ಪುತ್ತೂರು: ಪ್ರಸಾದಿನೀ ಆಯುರ್ನಿಕೇತನ ಆಸ್ಪತ್ರೆಯಲ್ಲಿ ‘ಪ್ರಥಮ ಚಿಕಿತ್ಸೆ ಮತ್ತು ಜೀವ ರಕ್ಷಣಾ ಕೌಶಲ್ಯಗಳು’ ಕಾರ್ಯಾಗಾರ

Upayuktha
0

ಪುತ್ತೂರು: ಇಲ್ಲಿನ ನರಿಮೊಗರಿನ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ 2026ರ ಸೆಪ್ಟೆಂಬರ್ 15ರ ಮಂಗಳವಾರದಂದು ‘ಪ್ರಥಮ ಚಿಕಿತ್ಸೆ ಮತ್ತು ಜೀವ ರಕ್ಷಣಾ ಕೌಶಲ್ಯಗಳು’ ಕುರಿತು ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.


ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಕೆಐಒಸಿಎಲ್ (KIOCL) ಸಂಸ್ಥೆಯ ನಿವೃತ್ತ ವೈದ್ಯಕೀಯ ಅಧೀಕ್ಷಕರು ಹಾಗೂ ಅನುಭವಿ ವೈದ್ಯರಾದ ಡಾ. ಬಿ. ರಾಮಚಂದ್ರ ಭಟ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ತರಬೇತಿ ನೀಡಲಿದ್ದಾರೆ.


ಕಾರ್ಯಾಗಾರದಲ್ಲಿ- ಪ್ರಥಮ ಚಿಕಿತ್ಸೆಯ ಮೂಲಭೂತ ಮಾಹಿತಿ ಮತ್ತು ತತ್ವಗಳು; ತುರ್ತು ಪರಿಸ್ಥಿತಿಗಳನ್ನು ಶೀಘ್ರವಾಗಿ ಗುರುತಿಸುವುದು ಹಾಗೂ ಅವುಗಳ ಸೂಕ್ತ ನಿರ್ವಹಣೆ; ಸಿಪಿಆರ್ (CPR) ಮತ್ತು ಜೀವ ರಕ್ಷಣೆಯ ಪ್ರಮುಖ ತಂತ್ರಗಳ ವಿವರಣೆ; ದೈನಂದಿನ ಹಾಗೂ ಸಾಮಾನ್ಯ ವೈದ್ಯಕೀಯ ತುರ್ತು ಪರಿಸ್ಥಿತಿಗಳ ನಿರ್ವಹಣೆ; ಪ್ರಾಯೋಗಿಕ ಪ್ರಾತ್ಯಕ್ಷಿಕೆ ಮತ್ತು ಹಸ್ತಪ್ರಯೋಗ (Hands-on) ಅಭ್ಯಾಸ ಕುರಿತು ತರಬೇತಿ ನೀಡಲಾಗುವುದು.


ಆಪತ್ತಿನ ಸಮಯದಲ್ಲಿ ಸೂಕ್ತ ಸಮಯದಲ್ಲಿ ಸಿಗುವ ಸಣ್ಣ ಜ್ಞಾನವೂ ದೊಡ್ಡ ಜೀವಗಳನ್ನು ಉಳಿಸಬಲ್ಲದು ಎಂಬ ಆಶಯದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ನರ್ಸಿಂಗ್ ಸಿಬ್ಬಂದಿ, ಆಸ್ಪತ್ರೆಯ ಸಿಬ್ಬಂದಿವರ್ಗ ಹಾಗೂ ಸಾರ್ವಜನಿಕರಿಗೆ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.


ವಿವರಗಳಿಗೆ ಸಂಪರ್ಕಿಸಿ:

ಸ್ಥಳ: ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ನರಿಮೊಗರು, ಪುತ್ತೂರು, ಕರ್ನಾಟಕ. ದೂರವಾಣಿ ಸಂಖ್ಯೆ: 9740545979



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top