ಶಿವಮೊಗ್ಗದಲ್ಲಿ ನರ್ಸಿಂಗ್ ಅಸಿಸ್ಟೆಂಟ್ ತರಬೇತಿಗೆ ದಾಖಲಾತಿ: ಹೆಣ್ಣು ಮಕ್ಕಳಿಗೆ ಆದ್ಯತೆ

Shreya Hegde
0

ಶಿವಮೊಗ್ಗದ ಮಾನಸ ಟ್ರಸ್ಟ್ನ ಮಾನಸ ವೃತ್ತಿ ತರಬೇತಿ ಕೇಂದ್ರದ ವತಿಯಿಂದ ಎರಡು ವರ್ಷಗಳ ಪೇಷಂಟ್ ಕೇರಿಂಗ್ ಹಾಗೂ ನರ್ಸಿಂಗ್ ವೃತ್ತಿ ಕೌಶಲ್ಯ ತರಬೇತಿ ಕೋರ್ಸುಗಳಿಗೆ ದಾಖಲಾತಿ ನಡೆಸಲಾಗುತ್ತಿದೆ .ರಾಷ್ಟ್ರೀಯ ವೃತ್ತಿ ತರಬೇತಿ ಪರಿಷತ್ತಿನ ಎರಡು ವರ್ಷಗಳ ರೋಗಿಗಳ ಆರೈಕೆ ಕುರಿತ ನರ್ಸಿಂಗ್ ಅಸಿಸ್ಟೆಂಟ್ ತರಬೇತಿ ಕೋರ್ಸುಗಳಿಗೆ ದಾಖಲಾತಿ ನಡೆಯುತ್ತಿದೆ .ಈ ಕೋರ್ಸಿಗೆ ದಾಖಲಾಗಲು ಹತ್ತನೇ ತರಗತಿ ಉತ್ತೀರ್ಣರಾದ ಅಥವಾ ಯಾವುದೇ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಅವಕಾಶವಿದೆ .


ಆರ್ಥಿಕವಾಗಿ ಹಿಂದುಳಿದ  ಕುಟುಂಬಗಳಿಂದ ಬಂದ ವಿದ್ಯಾರ್ಥಿನಿಯರಿಗೆ ಈ ದಾಖಲಾತಿಗೆ ಆದ್ಯತೆ ಇದೆ. ಅವಧಿಯುವುದಕ್ಕೂ ಪ್ರತಿ ತಿಂಗಳು ರೂ 900 ರಷ್ಟು ಸ್ಟೈಫಂಡ್ ಪಡೆಯಲು ಅವಕಾಶವಿದ್ದು ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ .ಎರಡು ವರ್ಷಗಳ ತರಬೇತಿಯ ನಂತರ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗದ ಅವಕಾಶಗಳು ಲಭ್ಯವಾಗುತ್ತದೆ. ಕೇಂದ್ರ ಸರಕಾರದ ರಾಷ್ಟ್ರೀಯ ವೃತ್ತಿ ತರಬೇತಿ ಪರಿಷತ್ತಿನ ಮಾನ್ಯತೆಯನ್ನು ಈ ಕೋರ್ಸು ಹೊಂದಿದೆ ಆದುದರಿಂದ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣು ಮಕ್ಕಳು ಈ ಕೋರ್ಸಿಗೆ ಸೇರಲು ಇನ್ನೂ 15 ದಿನಗಳ ಅವಕಾಶವಿದೆ ಎಂದು ಮಾನಸ ನರ್ಸಿಂಗ್ ಹೋಮ್ನ ಮುಖ್ಯಸ್ಥರಾದ ಡಾ. ಪ್ರೀತಿ ಶಾನುಭಾಗ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಆಸಕ್ತ ಅಭ್ಯರ್ಥಿಗಳು ಮಾನಸ ನರ್ಸಿಂಗ್ ಹೋಮ್ನ ಕಚೇರಿಯನ್ನು ಖುದ್ದಾಗಿ ಭೇಟಿ ಮಾಡಲು ಈ ಮೂಲಕ ಸೂಚಿಸಲಾಗಿದೆ. ಅಥವಾ ದೂರವಾಣಿ ಸಂಖ್ಯೆ 944 8288489 ಗೆ ಸಂಪರ್ಕಿಸಲು ತಿಳಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top