ಸೇವಾ ಕ್ಷೇತ್ರ ಆಸ್ಪತ್ರೆಯಲ್ಲಿ ಎಚ್ ಐ ವಿ ಸೊಂಕು ಇರುವ ರಕ್ತವನ್ನು ರೋಗಿಗಳಿಗೆ ನೀಡುತ್ತಿದೆ ಎಂದು ಖಾಸಗಿ ಸ್ವಾಮ್ಯದ ಸೆಟಲೈಟ್ ಸುದ್ದಿ ವಾಹಿನಿ ನಿರಾಧಾರ ಸುದ್ದಿಯನ್ನು ಕಳೆದ ಮೂರು ದಿನಗಳಿಂದ ನಿರಂತರವಾಗಿ ಪ್ರಸಾರ ಮಾಡುತ್ತಿದೆ.
ಆದರೆ, ಸರ್ಕಾರದ ಅಧಿಕೃತ ಪರವಾನಗಿ ಹೊಂದಿರುವ ರಾಷ್ಟ್ರೂತ್ಥಾನ ಮತ್ತು ಲೈಫ್ ಕೇರ್ ರಕ್ತ ನಿಧಿಯಿಂದ ಪಡೆದ ರಕ್ತವನ್ನು ರೋಗಿಗಳಿಗೆ ನೀಡಲಾಗುತ್ತದೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ರೋಗಿಗೆ ಸುಮಾರು ಎರಡು ವರ್ಷಗಳ ಹಿಂದೆ ನೀಡಿದ ರಕ್ತವು ಎಚ್ ಐ ವಿ ಸೊಂಕು ಹೊಂದಿತ್ತು ಎಂದು ಸದರಿ ರೋಗಿಯ ಹೇಳಿಕೆ ಆಧರಿಸಿ,"ಸಂಪೂರ್ಣ ಸುದ್ದಿ ವಾಹಿನಿ" ಸುದ್ದಿ ಪ್ರಸಾರ ಮಾಡುತ್ತಿದೆ.
ಈಗಾಗಲೇ, ರಾಜ್ಯ ಔಷಧಿ ನಿಯಂತ್ರಣ ಇಲಾಖೆಗೆ ಸೇವಾ ಕ್ಷೇತ್ರ ಆಸ್ಪತ್ರೆ ಲಿಖಿತ ಮಾಹಿತಿ ನೀಡಿದೆ.
ಹೀಗಾಗಿ, ಕೆನರಾ ಬ್ಯಾಂಕ್ ಆರ್ಥಿಕ ನೆರವಿನಿಂದ ಬಡವರಿಗಾಗಿ ನಡೆಸುತ್ತಿರುವ ಸೇವಾ ಕ್ಷೇತ್ರ ಆಸ್ಪತ್ರೆಯ ಹೆಸರಿಗೆ ಕಳಂಕ ತರುವ ಈ ದುರುದ್ದೇಶದಿಂದ ಕೂಡಿದ ವರದಿ ಪ್ರಸಾರ ಮಾಡುತ್ತಿರುವ ಖಾಸಗಿ ಸುದ್ದಿವಾಹಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ ಎಂದು ಸೇವಾ ಕ್ಷೇತ್ರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ನಿರಂಜನ ಗೌಡ, ಪ್ರಧಾನ ವ್ಯವಸ್ಥಾಪಕ ಡಾ. ಕೆ ಎಸ್ ಸುರೇಶ್ ಕಾಮತ್, ಗೌರವ ಕಾರ್ಯದರ್ಶಿ ಆನಂದ ಮುರ್ತಿ ಹಾಗೂ ನರರೋಗ ತಜ್ಞ ಡಾ.ಬಾನುಪ್ರಕಾಶ್ ಜಂಟಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಈಗಾಗಲೇ ವಕೀಲರ ಮೂಲಕ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಸೇವಾ ಕ್ಷೇತ್ರ ಆಸ್ಪತ್ರೆಯ ಆಡಳಿತ ಮಂಡಳಿ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

