ತಾಂತ್ರಿಕ, ಔದ್ಯೋಗಿಕ ಕೌಶಲಗಳ ಜತೆಗೆ ಶೈಕ್ಷಣಿಕ ನೈತಿಕತೆ ಕಾಯ್ದುಕೊಳ್ಳಿ: ಡಾ. ಡೇಮಿಯನ್ ಎ. ಡಿ ಮೆಲ್ಲೋ
ಮಂಗಳೂರು: ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು ಶೈಕ್ಷಣಿಕ, ತಾಂತ್ರಿಕ, ಔದ್ಯೋಗಿಕ ಕೌಶಲಗಳಿಗೆ ಆದ್ಯತೆ ನೀಡುವುದರ ಜತೆಗೆ ಶೈಕ್ಷಣಿಕ ನೈತಿಕತೆ ಕಾಯ್ದುಕೊಳ್ಳಬೇಕು. ಸಂವಹನ ಕೌಶಲಗಳೊಂದಿಗೆ ವೃತ್ತಿಪರತೆ ಬೆಳೆಸಿಕೊಂಡು ಜ್ಞಾನ, ವಿಜ್ಞಾನ ವಿಷಯಗಳೊಂದಿಗೆ ಅಪ್ ಡೇಟ್ ಆಗುತ್ತಿರಬೇಕು ಎಂದು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಡೇಮಿಯನ್ ಆಂಟನಿ ಡಿ ಮೆಲ್ಲೋ ಹೇಳಿದರು.
ಅವರು ಕಾಲೇಜಿನ ಡಾ. ಪಿ.ದಯಾನಂದ ಪೈ -ಪಿ. ಸತೀಶ್ ಪೈ ಅಡಿಟೋರಿಯಂನಲ್ಲಿ ರವಿವಾರ ಜರಗಿದ 2026-27 ನೇ ಸಾಲಿನ ಹೊಸ ಇಂಜಿನಿಯರಿಂಗ್ ಬ್ಯಾಚ್ ವಿದ್ಯಾರ್ಥಿಗಳ ಪ್ರವೇಶೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೈಕ್ಷಣಿಕ ಚಟುವಟಿಕೆಗಳ ಪಕ್ಷಿನೋಟವನ್ನು ನೀಡಿದ ಅವರು ಹೊಸ ಬ್ಯಾಚಿನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಗಣ್ಯರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಡಾ. ಪ್ರಿಯಾ ವಿ. ಫ್ರ್ಯಾಂಕ್ ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ಅಗತ್ಯವಿರುವ ಶೈಕ್ಷಣಿಕ ಸಲಹೆ, ಮಾರ್ಗದರ್ಶನವನ್ನು ನೀಡಿದರು. ಪರೀಕ್ಷಾ ವಿಭಾಗದ ಡಾ. ಉದಯ್ ಕುಮಾರ್ ಶೆಣೈ, ತರಬೇತಿ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥ ಪ್ರಶಾಂತ್ ಕುಮಾರ್ ಎ ವಿದ್ಯಾರ್ಥಿಗಳಿಗೆ ವಿಭಾಗದ ಮಹತ್ವ ಮತ್ತು ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳು, ವಿವಿಧ ಸ್ಪರ್ಧೆಗಳ ವಿಜೇತರನ್ನು ಗೌರವಿಸಲಾಯಿತು.
ತರಬೇತಿ ಮತ್ತು ನೇಮಕಾತಿ ವಿಭಾಗದ ಡೀನ್ ಡಾ.ಹೆಚ್. ಮನೋಜ್ ಗಡಿಯಾರ್, ಎಕ್ರೆಡಿಟೇಶನ್ ಡೀನ್ ಡಾ. ವೆಂಕಟೇಶ್ ಎನ್, ವಿಜ್ಞಾನ ಮತ್ತು ಮಾನವಿಕ ವಿಭಾಗದ ಮುಖ್ಯಸ್ಥ ಡಾ. ನುರ್ಗೆಮಾರ್ ಸತೀಶ್ ಕುಮಾರ್, ಸಹಿತ ವಿವಿಧ ವಿಭಾಗ ಮುಖ್ಯಸ್ಥರುಗಳು, ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು ಮತ್ತು ಹೆತ್ತವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ವಿಜ್ಞಾನ ಮತ್ತು ಮಾನವಿಕ ವಿಭಾಗದ ಸಂಯೋಜಕಿ ಡಾ. ಪ್ರಮೀಳಾ ಕೊಳಕೆ ಪರಿಯಚಯದೊಂದಿಗೆ ಸ್ವಾಗತಿಸಿದರು. ವಿಭಾಗದ ಸಹ ಪ್ರಾಧ್ಯಾಪಕಿ ಶ್ರೇಯಾ ಭಕ್ತ ಕೆ. ಕಾರ್ಯಕ್ರಮ ನಿರೂಪಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಯಾರೆಲ್ ಡಿ ಮೆಲ್ಲೋ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

