ಮಣಿಪಾಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಈ ಹಿಂದೆ ಮಂಗಳೂರು ವಿಭಾಗ ಸೇವಾ ಪ್ರಮುಖರಾಗಿ, ಉಡುಪಿ ಜಿಲ್ಲಾ ಕಾರ್ಯವಾಹರಾಗಿ ಕಾರ್ಯನಿರ್ವಹಿಸಿದ್ದ ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತ ಕೇಶವರಾಯ ಪ್ರಭು (80 ವರ್ಷಗಳು) ವಿಧಿವಶರಾಗಿದ್ದಾರೆ.
ಮಣಿಪಾಲದ ಹುಡ್ಕೋ ಕಾಲನಿಯ ನಿವಾಸಿಯಾಗಿದ್ದ ಕೇಶವರಾಯ ಪ್ರಭು ಇವರು ದಿನಾಂಕ 19 ಆಗಸ್ಟ್ 2026 ಬುಧವಾರದಂದು ಸಂಜೆ ದೈವಾಧೀನರಾದರು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಸ್ವಯಂನಿವೃತ್ತಿ ಪಡೆದು ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ಉಡುಪಿ ಜಿಲ್ಲಾ ಕಾರ್ಯವಾಹರಾಗಿ, ಮಂಗಳೂರು ವಿಭಾಗದ ಸೇವಾಪ್ರಮುಖರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಕುಂದಾಪುರದ ಸೇವಾ ಸಂಗಮದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕುಶಲ ಸಂಘಟಕರಾಗಿದ್ದ ಅವರು ಉಡುಪಿಯ ಪರ್ಯಾಯ ಮಹೋತ್ಸವದ ಸಂದರ್ಭಗಳಲ್ಲಿ ವಸತಿ ವ್ಯವಸ್ಥೆಯ ನಿರ್ವಹಣೆ ಮಾಡುತ್ತಿದ್ದು, ಅದಮಾರು ಮಠದ ಪರ್ಯಾಯದ ಸಂದರ್ಭದಲ್ಲಿ ಕೃಷ್ಣಾನುಗ್ರಹ ಪ್ರಶಸ್ತಿಯಿಂದ ಸನ್ಮಾನಿತರಾಗಿದ್ದರು. ಸಮಾಜಸೇವೆಗೆ ಮುಡಿಪಾಗಿದ್ದ ಅವರ ಜೀವನ ಎಲ್ಲರಿಗೂ ಪ್ರೇರಣಾದಾಯಿ.
ಶ್ರೀಯುತರು ಮಂಗಳೂರಿನ ಸಂಘ ನಿಕೇತನದ ಕಾರ್ಯದರ್ಶಿ ಶ್ರೀ ತೋನ್ಸೆ ಗಜಾನನ ಪೈ ಅವರ ಮಾವ ಮತ್ತು ಅವರ ಪ್ರಥಮ ಪುತ್ರಿಯಾಗಿರುವ ಶ್ರೀಮತಿ ಸುಮತಿ ಪೈ ಯವರು, ಕುಟುಂಬ ಪ್ರಬೋಧನ ಕರ್ನಾಟಕ ದಕ್ಷಣ ಪ್ರಾಂತದ ಟೋಳಿ ಸದಸ್ಯರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

