ಹಾಸ್ಟೆಲ್ ಜೀವನ ಒಂದು ಮರೆಯಲಾಗದ ಅನುಭವ

Upayuktha
0


ಮನೆಯ ಪ್ರೀತಿಯ ನೆರಳಿನಿಂದ ಹೊರಬಂದು ಹಾಸ್ಟೆಲ್‌ಗೆ ಬಂದಾಗ ಎಲ್ಲವೂ ಹೊಸದಾಗಿರುತ್ತದೆ. ಹೊಸ ಸ್ಥಳ  ಹೊಸ ಮುಖಗಳು ಹೊಸ ವಾತಾವರಣ ಆರಂಭದಲ್ಲಿ ಎಲ್ಲವೂ ಅಪರಿಚಿತವಾಗಿ ಕಾಣುತ್ತದೆ. ಮನೆಯವರನ್ನು ಬಿಟ್ಟು ದೂರವಿರುವುದು ಸ್ವಲ್ಪ ಕಷ್ಟವಾದರೂ ದಿನಗಳು ಕಳೆದಂತೆ ಹಾಸ್ಟೆಲೇ ನಮ್ಮ ಮತ್ತೊಂದು ಮನೆಯಂತೆ ಆಗುತ್ತದೆ.


ಹಾಸ್ಟೆಲ್ ಜೀವನ ನಮಗೆ ಅನೇಕ ವಿಷಯಗಳನ್ನು ಕಲಿಸುತ್ತದೆ. ಮನೆಯಲ್ಲಿ ಅಪ್ಪ ಅಮ್ಮ ಮಾಡಿಕೊಡುತ್ತಿದ್ದ ಸಣ್ಣಪುಟ್ಟ ಕೆಲಸಗಳನ್ನು ಇಲ್ಲಿ ನಾವೇ ಮಾಡಿಕೊಳ್ಳಬೇಕು. ನಮ್ಮ ಬಟ್ಟೆ, ಪುಸ್ತಕ, ಸಮಯ ಮತ್ತು ದಿನಚರಿಯನ್ನು ನಾವೇ ನೋಡಿಕೊಳ್ಳಬೇಕು. ಇದರಿಂದ ನಮ್ಮಲ್ಲಿ ಸ್ವಾವಲಂಬನೆ ಮತ್ತು ಜವಾಬ್ದಾರಿಯ ಗುಣ ಬೆಳೆಯುತ್ತದೆ.


ಹಾಸ್ಟೆಲ್‌ನಲ್ಲಿ ಸಮಯಕ್ಕೆ ಎದ್ದು ಊಟ ಮಾಡಿ ತರಗತಿಗೆ ಹೋಗಿ ಓದಿ ಆಟವಾಡಿ. ಮತ್ತೆ ಸಮಯಕ್ಕೆ ಮಲಗುವ ಅಭ್ಯಾಸ ಬೆಳೆಯುತ್ತದೆ. ನಿಯಮ ಮತ್ತು ಶಿಸ್ತು ನಮ್ಮ ದಿನಚರಿಯ ಒಂದು ಭಾಗವಾಗುತ್ತದೆ. ಸ್ನೇಹಿತರೊಂದಿಗೆ ಸೇರಿ ಓದುವುದು ಮಾತನಾಡುವುದು ಉಳಿದಂತೆ  ಮತ್ತು ಒಬ್ಬರಿಗೊಬ್ಬರು ಸಹಾಯ ಮಾಡುವುದು ಹಾಸ್ಟೆಲ್ ಜೀವನದ ಸುಂದರ ಕ್ಷಣಗಳಾಗಿವೆ.


ಕೆಲವೊಮ್ಮೆ ಮನೆಯ ನೆನಪು ಕಾಡುತ್ತದೆ. ಅಮ್ಮನ ಕೈಯ ಊಟ ಅಪ್ಪನ ಮಾತು ಮನೆಯವರ ಜೊತೆಗಿನ ಸಮಯ ಎಲ್ಲವೂ ನೆನಪಾಗುತ್ತದೆ. ಆದರೆ ಅದೇ ಸಮಯದಲ್ಲಿ ಹಾಸ್ಟೆಲ್‌ನಲ್ಲಿ ಸಿಗುವ ಸ್ನೇಹ ನಗು ಒಡನಾಟ ಮತ್ತು ಹೊಸ ಅನುಭವಗಳು ಮನಸ್ಸಿಗೆ ಸಂತೋಷ ನೀಡುತ್ತವೆ.


ಹಾಸ್ಟೆಲ್ ಜೀವನ ಕೇವಲ ಮನೆಯಿಂದ ದೂರವಿರುವ ಜೀವನವಲ್ಲ ಅದು ನಮ್ಮನ್ನು ಸ್ವಾವಲಂಬಿಗಳಾಗಿ ಜವಾಬ್ದಾರಿಯುತವಾಗಿ ಮತ್ತು ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತೆ ಮಾಡುವ ಒಂದು ಸುಂದರ ಪಾಠಶಾಲೆ.



- ಆಶಾ ಎ ಆರ್ 

ಎಸ್ ಡಿಎಂ ಉಜಿರೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top