ಭಾರತೀಯ ವಾಸ್ತುಶಿಲ್ಪಿಗಳ ಸಂಸ್ಥೆ: ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಭರತ್ ಭೂಷಣ್ ಆಯ್ಕೆ

Upayuktha
0

ಕಲಬುರಗಿ: ಭಾರತೀಯ ವಾಸ್ತುಶಿಲ್ಪಿಗಳ ಸಂಸ್ಥೆಯ ಕರ್ನಾಟಕ ಚಾಪ್ಟರ್ ನ ಕಲಬುರಗಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಭರತ್ ಭೂಷಣ್ ಬೋಳಬಂಡಿ ಹಾಗೂ ಗೌರವ ಕಾರ್ಯದರ್ಶಿಗಳಾಗಿ ಮಹಮ್ಮದ್ ಅಬ್ದುಲ್ ಮಜೀದ್ ಆಯ್ಕೆ ಹೊಂದಿದ್ದಾರೆ.


ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಸಂಸ್ಥೆಯ ಮಹಾಸಭೆಯಲ್ಲಿ 2026- 28 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಭರತ್ ಭೂಷಣ್ ಬೋಳಬಂಡಿ (ಅಧ್ಯಕ್ಷರು) ಮೊಹಮ್ಮದ್ ಅಸಾದುಲ್ಲಾಖಾನ್ (ಉಪಾಧ್ಯಕ್ಷರು) ಮೊಹಮ್ಮದ್ ಅಜಾದ್ ಮಜೀದ್ ಮಣಿಯಾರ್ (ಗೌರವ (ಕಾರ್ಯದರ್ಶಿ)ರವೀಂದ್ರ ಎಸ್ ತೆಗನೂರು (ಖಜಾಂಚಿ), ಹಾಗೂ ಬಸವರಾಜ್ ಡಿ ಕಣ್ಣಿ, ದೇವಣಿ ಮಲ್ಲಿನಾಥ ಶಶಿಕಾಂತ್, ಹರಸಣಗಿ ತೇಜಲಿಂಗ, ಕೇದಾರ ಕಿಣಗಿ ಹಾಗೂ ಮೊಹಮ್ಮದ್ ಖದೀರ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಾಗೂ ವಾಸ್ತು ಶಿಲ್ಪಿ ಆಶೀಶ್ ದೇಶಮುಖ್ ಕರ್ನಾಟಕ ಚಾಪ್ಟರ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.


ವಾಸ್ತುಶಿಲ್ಪ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಬೇಡಿಕೆಗಳಿಗೆ ಅನುಗುಣವಾಗಿ ವಾಸ್ತು ಶಿಲ್ಪ ವಿನ್ಯಾಸ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿದ್ದು ಅದರ ಪ್ರಯೋಜನ ಸಾರ್ವಜನಿಕರಿಗೆ ಸಿಗುವಂತಾಗಲು ಸಂಸ್ಥೆಯ ಕಡೆಯಿಂದ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ವಾಸ್ತುಶಿಲ್ಪ ತಜ್ಞರ ನೈಪುಣ್ಯತೆಯನ್ನು ಬಳಸಿ ಹೊಸ ಹೊಸ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಆಯೋಜನೆ ಮಾಡಿ ಅದರ ಪ್ರಯೋಜನ ಎಲ್ಲರಿಗೂ ವಿಸ್ತರಿಸುವಂತೆ ಮಾಡಲಾಗುವುದು. ಕರ್ನಾಟಕದಲ್ಲಿ ಬೆಳಗಾವಿ ಮಂಗಳೂರು ಮಣಿಪಾಲ ಹುಬ್ಬಳ್ಳಿ ಧಾರವಾಡ ಕಲಬುರಗಿ ಮೈಸೂರು ಹಾಗೂ ವಿಜಯಪುರ ಹೀಗೆ ಒಟ್ಟು ಆರು ಕೇಂದ್ರಗಳಿವೆ. ಕಲಬುರಗಿ ಕೇಂದ್ರವು ಬೀದರ್, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನು ಹೊಂದಿದೆ ಎಂದು ನೂತನ ಅಧ್ಯಕ್ಷರಾಗಿ ಆಯ್ಕೆ ಹೊಂದಿದ ಭರತ್ ಭೂಷಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top