ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಕುಸ್ತಿ ಪಂದ್ಯಾಟ: ಆಳ್ವಾಸ್‌ಗೆ ಅವಳಿ ಪ್ರಶಸ್ತಿ

Shreya Hegde
0


ಮೂಡುಬಿದಿರೆ : ದಕ್ಷಿಣ ಕನ್ನಡ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕ್ರೀಡಾಪಟುಗಳು ಹುಡುಗರ ಹಾಗೂ ಹುಡುಗಿಯರ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಅವಳಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಹುಡುಗರ ವಿಭಾಗದಲ್ಲಿ 4 ಚಿನ್ನ, 2 ಬೆಳ್ಳಿ ಹಾಗೂ 3 ಕಂಚಿನೊಂದಿಗೆ ಒಟ್ಟು 9 ಪದಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಹುಡುಗಿಯರ ವಿಭಾಗದಲ್ಲಿ 5 ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನೊಂದಿಗೆ ಒಟ್ಟು 10 ಪದಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಸಾಧನೆ ಮಾಡಿದ ಕ್ರೀಡಾಪಟುಗಳ ವಿವರ:

ಹುಡುಗರ ವಿಭಾಗ: 57 ಕೆಜಿ ವಿಭಾಗದಲ್ಲಿ ಪೃಥ್ವಿರಾಜ್ (ಪ್ರಥಮ), 61 ಕೆಜಿಯಲ್ಲಿ ಆಕಾಶ್ (ದ್ವಿತೀಯ), 65 ಕೆಜಿಯಲ್ಲಿ ಅನೂಪ್ (ದ್ವಿತೀಯ), 70 ಕೆಜಿಯಲ್ಲಿ ಪ್ರಣವ್ (ಪ್ರಥಮ) ಹಾಗೂ ರೋಹನ್ ಎಸ್. (ತೃತೀಯ), 74 ಕೆಜಿಯಲ್ಲಿ ರಜತ್ ಬಸು (ಪ್ರಥಮ), 86 ಕೆಜಿಯಲ್ಲಿ ರಿತ್ವಿಕ್ (ಪ್ರಥಮ), 92 ಕೆಜಿಯಲ್ಲಿ ಮಹಮ್ಮದ್ ಶಿಹಾಮ್ ಶಬೀರ್ (ತೃತೀಯ) ಮತ್ತು 97+ ಕೆಜಿ ವಿಭಾಗದಲ್ಲಿ ಕಾರ್ತಿಕ್ (ತೃತೀಯ) ಸ್ಥಾನ ಪಡೆದಿದ್ದಾರೆ.

ಹುಡುಗಿಯರ ವಿಭಾಗ: 50 ಕೆಜಿ ವಿಭಾಗದಲ್ಲಿ ತನುಶ್ರೀ (ದ್ವಿತೀಯ), 53 ಕೆಜಿಯಲ್ಲಿ ಸಿಂಚನಾ (ದ್ವಿತೀಯ), 55 ಕೆಜಿಯಲ್ಲಿ ಗಂಗಮ್ಮ (ಪ್ರಥಮ), 57 ಕೆಜಿಯಲ್ಲಿ ಚಾರ್ವಿ (ತೃತೀಯ), 59 ಕೆಜಿಯಲ್ಲಿ ದೀಪ್ತಿ (ಪ್ರಥಮ), 62 ಕೆಜಿಯಲ್ಲಿ ತೇಜಸ್ವಿನಿ (ಪ್ರಥಮ), 65 ಕೆಜಿಯಲ್ಲಿ ಸ್ಪೂರ್ತಿ (ಪ್ರಥಮ), 68 ಕೆಜಿಯಲ್ಲಿ ಚೈತ್ರಾ (ದ್ವಿತೀಯ), 72 ಕೆಜಿಯಲ್ಲಿ ತ್ರಿಪಾ (ದ್ವಿತೀಯ) ಹಾಗೂ 76 ಕೆಜಿ ವಿಭಾಗದಲ್ಲಿ ನವ್ಯಶ್ರೀ (ಪ್ರಥಮ) ಸಾಧನೆ ಮಾಡಿದ್ದಾರೆ.

ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top