ಅನುಷಾ ಅವರಿಗೆ ಪಿ.ಎಚ್.ಡಿ. ಪದವಿ

Shreya Hegde
0


ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ (ಎನ್.ಎಂ.ಎಂ.ಐ.ಟಿ.) ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಅನುಷಾ ಅವರು ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ.) ಪದವಿಗೆ ಭಾಜನರಾಗಿದ್ದಾರೆ.


ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಕುಮುದಾಕ್ಷೀ ಅವರ ಮಾರ್ಗದರ್ಶನದಲ್ಲಿ ನಡೆಸಿದ ಸಂಶೋಧನೆ ಹಾಗೂ ಮಂಡಿಸಿದ “ಲೇಬ್ಲಿಂಗ್ಸ್ ಆಫ್ ಡೈರೆಕ್ಟೆಡ್ ಗ್ರಾಫ್ಸ್ ಅಂಡ್ ದೆಯರ್ ಅಪ್ಲಿಕೇಷನ್ಸ್” ಎಂಬ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ.) ಪದವಿಯನ್ನು ಪ್ರದಾನ ಮಾಡಿದೆ. ಇವರು ಕುಂಟಲ್ಪಾಡಿಯ  ಮಹಾಬಲ ಪೂಜಾರಿ ಹಾಗೂ ಸುಜಾತಾ ಪೂಜಾರಿ ದಂಪತಿಯ ಪುತ್ರಿ ಹಾಗೂ ನಿಟ್ಟೆ ಸಂಪಿಗೆ ಎಂಟರ್‌ಪ್ರೈಸಸ್‌ನ ಮಾಲೀಕರಾದ  ಲತೇಶ್ ಅವರ ಧರ್ಮಪತ್ನಿಯಾಗಿದ್ದಾರೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top