ಸುರತ್ಕಲ್: ಬ್ರಾಹ್ಮಣ ಸಮಾಜದ ಸಮಗ್ರ ಕೈಪಿಡಿ ರಚನೆಗೆ ಗೌರವಾಧ್ಯಕ್ಷ ಪುರುಷೋತ್ತಮ ರಾವ್ ಕರೆ

Shreya Hegde
0



ಸುರತ್ಕಲ್: ಬ್ರಾಹ್ಮಣ ಮಹಾಸಭಾ ಸುರತ್ಕಲ್ ವಲಯ ಇದರ 29ನೇ ವಾರ್ಷಿಕ ಮಹಾಸಭೆ ಹಾಗೂ 27ನೇ ಸಾಮೂಹಿಕ ಶ್ರೀ ಶನೈಶ್ಚರ ಪೂಜೆಯು ಹೊಸಬೆಟ್ಟು ಕುಳಾಯಿಯ ಶ್ರೀ ಪುತ್ತಿಗೆ ಶಾಖೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಧ್ಯುಕ್ತವಾಗಿ ನೆರವೇರಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷರಾದ ಪಿ. ಪುರುಷೋತ್ತಮ ರಾವ್, ಬ್ರಾಹ್ಮಣ ಸಮಾಜದ ಎಲ್ಲಾ ಉಪ ಪಂಗಡದವರನ್ನು ಒಂದೆಡೆ ಸೇರಿಸಿ ಬಲಿಷ್ಠ ಸಂಘಟನೆಯನ್ನು ರೂಪಿಸುವ ಪ್ರಕ್ರಿಯೆ ನಿರಂತರವಾಗಿರಬೇಕು. ಜೊತೆಗೆ, ಸುರತ್ಕಲ್ ವಲಯದ ಬ್ರಾಹ್ಮಣ ಸಮಾಜದ ಸಮಗ್ರ ಮಾಹಿತಿಯುಳ್ಳ ಕೈಪಿಡಿಯನ್ನು ಪುನಃರಚಿಸುವ ತುರ್ತು ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. ಗಾಯತ್ರಿ ಮಾತೆಯ ಅನುಗ್ರಹ ಸಮಾಜದ ಮೇಲ್ಮೈಗೆ ಸದಾ ಇರಲಿ ಎಂದು ಅವರು ಹಾರೈಸಿದರು.


ಮಠದ ಮ್ಯಾನೇಜರ್ ಶ್ರೀ ಶ್ರೀನಿಧಿ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀ ಶನೈಶ್ಚರ ಪೂಜೆ ಮತ್ತು ಧಾರ್ಮಿಕ ವಿಧಿ-ವಿಧಾನಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು. ಮಹಾಪೂಜೆ ಹಾಗೂ ಪ್ರಾರ್ಥನೆಯ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ವಿಶ್ವೇಶ್ವರ ಬದವಿದೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top