ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಶಾಲಾ ದತ್ತು ಸ್ವೀಕಾರ

Upayuktha
0

ಒಂದು ದಿನದ ಸಮುದಾಯ ಸೇವಾ ಶಿಬಿರ




ಮಂಗಳೂರು: ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಶ್ರೀ ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುರ್ನಾಡು, ಮುಡಿಪು ಶಾಲೆಯನ್ನು ದತ್ತು ಸ್ವೀಕರಿಸುವ ಕಾರ್ಯಕ್ರಮ ಹಾಗೂ ಒಂದು ದಿನದ ಸಮುದಾಯ ಸೇವಾ ಶಿಬಿರ ಶನಿವಾರ (ಆ.29) ನಡೆಯಿತು. ವಿದ್ಯಾರ್ಥಿಗಳಲ್ಲಿ ಸಮುದಾಯ ಸೇವೆ, ಸಾಮಾಜಿಕ ಜವಾಬ್ದಾರಿ ಹಾಗೂ ಸಮಾಜದೊಂದಿಗೆ ಬಾಂಧವ್ಯವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮ ಕಾಲೇಜಿನ ಪ್ರಾರ್ಥನೆಯಿಂದ ಆರಂಭಗೊಂಡಿತು. ಎಲ್ಲರ ಸಮ್ಮುಖದಲ್ಲಿ ಕಾಲೇಜು ಮತ್ತು ಶಾಲೆಯ ಮುಖ್ಯಸ್ಥರ ನಡುವೆ ದತ್ತು ಸ್ವೀಕಾರದ ಒಪ್ಪಂದ ಪತ್ರಕ್ಕೆ ಸಹಿ ಮತ್ತು ಒಪ್ಪಂದ ಪತ್ರದ ವಿನಿಮಯದ ಮೂಲಕ ಶ್ರೀ ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಅಧಿಕೃತವಾಗಿ ದತ್ತು ಸ್ವೀಕರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ವಸಂತಿ ಪಿ. ಅವರು ಸಂತಸ ವ್ಯಕ್ತಪಡಿಸಿ, ಈ ಕಾರ್ಯಕ್ರಮವು ಶಾಲೆಯ ಇತಿಹಾಸದಲ್ಲಿ ಸ್ಮರಣೀಯ ಕ್ಷಣವಾಗಿ ಉಳಿಯಲಿದೆ ಎಂದು ತಿಳಿಸಿದರು.

 .

ಶ್ರೀ ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ಗಣೇಶ್ ನಾಯಕ್ ಅವರು ಈ ಮಹತ್ವದ ಕಾರ್ಯಕ್ರಮವನ್ನು ಕೈಗೆತ್ತಿಕೊಂಡ ಎಸ್‌ ಸಿ ಎಸ್ ಪ್ರಥಮ ದರ್ಜೆ ಕಾಲೇಜಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾನ್ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಶಾಲಾ ದತ್ತು ಸ್ವೀಕಾರದ ಮಹತ್ವ ಹಾಗೂ ಸಮುದಾಯದ ಅಭಿವೃದ್ಧಿಗೆ ಸಂಸ್ಥೆಯ ಬದ್ಧತೆಯ ಕುರಿತು ಮಾತನಾಡಿದರು. ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಶ್ರೀಮತಿ ಸುಮನ ಸೋಮಪ್ಪ ಕಾರ್ಯಕ್ರಮದ ಆಶ್ರಯ, ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು.


ಪರಿಸರ ಜವಾಬ್ದಾರಿ ಹಾಗೂ ಎರಡು ಶಿಕ್ಷಣ ಸಂಸ್ಥೆಗಳ ನಡುವಿನ ಬಾಂಧವ್ಯದ ಸಂಕೇತವಾಗಿ ಸಸ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು. ಅಲ್ಲದೆ ಕಾರ್ಯಕ್ರಮದ ಸ್ಮರಣಾರ್ಥವಾಗಿ ಶಾಲಾ ಆವರಣದಲ್ಲಿ ಒಂದು ಸಸಿಯನ್ನು ನೆಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಟ್ರಸ್ಟಿ ಸದಸ್ಯರಾದ ಶ್ರೀನಾಥ್, ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕಿ ಕಾವ್ಯಶ್ರೀ ಮತ್ತು ರೋವರ್ಸ್ ಮತ್ತು ರೇಂಜರ್ಸ್ ನ ಸಂಯೋಜಕಿ ಶಾಯಿಮ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ತಿಲಕ್ ಗೌಡ ಸ್ವಾಗತ ಭಾಷಣ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಚಿತ್ರ ಪಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಿಬಿಎ ವಿಭಾಗದ ವಿದ್ಯಾರ್ಥಿ ಶಶಾಂಕ್ ವಂದಿಸಿದರು.


ನಂತರ ಶಾಲಾ ಮಕ್ಕಳಿಗಾಗಿ ವಿವಿಧ ಮನರಂಜನಾ ಆಟಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಯಿತು. ಇದರಿಂದ ಮಕ್ಕಳಿಗೆ ಸಂತೋಷದಾಯಕ ಹಾಗೂ ಪರಸ್ಪರ ಸಂವಹನದ ಅನುಭವ ದೊರೆಯಿತು.


ನಂತರ ಶಾಲಾ ಆವರಣದಲ್ಲಿ ಶ್ರಮದಾನ ಕೆಲಸವನ್ನು ನಡೆಸಲಾಯಿತು. ತರಕಾರಿ ತೋಟವನ್ನು ನಿರ್ಮಿಸುವ ಉದ್ದೇಶದಿಂದ ಸ್ಥಳವನ್ನು ಸಿದ್ಧಪಡಿಸಿ, ಅಗತ್ಯವಾದ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಯಿತು. ಈ ಚಟುವಟಿಕೆಯು ವಿದ್ಯಾರ್ಥಿಗಳಲ್ಲಿ ತಂಡದ ಕಾರ್ಯ, ಸೇವಾ ಮನೋಭಾವ, ಪರಿಸರ ಜಾಗೃತಿ ಹಾಗೂ ಸಾಮೂಹಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಸಹಕಾರಿಯಾಯಿತು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top