ರೇಡಿಯೊ ಮಣಿಪಾಲದಲ್ಲಿ ನಾಳೆ (ಆ.20) ‘ಗ್ರಾಹಕ ಜಾಗೃತಿ’ ಸರಣಿಯ 8ನೇ ಸಂಚಿಕೆ ಪ್ರಸಾರ

Upayuktha
0


ಮಣಿಪಾಲ: ಇಲ್ಲಿನ ಮಾಹೆಯ ಎಂ.ಐ.ಸಿ ಕ್ಯಾಂಪಸ್‌ನಲ್ಲಿರುವ ಸಮುದಾಯ ಬಾನುಲಿ ಕೇಂದ್ರ ‘ರೇಡಿಯೊ ಮಣಿಪಾಲ್ 90.4 Mhz’ ಅರ್ಪಿಸುವ ‘ಗ್ರಾಹಕ ಜಾಗೃತಿ’ ಸರಣಿ ಕಾರ್ಯಕ್ರಮದ 8ನೇ ಸಂಚಿಕೆಯು ಆಗಸ್ಟ್ 20ರ ಗುರುವಾರ ಸಂಜೆ 4.15ಕ್ಕೆ ಪ್ರಸಾರವಾಗಲಿದೆ.


ಈ ವಿಶೇಷ ಸಂಚಿಕೆಯಲ್ಲಿ ಉಡುಪಿಯ ಬಳಕೆದಾರರ ವೇದಿಕೆಯ ವಿಶ್ವಸ್ಥರಾದ ನಿಡುವಜೆ ರಾಮ ಭಟ್ ಅವರು ಭಾಗವಹಿಸಿ ಗ್ರಾಹಕ ಹಕ್ಕುಗಳು ಹಾಗೂ ಜಾಗೃತಿಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ನೀಡಲಿದ್ದಾರೆ. ಈ ಕಾರ್ಯಕ್ರಮದ ಮರುಪ್ರಸಾರವು ಆಗಸ್ಟ್ 21ರ ಶುಕ್ರವಾರ ಮಧ್ಯಾಹ್ನ 12.15ಕ್ಕೆ ಪ್ರಸಾರವಾಗಲಿದೆ.


ರೇಡಿಯೊ ಮಾತ್ರವಲ್ಲದೆ, ದೂರವಾಣಿ ಬಳಕೆದಾರರು ಆಂಡ್ರಾಯ್ಡ್ ಹಾಗೂ ಐಫೋನ್ ಲಿಂಕ್‌ಗಳ ಮೂಲಕ ‘ರೇಡಿಯೊ ಮಣಿಪಾಲ್’ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಕಾರ್ಯಕ್ರಮವನ್ನು ಆಲಿಸಬಹುದಾಗಿದೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top