ಹುಬ್ಬಳ್ಳಿಯಲ್ಲಿ ‘ಉತ್ತಮ ತಪ ಧರ್ಮ’ದ ಮಹತ್ವ ಕುರಿತು ಉಪನ್ಯಾಸ

Shreya Hegde
0


ಹುಬ್ಬಳ್ಳಿ: ಸ್ಥಳೀಯ ದಿಗಂಬರ ಜೈನ್ ಬೋರ್ಡಿಂಗ್, ಹುಬ್ಬಳ್ಳಿ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಬ್ರಾಹ್ಮೀಲಾ ಮಹಿಳಾ ಪರಿಷತ್, ಹುಬ್ಬಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪವಿತ್ರ ದಶಲಕ್ಷಣ ಪರ್ವದ ಅಂಗವಾಗಿ ಏಳನೇ ದಿನದ “ಉತ್ತಮ ತಪ ಧರ್ಮ” ಕಾರ್ಯಕ್ರಮವು ಧಾರ್ಮಿಕ ಹಾಗೂ ಅರ್ಥಪೂರ್ಣವಾಗಿ ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಭಾರತ ಜೈನ್ ಸಭೆಯ ಉಪಾಧ್ಯಕ್ಷರಾದ ಬಾಹುಬಲಿ ವಹಿಸಿದ್ದರು. ಚೇತನ್ ವಾಣಿಜ್ಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ಭಾಗ್ಯಶ್ರೀ ಎಸ್. ಬಳಿಗಾರ (ಕಾಶಿನ) ಅವರು ಮುಖ್ಯ ಉಪನ್ಯಾಸಕರಾಗಿ ಆಗಮಿಸಿ, “ಉತ್ತಮ ತಪ” ಧರ್ಮದ ಮಹತ್ವ, ಆತ್ಮಶುದ್ಧಿ, ಆತ್ಮೋನ್ನತಿ ಹಾಗೂ ಧಾರ್ಮಿಕ ಜೀವನದಲ್ಲಿ ತಪಸ್ಸಿನ ಪಾತ್ರದ ಕುರಿತು ಮನಮುಟ್ಟುವಂತೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಭಾಗ್ಯಶ್ರೀ ಬಳಿಗಾರ ಅವರು, ದಶಲಕ್ಷಣ ಪರ್ವದ ಪಾವನ ಸಂದರ್ಭದಲ್ಲಿ ಧರ್ಮಬಂಧುಗಳ ಸಮ್ಮುಖದಲ್ಲಿ “ಉತ್ತಮ ತಪ” ವಿಷಯದ ಕುರಿತು ಮಾತನಾಡಲು ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿ, ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ  ಜಿ. ಜಿ. ಲೋಬೊಗೋಳ, ದಿಗಂಬರ ಜೈನ್ ಬೋರ್ಡಿಂಗ್ ಅಧ್ಯಕ್ಷರಾದ ವಿದ್ಯಾಧರ ಪಾಟೀಲ, ಪ್ರಮುಖರಾದ ಶ್ರೀಮತಿ ಶಾಲಿನಿ ನವಲೂರ, ಶ್ರೀಮತಿ ಜ್ಯೋತಿ ದೊಡ್ಡಮನಿ, ಶ್ರೀಮತಿ ಜಯಶ್ರೀ ಜಗಣ್ಣನವರ,  ಉದಯ್ ದಡೊತಿ, ನಿರ್ಮಲ್ ಕುಮಾರ್ ಹೊಸಪೇಟೆ, ಶ್ರೀಮತಿ ಶಿಲ್ಪಾ ವಿಜಯ್ ಕುಮಾರ್ ಕಾಶಿನ, ನಿವೃತ್ತ ASI ಅಧಿಕಾರಿ  ಶಶಿಧರ್ ಬಳಿಗಾರ, ಪೋಸ್ಟಲ್ ಅಸಿಸ್ಟೆಂಟ್  ಜೀವಂಧರ ಕಾಶಿನ ಹಾಗೂ  ಪ್ರಶಾಂತ ಬಿ ಶೆಟ್ಟಿ ಗೌರವ ಉಪಸ್ಥಿತರಿದ್ದರು.


ಶ್ರೀಮತಿ ಸುಧಾ ಶಿರುಗುಪ್ಪಿ ಸ್ವಾಗತಿಸಿದರು. ದಿಗಂಬರ ಜೈನ್ ಬೋರ್ಡಿಂಗ್‌ನ ವಿದ್ಯಾರ್ಥಿಯೊಬ್ಬರು ಕಾರ್ಯಕ್ರಮ ನಿರೂಪಿಸಿದರು. ಸಮಾಜದ ಗಣ್ಯರು ಹಾಗೂ ಧರ್ಮಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top