ಕಲಬುರಗಿ : ಉದ್ಯಮ ರಂಗದಲ್ಲಿ ಅಪ್ರತಿಮ ಸಾಧನೆ ಮಾಡಿದ ಸತ್ಯನಾಥ ಶೆಟ್ಟಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಹೊಂದಿ ಕಲಬುರಗಿಗೆ ಹೆಮ್ಮೆ ಬಂದಿದೆ ಎಂದು ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹೇಳಿದರು. ಕಲಬುರಗಿ ಹೋಟೆಲ್, ವಸತಿಗೃಹ ಮತ್ತು ಬೇಕರಿ ಮಾಲೀಕರ ಸಂಘದ ಆಶ್ರಯದಲ್ಲಿ ಶನಿವಾರ (ಸೆ.19ರಂದು) ಕಲಬುರಗಿಯ ಸಾರ್ವಜನಿಕ ಉದ್ಯಾನವನದ ಯಾತ್ರಿಕ್ ನಿವಾಸ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ಪ್ರದೇಶ ಹೋಟೆಲ್ ಸಂಘದ ನೂತನ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆ ಆಗಿ ಕಲ್ಯಾಣ ಕರ್ನಾಟಕಕ್ಕೆ ಕೀರ್ತಿ ತಂದ ಶ್ರೇಷ್ಠ ಉದ್ಯಮಿ, ದಾನಿ, ಸಮಾಜ ಸೇವಕ ಸತ್ಯನಾಥ ಶೆಟ್ಟಿ ಎಲ್ಲ ಉದ್ಯಮಿಗಳಿಗೆ ಆದರ್ಶ ಮತ್ತು ಪ್ರೇರಣೆ ಎಂದರು. ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಅಭಿನಂದನಾ ಭಾಷಣ ಮಾಡಿ ಉಡುಪಿ ಜಿಲ್ಲೆಯಲ್ಲಿ ಹುಟ್ಟಿ ಕಲಬುರಗಿಯಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು ಉದ್ಯಮಿಯಾಗಿ ಬೆಳೆದು ಕೃಷಿ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಬೆಳೆದು ಉದ್ಯಮ ರಂಗದ ಬೆಳವಣಿಗೆಗೆ ಪ್ರಯತ್ನಿಸುತ್ತಿದ್ದಾರೆ. ಹೋಟೆಲ್, ಬೇಕರಿ ವಸತಿ ಉದ್ಯಮ ರಂಗದ ಮೂಲಕ ಪ್ರವಾಸೋದ್ಯಮ ರಂಗದ ಅಭಿವೃದ್ಧಿಗೆ ಗಮನೀಯ ಕೊಡುಗೆ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಬೇಬಿ ಮೊಗೇರ, ಉದ್ಯಮಿಗಳಾದ ಸತೀಶ್ ವಿ. ಗುತ್ತೇದಾರ್,ಕಾರ್ಮಿಕ ಇಲಾಖೆಯ ಎಸ್ ಆರ್ ಹಳ್ಳಿಮನೆ ಭಾಷಣ ಮಾಡಿ ಶುಭ ಹಾರೈಸಿದರು. ಸತ್ಯನಾಥ ಶೆಟ್ಟಿ ಅಭಿವಂದನಾ ಭಾಷಣ ಮಾಡಿ ರಾಜ್ಯ ಉಪಾಧ್ಯಕ್ಷ ಸ್ಥಾನವು ಕಲ್ಯಾಣ ಕರ್ನಾಟಕದ ಉದ್ಯಮಿಗಳ ಪ್ರೋತ್ಸಾಹದಿಂದ ಸಿಕ್ಕ ಮನ್ನಣೆ. ಈ ಗೌರವ ಉದ್ಯಮಿಗಳಿಗೆ ಸಲ್ಲುತ್ತದೆ . ಎಲ್ಲರ ಸಹಕಾರದಿಂದ ಇನ್ನಷ್ಟು ಉದ್ಯಮಿ ಸ್ನೇಹಿ ಪೂರಕ ಯೋಜನೆ ರೂಪಿಸಲು ಕೈಜೋಡಿಸಲು ಮನವಿ ಮಾಡಿ ಅಭಿನಂದನೆಗೆ ಅಭಾರಿ ಎಂದರು.