ಕವನ: ಶ್ರೀ ಆನಂದದಾಸರು

Shreya Hegde
0


ಶ್ರೀ ಆನಂದದಾಸರೆಂಬ ಸುರ ಸಂಜೀವಿನಿಯು

ಒಲಿದು ಬಂತು ಸುರಪುರಕೆ ಅಮೃತಕಲಶವಾಗಿ

ಗಾನ ಗಂಧರ್ವನು ಕೀರ್ತನ ಕೇಸರಿ ಕವಿರಾಜನು

ವಿಶ್ವವಂದಿತ ಮಂಚಾಲಯ ಗುರುಪ್ರೀತಿ ಸಿಂಚನ!


ದಾಸಶ್ರೇಷ್ಠ ಪರಂಪರೆಯ ಹೆಮ್ಮೆಯ ಪ್ರತೀಕರಿವರು

ಕೋಲ್ಲಾಪುರದ ಲಕುಮಿಯ ಒಲಿಸಿಕೊಂಡ ಶುಭಕರ

ಕನಕಾಭಿಷೇಕವೇ ನಡೆದು ಹೋಯಿತು ದಾಸರಿಗೆ

ಮೈಸೂರು ಅರಸರಿಂದ ದಿವ್ಯಕಾಂತಿಯ ಸುರರಿಗೆ!


ಕಾರುಣ್ಯದ ಕಡಲಿನ ಭಕ್ತಿರಸ ಪ್ರಸಾದದ ದೊರೆಯೇ

ವೇಣುಲೋಲನ ಒಡೋಲಗದ ಕೊಳಲಗಾನಿಯೇ

ಹಾರಿ ಹೋಯಿತಲ್ಲಾ ಪ್ರಾಣಪಕ್ಷಿ ದ್ವಾದಶಿಯಂದು

ಕೀರ್ತನೆ ಮಾಡುತಿರುವಾಗಲೇ ದೇವ ಸನ್ನಿಧಿಯಲಿ!


ಸುರಪುರದ ಹೆಮ್ಮೆಯ ಗಾನಕೋಗಿಲೆ ಪರುಷಮಣಿಯು

ಆನಂದದಿಂ ಹಾಡುತಿದೆ ಈಗಲೂ ವೇಣುಲೋಲನಲಿ!

'ಶ್ರೀಜಾ' ನಮಿಸುವನು ಗುರುರಾಯರ ಪರಮ ಭಕುತಗೆ

ತಿರುಪತಿ ಶ್ರೀನಿವಾಸನ ದೈವಸನ್ನಿಧಿ ಸುರವೇಣುಗಿರಿಗೆ!


- ಶ್ರೀನಿವಾಸ ಜಾಲವಾದಿ ಸುರಪುರ

Tags

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top