ಪೆರ್ನೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಪೆರ್ನೆ ವಲಯದ ಕೆದಿಲ ಬಿ ಒಕ್ಕೂಟದ ಸಹಭಾಗಿತ್ವದಲ್ಲಿ ಸಾಮೂಹಿಕ ಶ್ರೀ ಧನ್ವಂತರಿ ಪೂಜೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಕೃಷ್ಣ ಭಟ್ ಮೀರಾವನ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾನ್ಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ಬಾಬು ನಾಯ್ಕ ರವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜಕ್ಕೆ ತಲುಪುತ್ತಿರುವ ವಿವಿಧ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣ ಕಾರ್ಯಕ್ರಮಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಪೆರ್ನೆ ವಲಯದ ಮೇಲ್ವಿಚಾರಕರಾದ ಲತೇಶ್ ರವರು ಸಮಸ್ತ ಅಭ್ಯಾಗತರನ್ನು ಹಾಗೂ ಬಂಧುಗಳನ್ನು ಆದರದಿಂದ ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಮೀನಾಕ್ಷಿ, ವೀಣಾ ಸರಸ್ವತಿ, ರಚನ್ ಕುಮಾರ್, ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ವಿಶ್ವನಾಥ ಗೌಡ, ಗೋಪಾಲಕೃಷ್ಣ ಭಟ್, ವಸಂತ ಭಟ್, ರಾಬರ್ಟ್ ಫೆರ್ನಾಂಡಿಸ್, ಚೆನ್ನಪ್ಪ ಕುಲಾಲ್ ಹಾಗೂ ಸೇವಾಪ್ರತಿನಿಧಿಗಳಾದ ಜಯಂತಿ ಮತ್ತು ಶಾರದಾ ರವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.
ಅಂತಿಮವಾಗಿ, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಣೆಯನ್ನು ಶ್ರೀಮತಿ ರಮ್ಲತ್ ರವರು ನೆರವೇರಿಸಿದರು.
