ಅಜ್ಮಾನ್, ಯುಎಇ: ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯು ಇಂದು ತುಂಬೆ ಗ್ರೌಂಡ್ಸ್‌ನಲ್ಲಿ ನಡೆದ 2026ನೇ ಸಾಲಿನ ವೈಟ್ ಕೋಟ್ ಸಮಾರಂಭದಲ್ಲಿ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸಿತು. ಈ ಮೂಲಕ ವಿಶ್ವವಿದ್ಯಾಲಯವು ಜಾಗತಿಕ ಮಟ್ಟದಲ್ಲಿ ಅಪರೂಪದ ಮೈಲಿಗಲ್ಲೊಂದನ್ನು ತಲುಪಿದೆ. ಈ ಹೊಸ ಬ್ಯಾಚ್‌ನ ಸೇರ್ಪಡೆಯೊಂದಿಗೆ, ಜಿಎಂಯು ತನ್ನ ಸ್ಥಾಪನೆಯಿಂದೀಚೆಗೆ ಒಟ್ಟು 115 ರಾಷ್ಟ್ರೀಯತೆಗಳ ವಿದ್ಯಾರ್ಥಿಗಳನ್ನು ಹೊಂದಿದ ಹೆಗ್ಗಳಿಗೆ ಪಾತ್ರವಾಗಿದೆ.
ಬೆಳಗ್ಗೆ ಹಾಗೂ ಮಧ್ಯಾಹ್ನ ನಡೆದ ಸಮಾರಂಭದಲ್ಲಿ ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ತುಂಬೆ ಮೊಯ್ದೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಚಾನ್ಸೆಲರ್ ಪ್ರೊ. ಮಂಡ ವೆಂಕಟರಮಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹೊಸ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ತುಂಬೆ ಮೊಯ್ದೀನ್, "ಗಲ್ಫ್‌ನ ಅತ್ಯುತ್ತಮ ವಿಶ್ವವಿದ್ಯಾಲಯವಾಗಿದ್ದ ನಾವು, ಈಗ ವಿಶ್ವದ ಅತ್ಯುತ್ತಮ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದೇವೆ" ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರೊ. ವೆಂಕಟರಮಣ ಮಾತನಾಡಿ, ಈ ಸಮಾರಂಭವು ಯಾವುದೇ ಸಾಧನೆಯಲ್ಲ, ಬರಿ ಇದು ಕೇವಲ ಒಂದು ಶುಭಾರಂಭ ಎಂದರು. "ವೈಟ್ ಕೋಟ್ ಧರಿಸಿದ ಮಾತ್ರಕ್ಕೆ ಯಾರೂ ವೈದ್ಯರಾಗುವುದಿಲ್ಲ. ನಿರಂತರವಾಗಿ ಉತ್ತಮ ಪ್ರಶ್ನೆಗಳನ್ನು ಕೇಳುತ್ತಾ ಸಾಗುವುದೇ ಮುಖ್ಯ. ಈ ಬ್ಯಾಚ್‌ನಿಂದ ನಾವು ಬಯಸುವುದು ಸರಳವಾದ ವಿಷಯಗಳನ್ನು ಮಾತ್ರ: ಕುತೂಹಲದಿಂದಿರಿ, ನಿಮಗೆ ತಿಳಿಯದ ವಿಷಯಗಳ ಬಗ್ಗೆ ಪ್ರಾಮಾಣಿಕವಾಗಿರಿ ಮತ್ತು ವಿಜ್ಞಾನವು ಎಂದಿಗೂ ದಯೆಗಿಂತ ಮುಂದಾಗದಂತೆ ನೋಡಿಕೊಳ್ಳಿ" ಎಂದರು.
