ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಪದಾಧಿಕಾರಿಗಳ ಸಭೆ ನಿರ್ಣಯ
ಕಲಬುರಗಿ : ಕಲಬುರ್ಗಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಧರ್ಮಸ್ಥಳದ ಜಿಲ್ಲಾ ಪದಾಧಿಕಾರಿಗಳ ಸಭೆಯು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಜಿಲ್ಲಾ ನಿರ್ದೇಶಕರ ಕಚೇರಿಯ ಮಾತೃಶ್ರೀ ಸಭಾಂಗಣದಲ್ಲಿ ಸೆ 21ರಂದು ನಡೆದು ಗಾಂಧಿ ಜಯಂತಿಯ ಅಂಗವಾಗಿ ಅಕ್ಟೋಬರ್ 8 ರಂದು ಕಲಬುರಗಿಯಲ್ಲಿ "ಗಾಂಧಿ ಸ್ಮೃತಿ - ಬೃಹತ್ ಜನಜಾಗೃತಿ" ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಗಾಂಧೀಜಿ ಅವರ ಜೀವನ ಆದರ್ಶಗಳ ಪ್ರಸಾರ, ದುಶ್ಚಟ ಮುಕ್ತರಾಗಿ ನವಜೀವನ ಪ್ರಾರಂಭಿಸಿದವರ ಸಮ್ಮಿಲನ, ನಶೆಮುಕ್ತ ಭಾರತ ನಿರ್ಮಾಣ ಬೆಸನ ಮುಕ್ತ ಸಮಾಜ ನಿರ್ಮಾಣ ಮಹಿಳಾ ಜಾಗೃತಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ವಿದಾಯಕ ಕಾರ್ಯಕ್ರಮಗಳನ್ನು ಪ್ರತಿಬಿಂಬಿಸಲು ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕರಾದ ದಿನೇಶ್ ಪೂಜಾರಿ ಮಾತನಾಡಿ ಗಾಂಧಿ ಜಯಂತಿ ಆಚರಣೆಯ ಮೂಲಕ ಪರಿವರ್ತನೆಯ ನವ ಸಮಾಜ ನಿರ್ಮಾಣ ಮಾಡಲು ಪ್ರೇರಣೆ ನೀಡುವಂತಾಗಲಿ ಜನಜಾಗೃತಿ ವೇದಿಕೆಯ ಕಾರ್ಯ ಯೋಜನೆಗಳು ಸಮಾಜದಲ್ಲಿ ಉತ್ತಮ ಕಾರ್ಯ ಚಟುವಟಿಕೆ ನಡೆಸುತ್ತಿದ್ದು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ವ್ಯಸನ ಮುಕ್ತ ಸಮಾಜ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ನವಜೀವನೋತ್ಸವ, ನವಜೀವನ ಸಮಿತಿ ಸದಸ್ಯರ ಸಭೆ, ಸ್ವಾಸ್ಯ ಸಂಕಲ್ಪ ಮದ್ಯಪಾನ ಮುಕ್ತಿ ಶಿಬಿರ ನಡೆಸುವ ಯೋಜನೆಗಳ ಕುರಿತು ರೂಪುರೇಷೆ ನಿರ್ಧರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಸಿಎನ್ ಬಾಬಳಗಾಂವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜನಜಾಗೃತಿ ವೇದಿಕೆ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಅನಿಲ್ ಕುಮಾರ್ ಡಾಂಗೆ, ಕೋಶಾಧಿಕಾರಿ ಡಾ. ಸದಾನಂದ ಪೆರ್ಲ, ಚಂದ್ರಶೇಖರ ಕರ್ಜಗಿ, ಪ್ರಭಾವತಿ ಮೇತ್ರೆ, ಡಾ. ಜಯಶ್ರೀ ರೆಡ್ಡಿ ಗೀತಾ ಹತ್ತರಕಿ, ರಾಜಶೇಖರ ನೀಲಂಗಿ ಮತ್ತಿ ತರರು ಸಲಹೆ ನೀಡಿದರು ಈ ಸಂದರ್ಭದಲ್ಲಿ ಸಂಗ್ರಾಮ ಗೌಡ ಪಾಟೀಲ್,ರಾಜೇಶ್ ಅಲಮೇಲ್ಕರ್, ಚಿನ್ನುಸಾಬ್ ಗಫೂರ್ ಸಾಬ್, ಮಲ್ಲಿನಾಥ, ಅಪ್ಪಾ ಸಾಹೇಬ ತೀರ್ಥೇ, ಸೂರ್ಯಕಾಂತ್,ಸಿದ್ದು ಹಿರೇಮಠ ರೇವಣಸಿದ್ದಪ್ಪ ಪಡಶೆಟ್ಟಿ, ರಾಜಕುಮಾರ್, ಶಿವರಾಜ ತಳವಾರ, ವರದ ಸ್ವಾಮಿ ಉಪಸ್ಥಿತರಿದ್ದರು ಯೋಜನಾಧಿಕಾರಿಗಳಾದ ಸಂಗಪ್ಪ ಸಂಗಳದ, ರಾಜ ಫ್ ಅಲಿ ಮೇಲಿನ ಮನಿ ತಾಲೂಕು ವರದಿ ಮಂಡಿಸಿದರು , ಕೇಶವ ಡಿ ಸ್ವಾಗತಿಸಿದರು ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಂಜಿ ವರದಿಯನ್ನು ಮಂಡಿಸಿದರು ರಾಜೇಶ್ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿ ಧನ್ಯವಾದ ಸಲ್ಲಿಸಿದರು.