ಅಶೋಕ್ ಗುತ್ತೇದಾರ್ ಬಡದಾಳ, ಕಾರ್ಮಿಕ ಇಲಾಖೆಯ ಮೊಹಮ್ಮದ್ ಬಶೀರ್, ಸಂಘದ ಗೌರವಾಧ್ಯಕ್ಷ ರಾಜಶೇಖರ ಶೆಳ್ಳಗಿ, ಶಿವರಾಜ್ ಕೋಟ್ಯಾನ್, ಗಿರಿಧರ್ ಭಟ್, ಸುನಿಲ್ ಶೆಟ್ಟಿ, ಶರಣು ಪಾಟೀಲ್, ಆರ್. ಪಿ. ರೆಡ್ಡಿ, ವೆಂಕಟೇಶ್ ಕಡೇಚೂರ್,ಶರಣಯ್ಯ ಗುತ್ತೇದಾರ ಕೊಂಚೂರ್, ವಿದ್ಯಾಧರ್ ಭಟ್,ದೀಪಕ್ ರಾಯಕರ್ ,ಅರುಣಾಚಾಲ್ ಭಟ್ , ದಯಾನಂದ ಪೂಜಾರಿ,ಮೊಯಿನ್ ಖಾನ್, ಶ್ರೀಧರ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾಕೀರ್ತಿ ಶೆಟ್ಟಿ ಸ್ವಾಗತಿಸಿದರು. ಮಾಲಾ ಕಣ್ಣಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಿ ಎಸ್ ಮಾಲಿ ಪಾಟೀಲ್ ಪ್ರಾರ್ಥಿಸಿದರು. ಅಂಬುಜಾ ಎಂ. ಡಿ ನಿರೂಪಿಸಿ ಧನ್ಯವಾದವಿತ್ತರು.
ಸ್ನೇಹಪರತೆ, ತಾಳ್ಮೆ ಪರಿಶ್ರಮದಿಂದ ನಿಷ್ಠೆಯಿಂದ ಕಾಯಕ ಮಾಡಿ ರಾಜ್ಯಮಟ್ಟದ ಸ್ಥಾನಗೌರವ ಪಡೆದುಕೊಂಡು ದಾನ ಧರ್ಮದ ಮೂಲಕ ವ್ಯಕ್ತಿತ್ವ ಬೆಳೆಸಿ ಈ ಭಾಗದಲ್ಲಿ "ಸತ್ಯಣ್ಣ" ಎಂದೇ ಜನಜನಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೀರ್ತಿ ಎತ್ತರಕ್ಕೆ ಏರಲಿ.
- ಸತೀಶ್ ವಿ ಗುತ್ತೇದಾರ್, ಉದ್ಯಮಿಗಳು, ಕಲಬುರಗಿ.
----------------------
ತ್ರಿವಿಧ ದಾಸೋಹದ ಮೂಲಕ ಸಮಾಜ ಪರ ಸೇವೆ ಮಾಡಿದ ಉದ್ಯಮಿಯ ಅಭಿನಂದನೆ ಕಾರ್ಯಕ್ರಮ ಎಲ್ಲರಿಗೂ ಹರ್ಷ ಮತ್ತು ಪ್ರೇರಣೆ ತಂದಿದೆ.
- ಎಸ್ ಆರ್ ಹಳ್ಳಿಮನೆ, ಕಾರ್ಮಿಕ ಅಧಿಕಾರಿ ಕಲಬುರಗಿ
----------------------
ಪ್ರವಾಸೋದ್ಯಮಕ್ಕೆ ಹೋಟೆಲ್ ಮಾಲೀಕರ ಕೊಡುಗೆ ಅಪಾರ. ಸತ್ಯನಾಥ ಶೆಟ್ಟಿ ನಾಯಕತ್ವದಲ್ಲಿ ಈ ಭಾಗ ಪ್ರವಾಸಿ ನಕ್ಷೆಯಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿ.
- ಶ್ರೀಮತಿ ಬೇಬಿ ಮೊಗೇರ, ಜಂಟಿ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ, ಕಲಬುರಗಿ.