ವ್ಯಾಪಕ ಶೈಕ್ಷಣಿಕ ಕಾರ್ಯಕ್ರಮಗಳು: ದಂತವಿದ್ಯತೆ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಮೆಡಿಕಲ್ ಲ್ಯಾಬೊರೇಟರಿ ಸೈನ್ಸ್, ಅನೆಸ್ತೇಶಿಯಾ ತಂತ್ರಜ್ಞಾನ, ಮೆಡಿಕಲ್ ಇಮೇಜಿಂಗ್ ಸೈನ್ಸ್, ಆಡಿಯಾಲಜಿ, ಆಪ್ಟೋಮೆಟ್ರಿ, ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮುಂತಾದ ಕೋರ್ಸ್‌ಗಳ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು. ಜೊತೆಗೆ, ಎಂಬಿಬಿಎಸ್, ಗ್ರಾಜುಯೇಟ್ ಎಂಟ್ರಿ ಎಂಡಿ, ಬಯೋಮೆಡಿಕಲ್ ಸೈನ್ಸ್ ಮತ್ತು ತುಂಬೆ ಇಂಟರ್‌ನ್ಯಾಷನಲ್ ಪಾಥ್‌ವೇ ಪ್ರೋಗ್ರಾಮ್ ವಿದ್ಯಾರ್ಥಿಗಳು ಕೂಡ ಪಾಲ್ಗೊಂಡಿದ್ದರು. ಅಜ್ಮಾನ್‌ಗೆ ಪ್ರಯಾಣಿಸಲು ಸಾಧ್ಯವಾಗದ ವಿದ್ಯಾರ್ಥಿಗಳ ಪೋಷಕರು ನೇರ ಪ್ರಸಾರದ ಮೂಲಕ ವೀಕ್ಷಿಸಿದರು.
ಪ್ರಥಮ ಬಾರಿಗೆ ವೆಟ್ರಿನರಿ (ಪಶುವೈದ್ಯಕೀಯ) ಬ್ಯಾಚ್: ಯುಎಇಯಲ್ಲೇ ಪ್ರಥಮ ಬಾರಿಗೆ ಜಿಎಂಯುನ ಡಾಕ್ಟರ್ ಆಫ್ ವೆಟ್ರಿನರಿ ಮೆಡಿಸಿನ್ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ತೊಡಿಸುವ ಕಾರ್ಯಕ್ರಮ ನಡೆಯಿತು. ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವಾಲಯದ ಪ್ರಾಣಿ ಆರೋಗ್ಯ ಮತ್ತು ಅಭಿವೃದ್ಧಿ ನಿರ್ದೇಶಕರಾದ ಡಾ. ಕಲ್ಥಮ್ ಅಲಿ ಕಯಾಫ್ ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಕೋಟ್ ತೊಡಿಸಿದರು.
ಒನ್ ಹೆಲ್ತ್ ಪರಿಕಲ್ಪನೆ: ಮುಂಬರುವ ದಿನಗಳಲ್ಲಿ ತುಂಬೆ ಮೆಡಿಸಿಟಿಯಲ್ಲಿ 'ತುಂಬೆ ವೆಟ್ರಿನರಿ ಆಸ್ಪತ್ರೆ' ಆರಂಭವಾಗಲಿದೆ. ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯವನ್ನು ಪ್ರತ್ಯೇಕವಾಗಿ ನೋಡದೆ, ಒಂದೇ ವ್ಯವಸ್ಥೆಯಾಗಿ ಬೋಧಿಸುವ ಮತ್ತು ಅಭ್ಯಾಸ ಮಾಡುವ ವಿನೂತನ ವಿಧಾನವನ್ನು ಜಿಎಂಯು ಅಳವಡಿಸಿಕೊಂಡಿದೆ.
ಸಂಸ್ಥೆಯ ಹಿನ್ನೆಲೆ:
1998ರಲ್ಲಿ ಅಜ್ಮಾನ್‌ನಲ್ಲಿ ಸ್ಥಾಪಿತವಾದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ, ಈ ಪ್ರದೇಶದ ಪ್ರಮುಖ ಖಾಸಗಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ತುಂಬೆ ಗ್ರೂಪ್‌ನ ಭಾಗವಾಗಿರುವ ಜಿಎಂಯು, ಈ ಪ್ರದೇಶದಲ್ಲೇ ಅತ್ಯಂತ ದೊಡ್ಡದಾದ 3,100 ಹಾಸಿಗೆಗಳ ಕ್ಲಿನಿಕಲ್ ತರಬೇತಿ ಜಾಲವನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ gmu.ac.ae ವೆಬ್‌ಸೈಟ್ ಭೇಟಿ ನೀಡಿ.


