ಪೇಜಾವರ ಶ್ರೀಗಳ ಚಾತುರ್ಮಾಸ್ಯ: ನವದೆಹಲಿ ಗುರುಕುಲಕ್ಕೆ ಆರ್‌ಎಸ್‌ಎಸ್ ಸರಕಾರ್ಯವಾಹರ ಭೇಟಿ

Shreya Hegde
0


ನವದೆಹಲಿ: ಗುರುವಾರ ಬೆಳಿಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಮಾನ್ಯ ಶ್ರೀ ದತ್ತಾತ್ರೇಯ ಹೊಸಬಾಳೆಯವರು ನವದೆಹಲಿಯಲ್ಲಿರುವ ವೇದವ್ಯಾಸ ಗುರುಕುಲಕ್ಕೆ ಭೇಟಿ ನೀಡಿ ಸಂಚಲನ ಮೂಡಿಸಿದರು. ಗುರುಕುಲದ ಮಕ್ಕಳ ಬೆಳಿಗ್ಗಿನ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಅವರು, ವಿದ್ಯಾರ್ಥಿಗಳಿಗೆ ಶುಭ ಸಂದೇಶ ನೀಡಿ ಸತ್ಪ್ರೇರಣೆ ತುಂಬಿದರು. ಅಲ್ಲದೆ, ಎಲ್ಲಾ ಮಕ್ಕಳಿಗೂ ಫಲ ವಿತರಿಸಿ ಪ್ರೋತ್ಸಾಹಿಸಿದರು. ಈ ವಿಶೇಷ ಸಂದರ್ಭದಲ್ಲಿ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಕೃಷ್ಣ ಗೋಪಾಲ್ ಅವರು ಸಹ ಉಪಸ್ಥಿತರಿದ್ದರು.



ಬಳಿಕ ಮಾತನಾಡಿದ ಪೇಜಾವರ ಶ್ರೀಗಳು, ಶ್ರೇಷ್ಠ ಭಾರತ ನಿರ್ಮಾಣ ಕಾರ್ಯದಲ್ಲಿ ಸಂಘ (RSS) ನಿರ್ವಹಿಸುತ್ತಿರುವ ಉತ್ಕೃಷ್ಟ ಕಾರ್ಯಗಳನ್ನು ಕೊಂಡಾಡಿದರು. ಶ್ರೀ ಹೊಸಬಾಳೆಯವರು ಸೇರಿದಂತೆ ನೂರಾರು ನೇತಾರರು ದಶಕಗಳಿಂದ ರಾಷ್ಟ್ರಕಾರ್ಯದಲ್ಲಿ ಸಲ್ಲಿಸುತ್ತಿರುವ ಪರಿಶುದ್ಧ ಹಾಗೂ ತ್ಯಾಗಪೂರ್ಣ ಸೇವೆಯನ್ನು ಶ್ರೀಗಳು ವಿಶೇಷವಾಗಿ ಅಭಿನಂದಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಇಬ್ಬರೂ ಗಣ್ಯರನ್ನು ಶಾಲು ಹೊದಿಸಿ ಸನ್ಮಾನಿಸಿ, ಆಶೀರ್ವಾದ ಮಾಡಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top