ಧರ್ಮತ್ತಡ್ಕ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಸೆಪ್ಟೆಂಬರ್ ತಿಂಗಳ ಸಾಮಾನ್ಯ ಸಭೆಯು ಸೆಪ್ಟೆಂಬರ್ 6 ರಂದು ಸಂಜೆ ಧರ್ಮತ್ತಡ್ಕದ ವಲಯ ಕಚೇರಿಯಲ್ಲಿ ನಡೆಯಿತು.
ಧ್ವಜಾರೋಹಣ, ಗುರುವಂದನೆ, ಗೋಸ್ತುತಿ ಹಾಗೂ ಅರ್ಧನಾರೀಶ್ವರ ಸ್ತೋತ್ರ ಪಠಣದೊಂದಿಗೆ ಸಭೆಯು ಆರಂಭವಾಯಿತು. ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ವಹಿಸಿದ್ದರು. ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕಾನ ಗತಸಭೆಯ ವರದಿ ಮಂಡಿಸಿ, ಮಂಡಲದ ಸೂಚನೆಗಳನ್ನು ವಾಚಿಸಿದರು. ಲೇಖ ವಿಭಾಗದ ಮುಖ್ಯಸ್ಥ ಹಳ್ಳಕೋಡ್ಲು ಗೋವಿಂದ ಭಟ್ ಲೆಕ್ಕಪತ್ರ ಮಂಡಿಸಿದರು.
ಅನ್ನಬ್ರಹ್ಮ ಚಾತುರ್ಮಾಸ್ಯ ಸೇವೆ: ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತಕ್ಕೆ ವಲಯದಿಂದ ಇದುವರೆಗೆ 65 ಶಿಷ್ಯರು ಭಾಗವಹಿಸಿದ್ದು, ಬೇಳೆಕಾಳು, ತರಕಾರಿ, ತುಳಸಿ ಮುಂತಾದ ಸುವಸ್ತುಗಳನ್ನು ಸಮರ್ಪಿಸಲಾಗಿದೆ. ಸೆಪ್ಟೆಂಬರ್ 26 ರವರೆಗೆ ವ್ರತ ಮುಂದುವರಿಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ಹಾಗೂ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಲಾಯಿತು.
ಆಗಸ್ಟ್ 25 ರಂದು ಪಾದಪೂಜೆ: ವಲಯದಿಂದ ಆಗಸ್ಟ್ 25 ರಂದು ನಡೆದ ಪಾದಪೂಜೆ ಮತ್ತು ಭಿಕ್ಷಾಸೇವೆಯಲ್ಲಿ 45 ಶಿಷ್ಯರು ಭಾಗವಹಿಸಿದ್ದರು.
ಸ್ವಯಂಸೇವೆ ಹಾಗೂ ವೇದಪೋಷಕ ಅಭಿಯಾನ: ಸೆಪ್ಟೆಂಬರ್ 16 ರಿಂದ 22 ರವರೆಗೆ ನಡೆಯಲಿರುವ ಮುಳ್ಳೇರಿಯ ಮಂಡಲದ ಸ್ವಯಂಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ತೀರ್ಮಾನಿಸಲಾಯಿತು. ವೇದಪೋಷಕ ಅಭಿಯಾನ ಮತ್ತು ಪ್ರತಿ ಮನೆಯಿಂದ ಮುಷ್ಟಿ ಭಿಕ್ಷೆ ಸಂಗ್ರಹಿಸಿ ಪ್ರತಿ ತಿಂಗಳ 10ರ ಒಳಗಾಗಿ ತಲುಪಿಸುವಂತೆ ಸೂಚಿಸಲಾಯಿತು.
ಮಠದ ಜಾಗದ ರಕ್ಷಣೆ: ಪೊಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರ ಸಮಿತಿಯ ಅಧ್ಯಕ್ಷ ಶಂಕರ ರಾವ್ ಕಕ್ವೆ ಉಪಸ್ಥಿತರಿದ್ದು, ಪೊಸಡಿಗುಂಪೆಯ ಅಭಿವೃದ್ಧಿ ಕಾರ್ಯಗಳು ಹಾಗೂ ಮಠದ ಜಾಗವನ್ನು ರಕ್ಷಿಸಿಕೊಳ್ಳುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ ಮತ್ತು ಶ್ರದ್ಧಾಂಜಲಿ:
BAMS ಆಯುರ್ವೇದ ವೈದ್ಯಕೀಯ ಶಿಕ್ಷಣದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ನೇರೋಳು ರಾಮಚಂದ್ರ ಭಟ್ಟ ಮತ್ತು ವಿದ್ಯಾಸರಸ್ವತಿ ದಂಪತಿಯ ಪುತ್ರ ಪ್ರಣವ ಕುಮಾರ್ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಇತ್ತೀಚೆಗೆ ನಿಧನರಾದ ಪಾವಲುಕೋಡಿ ಸರಸ್ವತಿ ಅಮ್ಮ ಅವರ ಆತ್ಮಕ್ಕೆ ಶಾಂತಿ ಕೋರಿ ರಾಮತಾರಕ ಮಂತ್ರ ಪಠಿಸಲಾಯಿತು.
ರಾಮತಾರಕ ಮಂತ್ರ, ಶಾಂತಿಮಂತ್ರ ಮತ್ತು ಧ್ವಜಾವರೋಹಣದೊಂದಿಗೆ ಸಭೆಯು ಸಂಪನ್ನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


