ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್‌ನಿಂದ ಶ್ರೀ ಅಪ್ಪಣಾಚಾರ್ಯರಿಗೆ ನಮನ

Shreya Hegde
0



ಹುಬ್ಬಳ್ಳಿ: ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಹರಿಪಾದ ಸೇರಿದ ಕೀರ್ತಿಶೇಷರಾದ ಶ್ರೀ ಅಪ್ಪಣಾಚಾರ್ಯ ಅವರಿಗೆ ಸಂಸ್ಮರಣ ಶ್ರದ್ಧಾಂಜಲಿ ಸಭೆಯನ್ನು ಸೆಪ್ಟೆಂಬರ್ 22ರಂದು ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದ ಆರಂಭದಲ್ಲಿ ದಿವಂಗತರ ಆತ್ಮಕ್ಕೆ ಶಾಂತಿ ಕೋರಿ ಎಲ್ಲರೂ ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು. ತದನಂತರ ಡಾ. ವಿದ್ಯಾ ಕಸಬೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಾರ್ಯಕ್ರಮದ ನಿರೂಪಣೆಯನ್ನು ಶಿಸ್ತುಬದ್ಧವಾಗಿ ನಡೆಸಿಕೊಟ್ಟರು.


ಈ ಸಂಸ್ಮರಣಾ ಸಭೆಯಲ್ಲಿ ಡಾ. ಜಯಲಕ್ಷ್ಮಿ ಮಂಗಳಮೂರ್ತಿ, ಡಾ. ಸುಧಾ ದೇಶಪಾಂಡೆ, ಡಾ. ಶಾಂತಾ ಘೋತ್ತಮಾಚಾರ, ಡಾ. ರಾಜಶ್ರೀ ಕಲ್ಲೂರಕರ್, ಗೀತಾ ಮಿರ್ಜಿ, ಜಯಶ್ರೀ,  ಪ್ರಿಯಾ ಹರಿದಾಸ,  ಉಷಾ ಅಗರಖೇಡ, ಅನ್ನಪೂರ್ಣ, ಧಾತ್ರಿ ಡಿಗ್ಗಿಕರ್, ಡಾ. ಶೈಲಜಾ ಕೊಪ್ಪರ, ಸುಮಾ,  ವೀಣಾ ಬರಗಿ, ವೃಂದಾ ಸಂಗಮ್, ಡಾ. ವಿದ್ಯಾಶ್ರೀ ಕುಲಕರ್ಣಿ ಹಾಗೂ ಡಾ. ಶೈಲಾ ದಾಸ್ ಭಾಗವಹಿಸಿದ್ದರು.


ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಶ್ರೀ ಅಪ್ಪಣಾಚಾರ್ಯ ಅವರ ಸಾಹಿತ್ಯಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದ ಅಪಾರ ಸಾಧನೆ, ಅವರಲ್ಲಿದ್ದ ಸಂಘಟನಾ ಶಕ್ತಿ ಮತ್ತು ಕೊನೆಯವರೆಗೂ ಕಾಯ್ದುಕೊಂಡಿದ್ದ ಸಜ್ಜನಿಕೆಯ ಗುಣಗಳನ್ನು ಸ್ಮರಿಸಿ, ಮನದುಂಬಿ ಶ್ರದ್ಧಾಂಜಲಿ ನುಡಿಗಳನ್ನು ಸಲ್ಲಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top