ಬಿಜೆಪಿ ಶಿಕ್ಷಣ ಪ್ರಕೋಷ್ಟದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪದಗ್ರಹಣ

Upayuktha
0


ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಪ್ರಕೋಷ್ಟದ ಆರಂಭ ಮತ್ತು ಪ್ರಥಮ ಸಭೆಯು ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ (ಸೆಪ್ಟೆಂಬರ್ 26) ಜರುಗಿತು. ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ಅವರ ಮಾರ್ಗದರ್ಶನದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.


ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದರು. ಜಿಲ್ಲಾ ಸಂಚಾಲಕರಾಗಿ ವಸಂತ ಮಂಜನಾಡಿ ಹಾಗೂ ಸಹ ಸಂಚಾಲಕರಾಗಿ ನಾರಾಯಣ ಗೌಡ ಬಂಟ್ವಾಳ ಅವರು ಅಧಿಕಾರ ವಹಿಸಿಕೊಂಡರು. ಮೂಡಬಿದ್ರೆಯಿಂದ ಸುರೇಶ್ ಭಂಡಾರಿ, ಮಂಗಳೂರು ಉತ್ತರದಿಂದ ವಿನೀತ್ ನಾಯರ್, ಮಂಗಳೂರು ದಕ್ಷಿಣದಿಂದ ಸತ್ಯನಾರಾಯಣ ಭಟ್, ಬೆಳ್ತಂಗಡಿಯಿಂದ ಸುರೇಶ್ ಎಂ. ಎಸ್., ಸುಳ್ಯದಿಂದ ಮನಮೋಹನ್ ಮತ್ತು ಪುತ್ತೂರಿನಿಂದ ರಾಜೇಂದ್ರ ಮಾಸ್ಟರ್ ಅವರು ಪದಾಧಿಕಾರಿಗಳಾಗಿ ಆಯ್ಕೆಯಾದರು. ಜೊತೆಗೆ ಮಂಗಳೂರು ದಕ್ಷಿಣ ಸಂಚಾಲಕರಾಗಿ ಎ. ಕೆ. ಬಾಬು ಹಾಗೂ ಮಂಗಳೂರು ಮಂಡಲ ಸಂಚಾಲಕರಾಗಿ ವಸಂತ್ ರೈ ಬಿ. ಕೆ. ಅವರನ್ನು ನೇಮಿಸಲಾಯಿತು.


ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಬಿಜೆಪಿ ಶಿಕ್ಷಣ ಸಹ ಸಂಚಾಲಕರು ಹಾಗೂ 'ಬಿಜೆಪಿ ಸೇವಾಸಂಕಲ್ಪದ ಬದಲಾವಣೆಯ ಕಥೆ' ಕಾರ್ಯಕ್ರಮದ ರಾಜ್ಯ ಸಹ ಉಸ್ತುವಾರಿ ಎಂ. ಜಿ. ಭಟ್ ಕುಮಟಾ ಅವರು, ಬದಲಾವಣೆಯ ಕಥೆ ಕಾರ್ಯಕ್ರಮದ ಚಟುವಟಿಕೆಗಳಲ್ಲಿ ಪ್ರಕೋಷ್ಟದ ಪ್ರತಿಯೊಬ್ಬ ಸದಸ್ಯರೂ ಸಕ್ರಿಯವಾಗಿ ಭಾಗವಹಿಸಬೇಕೆಂದು ಕರೆ ನೀಡಿದರು. ಅಲ್ಲದೆ ಪ್ರಕೋಷ್ಟದ ಜಿಲ್ಲಾ ಮತ್ತು ಮಂಡಲ ಮಟ್ಟದ ಸಮಿತಿಗಳ ಕಾರ್ಯವೈಖರಿ ಕುರಿತು ಪ್ರಮುಖ ಮಾರ್ಗದರ್ಶನ ನೀಡಿದರು.


ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಟಗಳ ಸಂಯೋಜಕರಾದ ಸುಧೀರ್ ಶೆಟ್ಟಿ ಕಣ್ಣೂರು, ರಾಜ್ಯ ಬಿಜೆಪಿ ಶಿಕ್ಷಣ ಪ್ರಕೋಷ್ಟದ ಸದಸ್ಯರು ಹಾಗೂ ದಕ್ಷಿಣ ಕನ್ನಡ ಶಿಕ್ಷಣ ಪ್ರಕೋಷ್ಟದ ಉಸ್ತುವಾರಿ ಮುರಳಿ ಹೊಸಮಜಲು ಉಪಸ್ಥಿತರಿದ್ದು, ನೂತನ ಸಮಿತಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾ ಸಂಚಾಲಕ ವಸಂತಕುಮಾರ್ ಮಂಜನಾಡಿ ಅವರು ಧನ್ಯವಾದ ಸಮರ್ಪಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top