ಬದಿಯಡ್ಕ: ರಂಗಸಿರಿ ಸಂಸ್ಥೆಯಿಂದ ಉಚಿತ ಯಕ್ಷಗಾನ ತರಬೇತಿ, 13ರಂದು ಉದ್ಘಾಟನೆ

Upayuktha
0


ಬದಿಯಡ್ಕ: ಕಲೆಯ ತವರು ನಾಡು ಕಾಸರಗೋಡಿನ ರಂಗಸಿರಿ ಸಾಂಸ್ಕೃತಿಕ ವೇದಿಕೆ (ರಿ.) ಬದಿಯಡ್ಕ ಸಂಸ್ಥೆಯ ವತಿಯಿಂದ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾರ್ವಜನಿಕರಿಗಾಗಿ ಉಚಿತ ಯಕ್ಷಗಾನ ತರಬೇತಿಯನ್ನು ಆಯೋಜಿಸಲಾಗಿದೆ.


ತರಬೇತಿ ತರಗತಿಗಳ ಉದ್ಘಾಟನಾ ಸಮಾರಂಭವು 2026ರ ಸೆಪ್ಟೆಂಬರ್ 13, ಆದಿತ್ಯವಾರ ಬೆಳಿಗ್ಗೆ 9:30ಕ್ಕೆ ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆ ರಸ್ತೆಯಲ್ಲಿರುವ 'ರಾಮಲೀಲಾ ಕೇಂದ್ರ'ದಲ್ಲಿ ನಡೆಯಲಿದೆ.


ತರಬೇತಿಯ ಪ್ರಮುಖ ಆಕರ್ಷಣೆಗಳು:


ವಯಸ್ಸಿನ ಮಿತಿಯಿಲ್ಲ: ಯಕ್ಷಗಾನ ಕಲಿಯುವ ಆಸಕ್ತಿಯಿರುವ ಪ್ರತಿಯೊಬ್ಬರೂ (ಮಕ್ಕಳಿಂದ ಹಿಡಿದು ಹಿರಿಯರವರೆಗೆ) ಭಾಗವಹಿಸಬಹುದು.


ವೇದಿಕೆ ಪ್ರದರ್ಶನಕ್ಕೆ ಅವಕಾಶ: ತರಬೇತಿ ಪೂರ್ಣಗೊಳಿಸಿದ ಕಲಾವಿದರಿಗೆ ವಿವಿಧ ವೇದಿಕೆ ಪ್ರದರ್ಶನಗಳಲ್ಲಿ ಅಭಿನಯಿಸಲು ಅವಕಾಶ ಕಲ್ಪಿಸಲಾಗುವುದು.


ವಿಶೇಷ ಕಾರ್ಯಾಗಾರಗಳು: ಕಲಿಯುವ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ವಿವಿಧ ಯಕ್ಷಗಾನ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ.


ಆಸಕ್ತರು ಗೂಗಲ್ ಫಾರ್ಮ್ ಲಿಂಕ್ (https://forms.gle/fkvfdDAGA1wgomui9) ಮೂಲಕ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ತರಗತಿಗೆ ಸೇರ್ಪಡೆಗೊಳ್ಳಲು 9633876833 ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top