ಸುಕನ್ಯಾ ವೃದ್ಧಾಶ್ರಮದಲ್ಲಿ 50 ಹಾಸಿಗೆಗಳ ನೂತನ ಕಟ್ಟಡದ ದ್ವಾರ ಬಾಗಿಲು ಜೋಡಣೆ

Upayuktha
0


ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಸಮೀಪದ ಭರಮಕೋಡಿಯಲ್ಲಿರುವ ಸುಕನ್ಯಾ ವೃದ್ಧಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ 50 ಹಾಸಿಗೆಗಳ ನೂತನ ಕಟ್ಟಡದ ದ್ವಾರ ಬಾಗಿಲು ಕೂಡರಿಸುವ ಕಾರ್ಯಕ್ರಮವು ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.


ಕಾರ್ಯಕ್ರಮದ ನೇತೃತ್ವವನ್ನು ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ನೂಲಿ ಮಠದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯರು ಹಾಗೂ ಮರಡಿ ಮಠದ ಶ್ರೀ ಪವಾಡೇಶ್ವರ ಶಿವಾಚಾರ್ಯರು ವಹಿಸಿದ್ದರು. ಮೂರೂ ಮಠದ ಪೂಜ್ಯ ಶಿವಾಚಾರ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ನೂತನ ಕಟ್ಟಡದ ಮುಖ್ಯ ದ್ವಾರ ಬಾಗಿಲನ್ನು ಪ್ರತಿಷ್ಠಾಪಿಸಲಾಯಿತು. 


ಇದೇ ಸಂದರ್ಭದಲ್ಲಿ ಆಶ್ರಮದ ನೂತನ ಕಟ್ಟಡದ ನಿರ್ಮಾಣಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಶಿವಾಚಾರ್ಯರ ಅಮೃತ ಹಸ್ತದಿಂದ ಸನ್ಮಾನಿಸಿ ಗೌರವಿಸಲಾಯಿತು.


ಆಶೀರ್ವಚನ ನೀಡಿದ  ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯರು, "ವೃದ್ಧರನ್ನು ಮತ್ತು ಅಸಹಾಯಕರನ್ನು ಸಾಕುವುದು ಅತ್ಯಂತ ಪುಣ್ಯದ ಕೆಲಸ. ಸುಕನ್ಯಾ ವೃದ್ಧಾಶ್ರಮವು ಇಂತಹ ಸಮಾಜಮುಖಿ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ. 


ಅದರಲ್ಲೂ ವಿಶೇಷವಾಗಿ ಆಶ್ರಮದ ಸಂಸ್ಥಾಪಕ ಅಧ್ಯಕ್ಷರಾದ ಮಹಾದೇವ ಬಿರಾದಾರ ಹಾಗೂ ಅವರ ಧರ್ಮಪತ್ನಿ ಭಾಗ್ಯವಂತಿ ಬಿರಾದಾರ ಅವರ ಸೇವಾ ಕಾರ್ಯಗಳು ಅತ್ಯಂತ ಶ್ಲಾಘನೀಯವಾದದ್ದು. 


ಆಶ್ರಮದ ಕಟ್ಟಡಕ್ಕೆ ತನು-ಮನ-ಧನದಿಂದ ಸಹಕರಿಸಿದ ದಾನಿಗಳ ನಡೆ ಎಲ್ಲರಿಗೂ ಮಾದರಿ" ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ, ಅಜ್ಜಯ್ಯ ಚಿಕ್ಕಜಾಜೂರ, ಅಪ್ಪಯ್ಯ ಹಿರೇಮಠ, ಈರಪ್ಪಾ ಆಜೂರ, ಭೀಮಾಶಂಕರ ಶರಣರು, ಶ್ರೀ ಸ್ವಾಮಿ ವಿವೇಕಾನಂದ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆ ಅಧ್ಯಕ್ಷ ಪ್ರವೀಣ ನಾಯಿಕ, ಸುರೇಶ ಕುಲಕರ್ಣಿ, ಶಿವಾನಂದ ಚಮಕೇರಿ ಸೇರಿದಂತೆ ಅನೇಕ ಮುಖಂಡರು, ಆಶ್ರಮದ ಹಿತೈಷಿಗಳು ಹಾಗೂ ಸಾರ್ವಜನಿಕರು ಮಹಿಳೆಯರು ಉಪಸ್ಥಿತರಿದ್ದರು.

ವರದಿ: ಮಹೇಶ್ ಶರ್ಮಾ



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top