಯದರ್ಶಿ ರವೀಂದ್ರ ಆಚಾರ್ಯ, ಕೋಶಾಧಿಕಾರಿ ಕೃಷ್ಣಮೂರ್ತಿ ಆಚಾರ್ಯ ಹಾಗೂ ಮಹಿಳಾ ಅಧ್ಯಕ್ಷೆ ಶ್ರೀಮತಿ ಪದ್ಮಲತಾ ವಿಷ್ಣು ಉಪಸ್ಥಿತರಿದ್ದರು. ಹಾಗೆಯೇ ಮಹಾಮಂಡಲದ ಸದಸ್ಯರಾದ ವಾದಿರಾಜ ಆಚಾರ್ಯ, ರವಿಪ್ರಕಾಶ್ ಭಟ್, ರಘುಪತಿ ರಾವ್, ಶ್ರೀಮತಿ ಅಮಿತಾ ಕ್ರಮಧಾರಿ, ರಮಾಕಾಂತ್ ಭಟ್ ಸೇರಿದಂತೆ ಮೊದಲಾದ ಗಣ್ಯರು ಹಾಗೂ ಸದಸ್ಯರು ಈ ಶುಭ ಸಂದರ್ಭದಲ್ಲಿ ಹಾಜರಿದ್ದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top