ಮನಸ್ಸಿನ ಶಾಂತಿ ಮತ್ತು ಯಶಸ್ವಿ ಜೀವನ

Upayuktha
0


ನೀವು ಎಂದಾದರೂ ಕುದಿಯುವ ನೀರಿನಲ್ಲಿ ನಿಮ್ಮ ಪ್ರತಿಬಿಂಬವನ್ನು ನೋಡಿದ್ದೀರಾ? ಖಂಡಿತ ಇಲ್ಲ. ಏಕೆಂದರೆ ಕುದಿಯುವಾಗ ನೀರು ಸದಾ ಅಲೆದಾಡುತ್ತಿರುತ್ತದೆ, ಜೊತೆಗೆ ಪಾತ್ರೆಯ ತಳವೂ ಬಿಸಿಯಾಗಿರುತ್ತದೆ. ಆದರೆ ನೀರು ಶಾಂತವಾಗಿದ್ದಾಗ ಮಾತ್ರ ನಮ್ಮ ಪ್ರತಿಬಿಂಬವು ಸ್ಪಷ್ಟವಾಗಿ ಮತ್ತು ನಿಶ್ಚಲವಾಗಿ ಕಾಣಿಸುತ್ತದೆ. ನಮ್ಮ ಆಲೋಚನೆಗಳ ಸ್ಥಿತಿಯೂ ತೀರಾ ಹೀಗೆಯೇ.


ಕೋಪ ಅತಿಯಾದಾಗ ನಮಗೆ ನಮ್ಮ ಮೇಲೆಯೇ ನಿಯಂತ್ರಣವಿರುವುದಿಲ್ಲ. ಅತಿಯಾಗಿ ಚಿಂತಿಸಿ, ಕೋಪದಿಂದ ವರ್ತಿಸಿದಾಗ ನಮ್ಮ ತಪ್ಪು ನಮಗೇ ಅರ್ಥವಾಗುವುದಿಲ್ಲ. ಮನಸ್ಸು ಉಗ್ರಗೊಳ್ಳಲು ಶಾಂತಿಯ ಅಭಾವ ಮತ್ತು ಉದ್ವೇಗದಲ್ಲಿ ವೈಚಾರಿಕತೆಯನ್ನು ಮರೆಯುವುದೇ ಮುಖ್ಯ ಕಾರಣ. ಇದಕ್ಕೆ ಸೂಕ್ತ ಪರಿಹಾರವೆಂದರೆ—ಸಂಚಲನಗೊಂಡ ಮನಸ್ಸನ್ನು ಪ್ರಶಾಂತಗೊಳಿಸುವುದು, ನಿಧಾನವಾಗಿ ದೀರ್ಘ ಉಸಿರಾಟ ನಡೆಸಿ, ಪ್ರಶಾಂತ ಮನಸ್ಥಿತಿಯಿಂದ ಮಾತನಾಡುವುದು. ಹೀಗೆ ಮಾಡಿದಾಗ ಕೋಪ ತಾನಾಗಿಯೇ ಶಮನವಾಗುತ್ತದೆ. ನೀವು ಬದಲಾದರೆ, ನಿಮ್ಮ ವ್ಯಕ್ತಿತ್ವವೂ ಸಕಾರಾತ್ಮಕವಾಗಿ ಬದಲಾಗುತ್ತದೆ.


ಇಂದಿನ ಶೇಕಡಾ 90ಕ್ಕೂ ಹೆಚ್ಚು ಜನರ ಹಣಕಾಸಿನ ಸಮಸ್ಯೆಗಳಿಗೆ ಸೋಮಾರಿತನ, ಬೇಜವಾಬ್ದಾರಿ ಮತ್ತು ದುಂದುವೆಚ್ಚವೇ ಪ್ರಮುಖ ಕಾರಣ. ಮನಸ್ಸಿನಲ್ಲಿ ಸದಾ ಒಳ್ಳೆಯ ವಿಚಾರಗಳಿರಲಿ, ಆದರೆ ದುಂದುವೆಚ್ಚ ಹಾಗೂ ಭೋಗಜೀವನದ ದುರಾಸೆ ಕಡಮೆಯಿರಲಿ. ಅತಿಯಾಗಿ ಸಂಪಾದಿಸಿದಾಗ ಹಣವೇ ನಮ್ಮನ್ನು ಆಳಲು ಮತ್ತು ಅನಗತ್ಯವಾಗಿ ಖರ್ಚು ಮಾಡಿಸಲು ಯತ್ನಿಸುತ್ತದೆ. ಆದ್ದರಿಂದ ಯಾರ ಮೇಲೆಯೂ ಅವಲಂಬಿತರಾಗದೆ, ಯಾರಿಂದಲೂ ಏನನ್ನೂ ನಿರೀಕ್ಷಿಸದೆ "ಕಾಯಕವೇ ಕೈಲಾಸ" ಎಂಬ ತತ್ತ್ವದಂತೆ ನಿಮ್ಮ ಕೆಲಸವನ್ನು ನೀವು ಮಾಡುತ್ತಾ ಸಾಗಿ.


ನೆನಪಿಡಿ, ಜೀವನದಲ್ಲಿ ಕೆಟ್ಟ ಘಳಿಗೆಗಳು ಶಾಶ್ವತವಾಗಿ ಉಳಿಯುವುದಿಲ್ಲ, ಆದರೆ ಕೆಟ್ಟ ಮನಸ್ಥಿತಿಯ ಜನರು ಇದ್ದೇ ಇರುತ್ತಾರೆ. ಸದ್ವಿಚಾರಗಳೊಂದಿಗೆ ಮುನ್ನಡೆಯುವುದೇ ಜೀವನ.


– ಶ್ರೀಧರ ರಾಯಸಂ

ಗಿರಿನಗರ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top