ಮಂಗಳೂರು: "ಮುಂದಿನ ಪೀಳಿಗೆಯ ಹಣಕಾಸು ಮೂಲಸೌಕರ್ಯವು ಭವಿಷ್ಯದ ಅಪಾಯಗಳನ್ನು ಎದುರಿಸುವಷ್ಟು ಸ್ಥಿತಿಸ್ಥಾಪಕತ್ವ ಹೊಂದಿರಬೇಕು ಎಂದು ನ್ಯಾಷನಲ್ ಪೇಮೆಂಟ್ಸ್ ಕಾಪ್ರೋರೇಷನ್ ಆಫ್ ಇಂಡಿಯಾ (ಎನ್‍ಪಿಸಿಐ ನಾನ್ ಎಕ್ಸಿಕ್ಯೂಟಿವ್ ಚೇರ್‍ಮನ್ ಹಾಗೂ ಸ್ವತಂತ್ರ ನಿರ್ದೇಶಕರಾದ ಅಜಯ್ ಕುಮಾರ್ ಚೌಧರಿ ಹೇಳಿದರು.
ಈ ಹಣಕಾಸು ಮೂಲಸೌಕರ್ಯ ನೈಜ ಉದ್ದೇಶವನ್ನು ಅರ್ಥಮಾಡಿಕೊಳ್ಳುವಷ್ಟು ಜಾಣ್ಮೆ ಹೊಂದಿರಬೇಕು; ಮೌಲ್ಯವನ್ನು ಸಮನ್ವಯಗೊಳಿಸುವಷ್ಟು ಕಾರ್ಯಸಾಧುವಾಗಿರಬೇಕು. ಪ್ರತಿಯೊಬ್ಬ ನಾಗರಿಕನಿಗೂ ಸೇವೆ ಒದಗಿಸುವಂತಾಗಬೇಕು ಎಂದು 7ನೇ ಗ್ಲೋಬಲ್ ಫಿನ್‍ಟೆಕ್ ಫೆಸ್ಟ್‍ನಲ್ಲಿ ಅಭಿಪ್ರಾಯಪಟ್ಟರು.
ಹಣಕಾಸು ವ್ಯವಸ್ಥೆಯು ಈಗ ಹೊಸ ಹಂತವನ್ನು ಪ್ರವೇಶಿಸುತ್ತಿದ್ದು, ಇಲ್ಲಿ ವ್ಯವಸ್ಥೆಗಳು ಹೆಚ್ಚು ಬುದ್ಧಿವಂತವಾಗುತ್ತಿವೆ, ಆಸ್ತಿಗಳು ಮತ್ತು ವಹಿವಾಟುಗಳು ಹೆಚ್ಚು ಕಾರ್ಯಸಾಧು ಆಗುತ್ತಿವೆ ಹಾಗೂ ಡಿಜಿಟಲ್ ವಿಶ್ವಾಸದ ಪರಿಕಲ್ಪನೆಯೇ ಮರುರೂಪಗೊಳ್ಳುತ್ತಿದೆ ಎಂದು ಹೇಳಿದರು.
ಕಳೆದ ತಿಂಗಳಿನಲ್ಲಿ ಯುಪಿಐ ಮೂಲಕ 752 ಬ್ಯಾಂಕ್‍ಗಳ ಸಹಭಾಗಿತ್ವದಲ್ಲಿ 24.5 ಶತಕೋಟಿಗೂ ಅಧಿಕ ವಹಿವಾಟುಗಳು ನಡೆದಿದ್ದು, ಇದರ ಮೌಲ್ಯ 29.8 ಲಕ್ಷ ಕೋಟಿ ರೂಪಾಯಿ ಆಗಿದೆ. ಯುಪಿಐ ಕೇವಲ ಪಾವತಿ ಇಂಟರ್‍ಫೇಸ್‍ನಿಂದ ವಿಕಸನಗೊಂಡು, ಇಂದು ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಮೂಲಸೌಕರ್ಯವಾಗಿ ರೂಪುಗೊಂಡಿದೆ ವಿಶ್ಲೇಷಿಸಿದರು.
ಬುದ್ಧಿಮತ್ತೆ, ಪ್ರೋಗ್ರಾಮೆಬಿಲಿಟಿ ಮತ್ತು ವಿಶ್ವಾಸ ಈ ಮೂರೂ ಒಟ್ಟಾಗಿ ಕಾರ್ಯನಿರ್ವಹಿಸಿದಾಗಲೇ ನಿಜವಾದ ಪರಿವರ್ತನೆ ಹೊರಹೊಮ್ಮಲಿದೆ ಎಂದು ಅವರು ಹೇಳಿದರು. ಆದಾಗ್ಯೂ, ಈ ತಂತ್ರಜ್ಞಾನಗಳು ಪರಸ್ಪರ ಒಂದಾಗುತ್ತಾ ಸಾಗಿದಂತೆ, ಅವುಗಳಿಗೆ ಸಂಬಂಧಿಸಿದ ಅಪಾಯಗಳೂ ಪರಸ್ಪರ ಸಂಪರ್ಕ ಹೊಂದುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


